ಜಾನಪದ, ವೃತ್ತಿ ಹಾಗೂ ಹವ್ಯಾಸಿ-ಈ ಮೂರು ರಂಗಭೂಮಿಯ ಒಳಗನ್ನು ತೀರ ಹತ್ತಿರದಿಂದ ಬಲ್ಲವರು ಬಾಳಣ್ಣ ಶೀಗೀಹಳ್ಳಿ. ಅವರು ನಾಡ ರಂಗಭೂಮಿಯ ಕುರಿತು ಬರೆದ 29 ಲೇಖನಗಳನ್ನು ‘ಕನ್ನಡ ರಂಗಚಿಂತನೆ’ ಕೃತಿಯಲ್ಲಿ ಅಡಗಿವೆ. ‘ರಂಗಕಲಾ ಶಾಸ್ತ್ರ, ಕನ್ನಡ ರಂಗಭೂಮಿ : ಪರಂಪರೆ, ಕರ್ನಾಟಕ ರಂಗ ಅಧ್ಯಯನ, ಸಂಸರ ನಾಟಕಗಳು : ತಂತ್ರ ನಿರ್ಮಿತಿ, ಆನಂದಕಂದರ ನಾಟಕಗಳು : ವಸ್ತು-ವಿನ್ಯಾಸ, ಶ್ರೀರಂಗರ ರಂಗಚಿಂತನೆಗಳು, ಶ್ರೀರಂಗರ ಎರಡು ನಾಟಕಗಳು, ಕಂಪನಿ ನಾಟಕದ ಕವಿಗಳು : ರಂಗತಂತ್ರ-ಪ್ರಯೋಗಶೀಲತೆ, ಹವ್ಯಾಸಿ ರಂಗಭೂಮಿ : ಧಾರವಾಡ ಜಿಲ್ಲೆಯ ಕೊಡುಗೆ, ಸಣ್ಣಾಟ : ಉಗಮ-ವಿಕಾಸ, ಪ್ರಥಮ ಸಣ್ಣಾಟ : ಒಂದು ಅಧ್ಯಯನ, ಸಣ್ಣಾಟಗಳಲ್ಲಿ ಹಾಸ್ಯಪ್ರಜ್ಞೆ’ ಮುಂತಾದ ಲೇಖನಗಳು ಇಲ್ಲಿ ಕಾಣಬಹುದು.
ಹಿರಿಯ ಲೇಖಕ ಬಾಳಣ್ಣ ಶೀಗೀಹಳ್ಳಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ದೇಗಾವಿ ಗ್ರಾಮದವರು. ಪ್ರಾಧ್ಯಾಕರಾಗಿ ನಿವೃತ್ತರು. ‘ಡೆಪ್ಯೂಟಿ ಚೆನ್ನಬಸಪ್ಪನವರು: ಜೀವನ ಮತ್ತು ಸಾಧನೆ’ ಕುರಿತು ಮಹಾಪ್ರಂಬಂಧ ರಚಿಸಿದ್ದಾರೆ. ಕೃತಿ ಸಂಗಾತಿ, ರಂಗ ಸಂಗಾತಿ, ಪರಿಭಾವ, ಕನ್ನಡ ರಂಗಚಿಂತನೆ, ಚಿಂತಕರು-ಚಿಂತನಗಳು ಬಸವಣ್ಣ-ಮಹಾವೀರ, ಮರಿಕಲ್ಲಪ್ಪ ಮಲಶೆಟ್ಟಿ ಕೃತಿಗಳನ್ನು ಪ್ರಕಟಿಸಿದ್ದಾರೆ. ‘ರನ್ನನ ಸಾಹಸಭೀಮ ವಿಜಯ : ಪರಾಮರ್ಶೆ, ಫ. ಗು. ಹಳ್ಳಕಟ್ಟಿ ಸಮಗ್ರ ಸಾಹಿತ್ಯ ಸಂಪುಟ:9, ಬೆಳಗಾವಿ ಜಿಲ್ಲೆಯ ವೀರಶೈವ ದೇಶಗತಿಗಳು, ರಾಧಾನಾಟ, ಆತ್ಮ ಆವ ಕುಲ, ಸ್ಥಾವರವಲ್ಲದ ಬದುಕು, ಭರತ ಚಕ್ರಿಯ ದರ್ಶನ ಲೋಕ, ನಿಜ ಸುಖದ ನಿಲುವು ಮುಂತಾದ ಕೃತಿಗಳನ್ನು ...
READ MORE