ಕುಸುಮಾಂಜಲಿ

Author : ಲಲಿತಾ ಬೆಳವಾಡಿ

Pages 144




Published by: ಹೆಚ್.ಎಸ್. ಆರ್.ಎ.ಪ್ರಕಾಶನ
Address: #2, ಶ್ರೀ ಅನ್ನಪೂರ್ಣೇಶ್ವರಿ ನಿಲಯ, 1ನೇ ಮುಖ್ಯರಸ್ತೆ, ಭೈರವೇಶ್ವರ ನಗರ, ಲಗ್ಗೆರೆ, ಬೆಂಗಳೂರು- 560 058
Phone: 7892293054

Synopsys

ಲಲಿತಾ ಎಸ್ ಬೆಳವಾಡಿಯವರು ಹಲವು ಲೇಖಕಿಯರಿಂದ ಬರೆಸಿದ ಅಮ್ಮನ ಬಗೆಗಿನ ಲೇಖನಗಳ ಸಂಗ್ರಹ "ಕುಸುಮಾಂಜಲಿ" .ಸಾಮಾನ್ಯವಾಗಿ ಹೆಣ್ಣುಮಕ್ಕಳು ತಂದೆಗೆ ಹತ್ತಿರವಾದರೆ , ಗಂಡುಮಕ್ಕಳು ತಾಯಿಗೆ ಹತ್ತಿರವಾಗುತ್ತಾರೆ. ಪ್ರಚಲಿತವಾಗಿ ಚಾಲ್ತಿಯಲ್ಲಿ ಇರುವಾಗ.. ಕಥಾಸಂಕಲನ ದಲ್ಲಿರುವ ಲೇಖನಗಳನ್ನು ಓದಿದಾಗ ಹೆಣ್ಣು ಮಕ್ಕಳು ಕೂಡ ಅಮ್ಮಂದಿರ ಬಗ್ಗೆ ತಮ್ಮದೇ ಆದ ಅಭಿಪ್ರಾಯ, ಅನಿಸಿಕೆಗಳು, ಭಾವನೆಗಳು ಹಾಗೂ ಅಭಿವ್ಯಕ್ತಿ ಪಡಿಸಲಾಗದ ಅನುಬಂಧಗಳನ್ನು ಹೊಂದಿರುತ್ತಾರೆ. ಸೂಕ್ತ ವೇದಿಕೆ, ಸೂಕ್ತ ಸಮಯದಲ್ಲಿ ಸಿಕ್ಕಿದ್ದೇ ಆದರೆ ತಮ್ಮದೇ ಆದ ರೀತಿಯಲ್ಲಿ ಆ ಭಾವನೆಗಳನ್ನು ವ್ಯಕ್ತ ಪಡಿಸುತ್ತಾರೆ ಎಂಬ ಮಾತನ್ನು ಸಂಪಾದಕಿ ಶ್ರೀಮತಿ ಲಲಿತಾ ಎಸ್ ಬೆಳವಾಡಿಯವರ ನೇತೃತ್ವದಲ್ಲಿ ಸುಮಾರು 28 ಲೇಖಕ ಲೇಖಕಿಯರು ವ್ಯಕ್ತಪಡಿಸಿರುವ ರೀತಿ ಅನನ್ಯ ಅನುಭವ ತಂದುಕೊಡುತ್ತದೆ. ಇಂತಹ ಕಥಾಮಾಲಿಕೆ ಸಂಪಾದಕಿ ಲಲಿತಾ ಎಸ್ ಬೆಳವಾಡಿಯವರು ಅತ್ಯಂತ ಯಶಸ್ವಿಯಾಗಿ "ಕುಸುಮಾಂಜಲಿ" ಪುಸ್ತಕದಲ್ಲಿ ಎಲ್ಲಾ ಅಮ್ಮಂದಿರಿಗೂ ಗೌರವ ಕೊಡುವ ನಿಟ್ಟಿನಲ್ಲಿ ಯಶಸ್ವಿಯಾಗಿದ್ದಾರೆ.

About the Author

ಲಲಿತಾ ಬೆಳವಾಡಿ

ಲಲಿತ ಬೆಳವಾಡಿ ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಗ್ರಾಮದವರು.ತಾಯಿ ಸಂಗೀತಗಾರ್ತಿ ಮತ್ತು ಬರಹಗಾರ್ತಿ,ತಂದೆ ಸರ್ಕಾರಿ ಶಾಲಾ ಶಿಕ್ಷಕರು. ಮದುವೆಯ ನಂತರ ಆಂದ್ರ ಪ್ರದೇಶದ ವಿಶಾಖ ಪಟ್ಟಣಂನಲ್ಲಿ 16 ವರ್ಷ  ವಾಸ ಮಾಡಿದ್ದಾರೆ.. ಚಿಕ್ಕ ವಯಸ್ಸಿನಿಂದಲೂ ಬರವಣಿಗೆ ಹವ್ಯಾಸ ಬೆಳೆಸಿಕೊಂಡ ಇವರ ಸಾಹಿತ್ಯ ಸೇವೆಗಾಗಿ ಪ್ರಶಸ್ತಿ ಪತ್ರ.ನೆನಪಿನ ಕಾಣಿಕೆಗಳು ಪಡೆದಿರುತ್ತಾರೆ.  ರಾಷ್ಟ್ರೀಯ ಅಂತರ ರಾಷ್ಟ್ರೀಯ ಅಖಿಲಭಾರತ ಕವಯತ್ರಿಯರ ಸಮ್ಮೇಳನ ಸಂಸ್ಥೆಯಲ್ಲಿ pattern member, Executive ಮಾತ್ರವಲ್ಲದೆ ಬೆಂಗಳೂರು ಝೋನ್ ನ ಅಧ್ಯಕ್ಷರೂ ಆಗಿದ್ದಾರೆ.. ನಾಲ್ಕು ವರ್ಷಗಳು ಕರ್ನಾಟಕದ ಇನ್ಚಾರ್ಜ್ ಆಗಿ ಕೆಲಸ ನಿರ್ವಹಿಸಿದ್ದಾರೆ. ಅಖಿಲ ಭಾರತ ಕವಯಿತ್ರಿಯರ ಸಮ್ಮೇಳನಕ್ಕಾಗಿ, ಗುಲ್ಬರ್ಗ ಬೀದರ್, ಮೈಸೂರು, ...

READ MORE

Related Books