ತಮ್ಮದು ಸೇರಿದಂತೆ ಸಾಮಾಜಿಕ ನೆಮ್ಮದಿಯ ಆಶಯದೊಂದಿಗೆ ತಮ್ಮ ಸುತ್ತಮುತ್ತಲಿನ ಸಾಮಾನ್ಯ ಬಡ ವ್ಯಕ್ತಿಗಳ ಬದುಕನ್ನು ಸೂಕ್ಷ್ಮವಾಗಿ ಅವಲೋಕಿಸಿ, ಸಂಕ್ಷಿಪ್ತವಾಗಿ ಕಟ್ಟಿಕೊಡುವ ಪ್ರಯತ್ನ’ಕಣ್ಣ ಮರೆಯ ಬದುಕು’ ಕೃತಿಯಲ್ಲಿದೆ. ಸಣ್ಣ ಸಣ್ಣ ವೃತ್ತಿಯಲ್ಲಿದ್ದೂ, ಕಷ್ಟಕೋಟಲೆಗಳ ಮಧ್ಯೆಯೂ ನಗುನಗುತ್ತಾ ಬದುಕುವ ಅವರ ಅಸಾಧಾರಣ ವ್ಯಕ್ತಿತ್ವವನ್ನುಬರೆಯುವ ಮೂಲಕ ’ಬದುಕನ್ನು ಹೀಗೆ ಪ್ರೀತಿಸಬೇಕು’ ಎಂಬ ಮಾದರಿಗಳನ್ನು ಮುಂದಿರಿಸಿದ್ದಾರೆ. ಶಿಕ್ಷಕರು, ನಾಟಿ ವೈದ್ಯರು, ಸಂಗೀತಗಾರರು, ಸಣ್ಣ ವ್ಯಾಪಾರಿಗಳು, ಫೋಟೋಗ್ರಾಫರ್ ಗಳ ಮಾದರಿ ಬದುಕು ಕೃತಿಯಲ್ಲಿ ಕಾಣಸಿಗುತ್ತದೆ.
ಶಹಾಪುರದ ಅಡತಿ ಅಂಗಡಿವೊಂದರಲ್ಲಿ ಗುಮಾಸ್ತರಾದ ಶಿವಣ್ಣ ಇಜೇರಿ ಅವರು ಸಾಹಿತ್ಯಾಸಕ್ತರು. ವಚನ ಸಾಹಿತ್ಯ ತತ್ವ ಅನುಯಾಯಿ. ಉಡಿಯಲ್ಲಿಯ ಉರಿ, ಆಧುನಿಕ ವಚನಗಳು , ಕರಗದ ಬೆಣ್ಣೆ ಹೀಗೆ 5 ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಶರಣರ ವಚನಗಳ ವಿಶ್ಲೇಷಕರು. ’ಬಸವ ಮಾರ್ಗ’ ಮಾಸಿಕದಲ್ಲಿ ಲೇಖಕರು. ಶರಣರ ವಿಚಾರ ಪ್ರಸಾರ-ಪ್ರಚಾರಕ್ಕಾಗಿ ಹಿರಿಯ ಸಾಹಿತಿ ದಿ.ಲಿಂಗಣ್ಣ ಸತ್ಯಂಪೇಟೆ ಅವರು ಬಸವ ಮಾರ್ಗ ಪ್ರತಿಷ್ಠಾನದಿಂದ ಆರಂಭಿಸಿದ”ಮನೆಯಲ್ಲಿ ಮಹಾಮನೆ’ ಚಿಂತನಾ ಚಟುವಟಿಕೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ...
READ MORE