‘ಕೃಷ್ಣನ ಹೆಸರೇ ಲೋಕಪ್ರಿಯ’ ಇಲ್ಲಿ ಧಾರ್ಮಿಕ ಶ್ರದ್ಧೆ. ಆಧ್ಯಾತ್ಮಿಕ ಜಿಜ್ಞಾಸೆಗಳು. ಸಂಸ್ಕೃತಿ ಪರಿಚಯ, ಧರ್ಮಾಂತರಂಗ ಕುರಿತು ಬೆಳಕು ಚೆಲ್ಲುವ ಲೇಖನಗಳ ಮೂಲಕ ಸಾಹಿತ್ಯ ಪರಿಚಾರಿಕೆ ಮಾಡಲಾಗಿದೆ. 33 ಲೇಖನಗಳ ಸಂಗ್ರಹದಲ್ಲಿ ಕೃಷ್ಣ ತತ್ವದ ಮಹತ್ವವನ್ನು ಸರಳ ಸುಂದರ ನಿರೂಪಣೆಯೊಂದಿಗೆ ಓದಿಸಿಕೊಂಡು ಹೋಗುತ್ತ ಸತ್ವಭರಿತ ಜ್ಞಾನದೌತಣ ನೀಡುತ್ತದೆ.
ಲೇಖಕ ಗುರುರಾಜ ಪೋಶೆಟ್ಟಿಹಳ್ಳಿ ಸಾತ್ವಿಕ ಸಾಹಿತ್ಯ ವಕ್ತಾರರೆಂದೇ ಗುರುತಿಸಿಕೊಂಡಿದ್ದಾರೆ. 1980ರಲ್ಲಿ ಜನಿಸಿದ ಅವರು ಪತ್ರಿಕೋದ್ಯಮ ಪದವಿ ಹಾಗೂ ಕನ್ನಡ ಎಂ.ಎ ಪೂರ್ಣಗೊಳಿಸಿದ್ದಾರೆ. ನೀತಿ ಆಯೋಗದಿಂದ ಮಾನ್ಯತೆ ಪಡೆದ ಐವಿಎಪಿಯಿಂದ ಇಂಡಾಲಜಿ-ಗಣಪತಿ ಕುರಿತು ವಿಶೇಷ ಅಧ್ಯಯನಕ್ಕೆ ರಾಜಮಾತಾ ಶ್ರೀಮತಿ ಪ್ರಮೋದಾದೇವಿ ಒಡೆಯರ್ ರಿಂದ ಗೌರವ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಸಂಸ್ಕೃತಿ ಚಿಂತಕರು, ಅಂಕಣಕಾರರೂ ಆಗಿರುವ ಗುರುರಾಜ ಪೋಶೆಟ್ಟಿಹಳ್ಳಿ ಅವರು ಮಾಧ್ಯಮ ಸಮಾಲೋಚಕ ಹಾಗೂ ಸಂಘಟಕರಾಗಿಯೂ ಗುರುತಿಸಿಕೊಂಡಿದ್ದು, ಪ್ರಣವ ಮೀಡಿಯಾ ಹೌಸ್ ರೂವಾರಿಗಳಾಗಿದ್ದಾರೆ. ಪ್ರಕಟಿತ ಕೃತಿಗಳು: ಕನ್ನಡದ ಕಂಪಿನಲಿ ಕರಿವದನ, ಭಕ್ತಿ ಪಾರಿಜಾತ, ವಂದೇ ಗುರುಪರಂಪರಾಮ್’, ಅಡ್ವೈಸರ್ ಯೋಗ ವಿಶೇಷಾಂಕ 2018(ಅತಿಥಿ ...
READ MORE