ʼನಾಡಿಗೆ ನಮಸ್ಕಾರʼ ಎನ್ನುವುದು ಕಾಂತವರ ಕನ್ನಡ ಸಂಘವು ಮೂವತ್ತಕ್ಕೆ ಕಾಲಿಟ್ಟಿದ್ದನ್ನು ನೆನಪಿಸುವ ಮತ್ತು ಗುರುತಿಸುವ ಗ್ರಂಥ ಮಾಲೆಯಾಗಿದೆ. ದಕ್ಷಿಣ ಕನ್ನಡ (ಉಡುಪಿ ಮತ್ತು ಕಾಸರಗೋಡು ಸೇರಿದ ಅವಿಭಜಿತ ಜಿಲ್ಲೆ) ಧಾರ್ಮಿಕ, ನೈತಿಕ, ಸಾಹಿತ್ಯಿಕ, ಸಾಂಸ್ಕೃತಿಕ ಅಧಃಪತನವಾಗದಂತೆ ಸದಾ ಎಚ್ಚರಿಕೆಯಿಂದಿರುವ ಒಂದು ನಾಡು. ಇಲ್ಲಿನ ಬಹುಮುಖೀ ಸಂಸ್ಕೃತಿಯ ನಿರ್ಮಾಣಕ್ಕಾಗಿ ದುಡಿದು ಕೀರ್ತಿಶೇಷ ರಾಗಿರುವ ಮತ್ತು ಈಗಲೂ ನಮ್ಮ ನಡುವೆ ಇರುವ ವಿದ್ವಾಂಸರು, ಚಿಂತಕರು, ಸಾಹಿತಿಗಳು, ಯಕ್ಷಗಾನ ಸಾಹಿತಿಗಳು ಹಾಗೂ ಕಲಾವಿದರು, ವರ್ಣಚಿತ್ರ ಕಲಾವಿದರು, ಶಿಲ್ಪಿಗಳು, ಸದಾರುಶಿಲ್ಪಿಗಳು, ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುವ ಸಮಾಜಸೇವಕರು, ಶಿಕ್ಷಕರು, ಅಭಿವೃದ್ಧಿಯ ಹರಿಕಾರರು, ಕೃಷಿ ಋಷಿಗಳು. ವೈದ್ಯರು ಮುಂತಾದವರ ಸಾಧನೆಗಳನ್ನು ದಾಖಲಿಸುವುದು ಸಮಾಜದ ಕರ್ತವ್ಯ ಮುಂದೆ ಅಧ್ಯಯನ ಕಾರ್ಯಗಳನ್ನು ಕೈಗೊಳ್ಳುವವರಿಗೆ ಒಂದು ಮಾಹಿತಿ ಕೋಶವಾಗಿಯೂ ಈ ಮಾಲೆಯ ಪುಸ್ತಕ ಒದಗಿಸುವುದು ಮುಖ್ಯ ಉದ್ದೇಶವಾಗಿದೆ.
ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲರಾಗಿರುವ ಪೀಟರ್ ವಿಲ್ಸನ್ ಪ್ರಭಾಕರ ಅವರು ಕಳೆದ ಮೂರುವರೆ ದಶಕಗಳಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಪಂಥಗಳಲ್ಲಿ ನಂಬಿಕೆ ಇಲ್ಲ ಎನ್ನುವ ಅವರಿಗೆ ನಾಡಿನ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ವಿಶೇಷ ಕಾಳಜಿ-ಆಸಕ್ತಿ. ಅವರು ಪುತ್ತೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 1960ರಲ್ಲಿ ಮಂಗಳೂರು ಸಮೀಪದ ಕೋಣಾಜೆಯಲ್ಲಿ ಜನಿಸಿದ ಪ್ರಭಾಕರ ಅವರ ತಂದೆ ಡಿ.ಎಸ್. ಕೋಟ್ಯಾನ್ ಮತ್ತು ತಾಯಿ ಲಿಲಿ. ಕೋಣಾಜೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಅವರು ನಂತರ ಮಂಗಳೂರಿನ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಯಾಗಿ ಪದವಿ ಪಡೆದರು. ಮಂಗಳೂರು ವಿಶ್ವವಿದ್ಯಾಲಯದ ...
READ MORE