ಶರಣರ ಮಾತುಗಳನ್ನು ವರ್ತಮಾನಕ್ಕೆ ಮುಖಾಮುಖಿಯಾಗಿಸುವ ಪ್ರಯತ್ನವನ್ನು ಲೇಖಕಿ ಈ ಕೃತಿಯ ಮೂಲಕ ಮಾಡಿದ್ದಾರೆ. ’ವಚನಕಾರರಾಗಲಿ, ದಾಸರು, ಶರಣರು, ಸೂಫಿಗಳ ಎಂದು ಸ್ವಾರ್ಥ ಬಯಸಿದವರಲ್ಲ, ಬದಲಿಗೆ ಸರ್ವೋಜನ ಸುಖಿನೋಭವಂತು ಎನ್ನುವ ತತ್ವವನ್ನು ಬೋಧಿಸಿದವರು. ಅದಂತಹ ನೆಲದಲ್ಲಿ ಸೌಹಾರ್ದದ ಬದುಕು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ. ಆದ್ದರಿಂದ ವಚನಕಾರರಾಗಲಿ, ಭಕ್ತಿ ಕವಿಗಳಾಗಲಿ, ಹೊಸಗನ್ನಡ ಸಾಹಿತ್ಯ ಸಂವೇದನೆಗಳಾದ, ದಲಿತ ಬಂಡಾಯ, ಮುಸ್ಲಿಂ ಸಂವೇದನೆಗಳು ಅಭಿವ್ಯಕ್ತಿಗೊಂಡ ಬಗೆಯಲ್ಲಿ ವೈಚಾರಿಕತೆಯ ಅಂಶಗಳನ್ನು ಗಮನಿಸಲೇ ಬೇಕು ಎನ್ನುತ್ತಾರೆ ಲೇಖಕಿ ಮಮ್ತಾಜ್ ಬೇಗಂ.
ಈ ಕೃತಿಯಲ್ಲಿ ಆಯಾ ಕಾಲಘಟ್ಟದ ಆಶಯಗಳ ವೈಚಾರಿಕ ಹುಡುಕಾಟವನ್ನು ನಡೆಸಿದ್ದಾರೆ. ವಚನಕಾರರ ಕಾಲದ ಶರಣರ ವಚನಗಳಲ್ಲಿ ವ್ಯಕ್ತವಾದ ದಲಿತ ಅಸ್ಮಿತೆಯನ್ನು ವೈಚಾರಿಕತೆಯ ಹಿನ್ನಲೆಯಲ್ಲಿ ವಿಶ್ಲೇಷಿಸಲಾಗಿದೆ. ಹರಿಹರನ ಪಂಪಾಶತಕ ಕೃತಿಯಲ್ಲಿನ ಭುವಿ ಮತ್ತು ಭಕ್ತನ ಭಕ್ತಿಯ ಅಂಶಗಳನ್ನು ವಿಶ್ಲೇಷಣೆ ಮಾಡಿದ್ದಾರೆ. ಶೋಷಣೆ ನೆಲೆಗಳು, ಸಾಹಿತ್ಯದ ಪರಿದಿಯನ್ನು ಮೀರಿ ಸ್ತ್ರೀಪರ ಚಿಂತನೆಗಳನ್ನು ಸಾಮಾಜಿಕ ಸಮಸ್ಯೆಗಳ ನೆಲೆಯಲ್ಲಿ, ಸ್ತ್ರೀಯ ಸಾಮಾಜಿಕ ನೆಲೆಗಳಲ್ಲಿ ಆಕೆಯ ಕೊಡುಗೆಯ ಮಾದರಿಗಳನ್ನು ಇಲ್ಲಿ ವಿವರಣಾತ್ಮಕವಾಗಿ ವಿಶ್ಲೇಷಿಸುವ ಪ್ರಯತ್ನವನ್ನು ಲೇಖಕಿ ಮಮ್ತಾಜ್ ಬೇಗಂ ಮಾಡಿದ್ದಾರೆ. ಈ ಕೃತಿಗೆ ನ್ನಡ ಸಾಹಿತ್ಯ ಪರಿಷತ್ತಿನ 2018ನೇ ಸಾಲಿನ ಶಾರದಾ ಆರ್.ರಾವ್ ದತ್ತಿ ಪ್ರಶಸ್ತಿ ದೊರತಿದೆ.
ಡಾ. ಮಮ್ತಾಜ್ ಬೇಗಂ ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರು. ತಂದೆ ಹುಸೇನಸಾಬ, ತಾಯಿ ಕಾಸಿಂಬಿ ಮುಧೋಳ. ಗಂಗಾವತಿಯಲ್ಲೇ ಪದವಿವರೆಗೂ ಶಿಕ್ಷಣ ಪೂರ್ಣಗೊಳಿಸಿ, ಗುಲಬಗಾ ವಿ.ವಿ.ಯಿಂದ ಎಂ.ಎ ಹಾಗೂ 'ಪಿಂಜಾರರು: ಒಂದು ಜಾನಪದೀಯ ಅಧ್ಯಯನ' ವಿಷಯವಾಗಿ ಮಹಾಪ್ರಬಂಧ ಸಲ್ಲಿಸಿ ಪಿಎಚ್ ಡಿ ಪಡೆದರು. ಸದ್ಯ, ಗಂಗಾವತಿಯ ಶ್ರೀ ಕೊಲ್ಲಿ ನಾಗೇಶ್ವರರಾವ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದಲ್ಲಿಸಹಾಯಕ ಪ್ರಾಧ್ಯಾಪಕಿಯಾಗಿದ್ದಾರೆ. ಕಾವ್ಯ, ಸಂಶೋಧನೆ, ಜಾನಪದ, ವಚನ, ದಲಿತ ಸಾಹಿತ್ಯ, ಸ್ತ್ರೀವಾದಿ ಚಿಂತನೆಗಳ ಬರವಣಿಗೆ ಇವರ ಆಸಕ್ತಿಯ ಕ್ಷೇತ್ರಗಳು. ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ, ಕನ್ನಡ ವಿಶ್ವವಿದ್ಯಾಲಯ ದೂರಶಿಕ್ಷಣ ಪಠ್ಯಪುಸ್ತಕ ಸಮಿತಿಯ ಸದಸ್ಯರಾದ್ಗಿದಾರೆ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ...
READ MORE