ಕೃತಿರೂಪ ಸಂಘದರ್ಶನ

Author : ಹೂ.ವೆ. ಶೇಷಾದ್ರಿ

Pages 430

₹ 225.00




Year of Publication: 1988
Published by: ಸಾಹಿತ್ಯ ಸಿಂಧು ಪ್ರಕಾಶನ
Address: ಬೆಂಗಳೂರು-19.

Synopsys

`ಕೃತಿರೂಪ ಸಂಘದರ್ಶನ' ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಂಡಿತವಾದ ಬರಹಗಳ ಸಂಕಲನವಿದು. ಲೇಖಕರಾದ ಹೂ.ವೆ. ಶೇಷಾದ್ರಿ ಮತ್ತು ಚಂದ್ರಶೇಖರ ಭಂಡಾರಿ ಅವರು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ ಭಾರತದ ಚಿರಂತನ ಹಾಗೂ ಉದಾತ್ತ ಮೌಲ್ಯಗಳನ್ನೂ, ಹಿಂದೂ ಸಮಾಜದ ಹಿತವನ್ನೂ ಎತ್ತಿಹಿಡಿದಿರುವ ಸಂಘಟನೆಗಳಲ್ಲಿ ಅಗ್ರಣಿ ಎಂದು ಪರಿಗಣಿತವಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ, ಕಳೆದ 87 ವರ್ಷಗಳಿಂದ ನಾಡಿಗೆ ಸಲ್ಲಿಸುತ್ತ ಬಂದಿರುವ ಸೇವೆ ಸಾಟಿಯಿಲ್ಲದ್ದು. ಆದರೆ, ಸಂಘವು ಸ್ವಭಾವತಃ ಪ್ರಸಿದ್ಧಿ ಹಾಗೂ ಕರ್ತವ್ಯ ನಿಷ್ಠವೂ ಆಗಿರುವುದರಿಂದ ಸಂಘದ ಚಟುವಟಿಕೆಗಳನ್ನು ಕುರಿತು ಅಧಿಕೃತ ಸಾಹಿತ್ಯ ಪ್ರಕಟವಾಗಿರುವುದು ಕಡಿಮೆ. ಈ ದೀರ್ಘಕಾಲದ ಕೊರತೆಯನ್ನು ’ಕೃತಿರೂಪ ಸಂಘದರ್ಶನ’ ತುಂಬಿದೆ. ಸಂಘ ಬೆಳೆದುಬಂದ ದಾರಿಯ ಕೆಲವು ಪ್ರಮುಖ ಮಜಲುಗಳನ್ನು ಸಂಗ್ರಹವಾಗಿ ಈ ಗ್ರಂಥ ನಿರೂಪಿಸುತ್ತದೆ. 8 ದಶಕಗಳಿಗೂ ಮೀರಿದ ಅವಧಿಯ ಹಲವಾರು ಪ್ರಮುಖ ಸವಾಲುಗಳಿಗೆ ಸಂಘದ ಸ್ವಯಂಸೇವಕರು ಹೇಗೆ ಸ್ಪಂದಿಸಿದರೆಂಬುದನ್ನು ಮೊಟ್ಟಮೊದಲ ಬಾರಿಗೆ ಇಲ್ಲಿ ಅಧಿಕೃತವಾಗಿ ದಾಖಲೆ ಮಾಡಲಾಗಿದೆ. ಈಚಿನ ವರ್ಷಗಳಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ನೂರಾರು ಬಗೆಯ ಸೇವಾ ಚಟುವಟಿಕೆಗಳಲ್ಲಿ ಸ್ವಯಂಸೇವಕರು ತೊಡಗಿರುವುದರ ವಿಹಂಗಮ ಸಮೀಕ್ಷೆಯೂ ಇಲ್ಲಿದೆ.

About the Author

ಹೂ.ವೆ. ಶೇಷಾದ್ರಿ
(26 May 1926 - 14 August 2005)

ಖ್ಯಾತ ಲೇಖಕ ಶೇಷಾದ್ರಿಯವರು (26-05-1926) ಹುಟ್ಟಿದ್ದು ಹೊಂಗಸಂದ್ರದಲ್ಲಿ. ತಂದೆ ವೆಂಕಟರಾಮಯ್ಯ, ತಾಯಿ ಪಾರ್ವತಮ್ಮ. ಬೆಂಗಳೂರಿನ (19476) ಸೆಂಟ್ರಲ್ ಕಾಲೇಜಿನಿಂದ ರಸಾಯನ ಶಾಸ್ತ್ರದಲ್ಲಿ ಸ್ವರ್ಣಪದಕದೊಂದಿಗೆ ಎಂ.ಎಸ್ಸಿ. ಪದವೀಧರರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪೂರ್ಣಾವಧಿ ಕಾರ್ಯಕರ್ತರು. 1980ರಲ್ಲಿ ಕ್ಷೇತ್ರೀಯ (ಕರ್ನಾಟಕ, ಆಂಧ್ರ, ಕೇರಳ, ತಮಿಳುನಾಡು) ಪ್ರಚಾರ ಕಾರ‍್ಯ ನಿರ್ವಹಣೆ, ಸಂಘದ ಪ್ರಧಾನ ಕಾರ‍್ಯದರ್ಶಿಯಾಗಿಯೂ ಆಗಿದ್ದರು.ಸಂಘದ ವೈಚಾರಿಕ ಹಾಗೂ ಸೈದ್ಧಾಂತಿಕ ಬರಹಗಳನ್ನು ಬರೆದರು.  ವಿಕ್ರಮ, ಉತ್ಥಾನ-ಕನ್ನಡ ಪತ್ರಿಕೆಗಳಲ್ಲಿ, ಇಂಗ್ಲಿಷ್‌ನ ಆರ್ಗನೈಸರ್, ಹಿಂದಿಯ ಪಾಂಚಜನ್ಯ ಹಾಗೂ ದೇಶದ ಇತರ ಭಾಷೆಗಳ ನಿಯತ ಕಾಲಿಕೆಗಳಲ್ಲಿ ಲೇಖನ, ವಿಮರ್ಶಾತ್ಮಕ ವಿಶ್ಲೇಷಣೆಗಳನ್ನು ಬರೆದರು. ಕೃತಿಗಳು-ಯುಗಾವತಾರ, ಅಮ್ಮಾ ಬಾಗಿಲು ತೆಗೆ, ಚಿಂತನಗಂಗಾ, ದೇಶ ...

READ MORE

Related Books