ಜಮ್ಮು-ಕಾಶ್ಮೀರದ ಸಮಸ್ಯೆ ಇಂದು-ನಿನ್ನೆಯದಲ್ಲ. ಪಾಕಿಸ್ತಾನಿ ಉಗ್ರಗಾಮಿಗಳ ನಿರಂತರ ದಾಳಿಯಿಂದಾಗಿ ಸಾವಿರಾರು ಜನರ ಮಾರಣ ಹೋಮ ನಡೆಯುತ್ತಲೇ ಇದೆ. ಆದರೆ, ಕೇಂದ್ರ ಸರ್ಕಾರ 2019ರ ಆ. 5ರಂದು ವಿಶೇಷ ಸ್ಥಾನ ಕಲ್ಪಿಸುವ 370ನೇ ವಿಧಿಯಿಂದ ಕಾಶ್ಮೀರವನ್ನು ಹೊರತರುವ ಮೂಲಕ ಇತಿಹಾಸ ನಿರ್ವಿುಸಿದೆ. ಆದರೆ, ಭಾರತ ಮತ್ತು ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಿ ಯಾವ ತಪ್ಪಿನಿಂದ ಜಮ್ಮು-ಕಾಶ್ಮೀರ ಸಮಸ್ಯೆ ಹುಟ್ಟಿಕೊಂಡಿತು; ಸುಲಭ ಪರಿಹಾರವಿದ್ದರೂ ಪಾಕಿಸ್ತಾನ ಪರವಾದ ಶಕ್ತಿಗಳು ಹೇಗೆ ಕೆಲಸ ಮಾಡಿದವು; ತನ್ನದಲ್ಲದ ಜಮ್ಮು-ಕಾಶ್ಮೀರವನ್ನು ಕಬಳಿಸಲು ಪಾಕಿಸ್ತಾನ ಹೇಗೆಲ್ಲ ಸಂಚು ರೂಪಿಸಿತ್ತು, ಅದಕ್ಕಾಗಿ ಎಂತೆಂಥ ನೀಚ ಕೃತ್ಯಗಳನ್ನು ಎಸಗಿತು ಎಂಬುದರ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದೆ.