ಕನ್ನಡದ ಕನ್ನಡಿಯಲ್ಲಿ

Author : ಕೆ. ರಘುನಾಥ್

Pages 192

₹ 150.00




Year of Publication: 2012
Published by: ನಂದೀಶ್ ನೆಲಮಲೆ
Address: ನೆಲಮಲೆ ಪಬ್ಲಿಷಿಂಗ್ ಹೌಸ್, ನೆಲಮಲೆ, ಅವ್ವೇರಹಳ್ಳಿಅಂಚೆ, ಕೈಲಾಂಚ ಹೋಬಳಿ, ರಾಮನಗರ ತಾಲ್ಲೂಕು-ಜಿಲ್ಲೆ, ಕರ್ನಾಟಕ
Phone: 9845081916

Synopsys

ಲೇಖಕ ಕೆ. ರಘುನಾಥ ಅವರ ‘ಕನ್ನಡದ ಕನ್ನಡಿಯಲ್ಲಿ’ ಕೃತಿಯು ಲೇಖನಗಳ ಸಂಕಲನವಾಗಿದೆ. ಈ ಕೃತಿಯಲ್ಲಿ ಪ್ರಕಾಶಕರು ಬೆನ್ನುಡಿ ಬರೆದಿದ್ದು,‘ ಡಾ. ಕೆ. ರಘುನಾಥ ಅವರ 'ಕನ್ನಡದ ಕನ್ನಡಿಯಲ್ಲಿ' ವೈವಿಧ್ಯಮಯ ಬರೆಹಗಳ ಸಂಕಲನ. ಇಲ್ಲಿ ಸಂಕಲಿತಗೊಂಡಿರುವ ಲೇಖನಗಳನ್ನು ಗಮನಿಸಿದರೆ, ರಘುನಾಥರ ಅಧ್ಯಯನದ ಹರವು, ಓದಿನ ವಿಸ್ತಾರ ಅನಾವರಣಗೊಳ್ಳುತ್ತದೆ. ದೂರದ ಮುಂಬಯಿಯಲ್ಲಿ ನೆಲೆಸಿರುವ ಇವರ ಆಸಕ್ತಿಯ ಕ್ಷೇತ್ರಗಳು ವಿಸ್ಮಯವನ್ನುಂಟುಮಾಡುತ್ತವೆ. ಕನ್ನಡದ ಬಹುತೇಕ ಕವಿ-ಕಾವ್ಯ ಪರಂಪರೆಯನ್ನು ಬಲ್ಲ ಇವರ ಬರವಣಿಗೆಯಲ್ಲಿ ತಾತ್ವಿಕತೆ, ನಿಪುಣತೆ, ಕುಶಲತೆಗಳು ಎದ್ದುಕಾಣುವ ಅಂಶಗಳು. ಇಲ್ಲಿನ ಬರಹಗಳ ಮೂಲಕ ತಾವೊಬ್ಬ ವಿಷಯ ವಿಮರ್ಶಕ ಎಂಬುದನ್ನು ಸಾಬೀತು ಪಡಿಸಿದ್ದಾರೆ. ವ್ಯಕ್ತಿಚಿತ್ರಗಳು, ಬಿಡಿ ಕವಿತೆಗಳು, ಸಾಹಿತ್ಯಕ ಚಳುವಳಿಗಳು, ಮುಂಬಯಿಯಲ್ಲಿ ಕನ್ನಡಪರ ಹೋರಾಟಗಳು, ಶೈಕ್ಷಣಿಕ ಪ್ರಗತಿ, ಸಂಘಟನೆಯ ರೂವಾರಿಗಳು - ಹೀಗೆ ಹಲವು ನೆಲೆಗಳಲ್ಲಿ ರಘುನಾಥರ ಬರವಣಿಗೆ ತನ್ನ ವ್ಯಾಪ್ತಿಯನ್ನು ಹಿರಿದಾಗಿಸಿಕೊಂಡಿದೆ. ರಘುನಾಥರ ಈ ಕೃಷಿ ಹೊರನಾಡ ಕನ್ನಡಿಗರೊಬ್ಬರ ಕನ್ನಡ ಕೈಂಕರ್ಯದ ದೀವಿಗೆಯಂತೆ ನಿಮ್ಮ ಕೈಲಿಡಲು ನಮಗೆ ಹೆಮ್ಮೆಯಿದೆ’ ಎಂದು ಹೇಳಿದ್ದಾರೆ..

About the Author

ಕೆ. ರಘುನಾಥ್

ಡಾ. ಕೆ. ರಘುನಾಥ್ ಅವರು ಮುಂಬೈನ ಝುನ್ ಝುನ್ ವಾಲಾ ಕಾಲೇಜಿನಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ ಹಾಗೂ ಮುಖ್ಯಸ್ಮರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. ಬೆಂಗಳೂರು ವಿ.ವಿ.ಯಿಂದ ಎಂ.ಎ. ಪದವಿ ಹಾಗೂ ಮುಂಬೈ ವಿ.ವಿ.ಯಿಂದ ಎಂಫಿಲ್, ಪಿಎಚ್‌ಡಿ ಪಡೆದ ಅವರು ಮುಂಬೈಯಲ್ಲಿ ಕನ್ನಡವನ್ನು ಕಟ್ಟುವಲ್ಲಿ ಶ್ರಮಿಸುತ್ತಿದ್ದಾರೆ. ಕಲ್ಯಾಣ ಕನ್ನಡ ಸಾಹಿತ್ಯ ಕೇಂದ್ರ, ಮುಂಬೆಳಕು ಕನ್ನಡ ಬಳಗದ ಸ್ಥಾಪಕರಾದ ಡಾ. ರಘುನಾಥ್ ಒಳ್ಳೆಯ ವಿಮರ್ಶಕರೂ ಆಗಿದ್ದಾರೆ. 'ಅರವಿಂದ ನಾಡಕರ್ಣಿ ಅವರ ಕಾವ್ಯ - ಒಂದು ಅಧ್ಯಯನ' ಅವರ ಎಂಫಿಲ್ ಪ್ರಬಂಧ. 'ಕನ್ನಡ ನವ್ಯ ಸಾಹಿತ್ಯದಲ್ಲಿ ನಗರ ಪ್ರಜ್ಞೆ' ಅವರ ಸಂಶೋಧನ ...

READ MORE

Related Books