ಕನ್ನಡವೇ ಕಣ್ಣಾಗಿ ಕಣ್ಣೆ ಕನ್ನಡಿಯಾಗಿ

Author : ಮೇಟಿ ಮಲ್ಲಿಕಾರ್ಜುನ



Year of Publication: 2021
Published by: ವಿಘ್ನೇಶ್ವರ ಪ್ರಕಾಶನ
Address: ಮೈಸೂರು

Synopsys

‘ಕನ್ನಡವೇ ಕಣ್ಣಾಗಿ ಕಣ್ಣೆ ಕನ್ನಡಿಯಾಗಿ’ ಕೃತಿಯು ಮೇಟಿ ಮಲ್ಲಿಕಾರ್ಜುನ ಅವರ ಲೇಖನಗಳ ಸಂಕಲನ. ಕೃತಿಗೆ ಬೆನ್ನುಡಿ ಬರೆದಿರುವ ಬಿ.ಎಂ ಪುಟ್ಟಯ್ಯ ಅವರು, ‘ಈ ಬರವಣಿಗೆ ತನ್ನನ್ನೇ ತಾನು ಭಾವಿಸುತ್ತಾ, ಅರಿಯುತ್ತಾ, ಆಲೋಚಿಸುತ್ತಾ, ತನಗೆ ಆಗಿಬಂದುವನ್ನು ಜೀರ್ಣಿಸಿಕೊಳ್ಳುತ್ತಾ ಕನ್ನಡವಾಗಿ ಅರಳಿದೆ; ಹೆಣ್ಣಾಗಲು ಪ್ರಯತ್ನಿಸಿದೆ. ಪರಿಣಾಮವಾಗಿ, ಓದುಗರಿಗೆ ಹೊಸದಾಗಿ ಆಲೋಚಿಸಲು ಹಚ್ಚಿದೆ, ಭಾಷೆ, ಸಾಹಿತ್ಯ, ಸಂಸ್ಕೃತಿ, ಬದುಕುಗಳನ್ನು ಬೇರ್ಪಡಿಸದೆ ಇವುಗಳಿಗೆ ಒಳಗಣ್ಣಾಗಿದೆ. ಇವನ್ನು ಸಿದ್ದಗೊಂಡಿರುವ ಉತ್ಪಾದಿತ ವಸ್ತುಗಳೆಂದು ತೀರ್ಮಾನಿಸದೆ; ನಿತ್ಯ ಆಗುತ್ತಿರುವ, ಆಗಬೇಕಿರುವ ಪ್ರಕ್ರಿಯೆಗಳೆಂದು ಗ್ರಹಿಸಿದೆ. ಬರವಣಿಗೆ ಮತ್ತು ಬದುಕಿನೊಂದಿಗೆ ಏರ್ಪಡುವ ವೈರುಧ್ಯಾತ್ಮಕ ಸಂಬಂಧಗಳನ್ನು, ಅವುಗಳ ಪರಿಣಾಮಗಳನ್ನು ಬಿಡಿಸಿಟ್ಟಿದೆ. ಈ ಮೂಲಕ, ಬದುಕನ್ನು ಅರಿಯುವ ಗ್ರಹಿಕೆ ಬದಲಾಗಬೇಕೆಂಬ ತುಡಿತವಿದೆ. ಆಲೋಚನೆ ಬರವಣಿಗೆ ಬೌದ್ಧಿಕ ಚಟುವಟಿಕೆಯ ಬೆದರು ಗೊಂಬೆಯಾಗದೆ ಬದುಕಿನ ತಳದೊಳಗೆ ಬೇರೂರಬೇಕಾದ ಅಗತ್ಯವನ್ನು ಮನಗಂಡಿದೆ. ಆಸ್ತಿ, ಸಂಪತ್ತು, ಅಧಿಕಾರ, ಯಜಮಾನಿಕೆ, ಲಿಂಗ ತಾರತಮ್ಯ ಮೌಲ್ಯನಂಬಿಕೆಗಳನ್ನು ಪ್ರಶ್ನಿಸಿದೆ. ಅವುಗಳ ಗ್ರಹಿಕೆಯ ಸ್ವರೂಪವನ್ನು ಪಲ್ಲಟಿಸುವ ಸೂಕ್ಷ್ಮ ಒಳನೋಟಗಳನ್ನು ಸೃಷ್ಟಿಸಿದೆ. ಇದಕ್ಕೆ ನೆಲದ ಆಳವಾದ ತಾಯಿಬೇರು, ಸುತ್ತಮುತ್ತಲಿಂದ ಹೀರಿಕೊಳ್ಳುವ ತಂತುರು ಬೇರುಗಳಿವೆ. ತೀರ್ಮಾನ ಹಾಗೂ ನಿರ್ದೇಶನಗಳನ್ನು ಯಜಮಾನಿಕೆಯೆಂದು ಭಾವಿಸಿರುವ ಇಲ್ಲಿಯ ವಿಚಾರಗಳಿಗೆ ಗ್ರಹಿಕೆ ಶೋಧಿಸುವ ಗುಣವುಳ್ಳದ್ದನ್ನು ಕಾಣಬಹುದು. ಹಾಗಾಗಿ, ವಸ್ತು, ನಿರೂಪಣೆ, ಗ್ರಹಿಕೆಗಳು ಒಂದೊರೊಳಗೊಂದು ಬೆರೆತು ಸಂಯುಕ್ತ ಶಕ್ತಿಯಾಗಿ ಜೀವ ಪಡೆದಿದೆ. ಬದಲಾಗುವಿಕೆಯನ್ನು ಚಲನಶೀಲ ಕಣ್ಣುಗಳಿಂದ ಗ್ರಹಿಸಿರುವ ಕ್ರಮದಲ್ಲಿ ಬದಲಾಗಬೇಕಾದ ಸಾಧ್ಯತೆಗಳನ್ನು ಕಾಣಿಸಿದೆ. ಕನ್ನಡ ದರ್ಶನಕ್ಕೆ ಇದು ಶಕ್ತಿಶಾಲಿ ಸೇರ್ಪಡೆ’ ಎಂದು ಪ್ರಶಂಸಿಸಿದ್ದಾರೆ.

About the Author

ಮೇಟಿ ಮಲ್ಲಿಕಾರ್ಜುನ
(15 August 1970)

ಶಿವಮೊಗ್ಗಾದ ಸಹ್ಯಾದ್ರಿ ಆರ್ಟ್ಸ್ ಕಾಲೇಜಿನ ಭಾಷಾಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಮೇಟಿ ಮಲ್ಲಿಕಾರ್ಜುನ ಅವರು ನುಡಿ ಚಿಂತಕರೆನಿಸಿಕೊಂಡಿದ್ದಾರೆ. ಮೂಲತಃ ಬಾಗಲಕೋಟೆಯವರಾದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತೆಂಕಣದ ನುಡಿಗಳು ಮತ್ತು ಇಂಗ್ಲಿಶ್, ಕರ್ನಾಟಕ ಸಬಾಲ್ಟ್ರನ್ ಓದು ಸಂಪುಟಗಳು, ಕೆವೈಎನ್ ನಾಟಕಗಳ ಓದು ‘ಆಟ-ನೋಟ’ ಅವರ ಸಂಪಾದಿತ ಕೃತಿಗಳು. ...

READ MORE

Related Books