‘ಕನವರಿಕೆ’ ಕೃತಿಯು ರಂಗಕರ್ಮಿ ಮಂಡ್ಯ ರಮೇಶ್ ಅವರ ಲೇಖನಗಳ ಸಂಕಲನವಾಗಿದೆ. ಕೃತಿಗೆ ಹಿನ್ನುಡಿ ಬರೆದಿರುವ ಚಲನಚಿತ್ರ ನಿರ್ದೆಶಕ ಬಿ. ಸುರೇಶ ಅವರು, ಕನವರಿಕೆಯ ಮೊದಲ ಭಾಗದಲ್ಲಿರುವ ರಂಗಭೂಮಿಯ ನಟನೆ, ಮಕ್ಕಳ ರಂಗಭೂಮಿಯನ್ನು ಕುರಿತ ಮಾತುಗಳು ನನಗೆ ಹೆಚ್ಚು ಆಪ್ತವಾದವು. ಅಭಿನಯವೆಂಬ ಕ್ರಿಯೆಗೆ ಅನುಭವ ದ್ರವ್ಯವೇ ಮೂಲ ಎಂಬ ನಿಲುವು ನಾಡಿನ ಅನೇಕ ಹೊಸಬರಿಗೆ, ಹಳಬರಿಗೂ ಹೊಸ ಪಾಠಗಳನ್ನು ಕಲಿಸಬಲ್ಲಂತಹದು. ಇಂತಹ ಲೇಖನವನ್ನೇ ಸಾಕ್ಷಿಯಾಗಿರಿಸಿಕೊಂಡು ಪ್ರಾಥಮಿಕ ಶಾಲೆಯ ಮಟ್ಟದಿಂದ ರಂಗ ಶಿಕ್ಷಣವನ್ನು ಪಠ್ಯದಲ್ಲಿ ತಂದುದಾದರೆ, ಪ್ರತೀ ಮಗುವಿನ ಒಳಗೂ ಆತ್ಮಸ್ಥೈರ್ಯ ಮಾತ್ರವಲ್ಲದೇ ಸಂಘ ಜೀವನದ ಅಗತ್ಯಗಳನ್ನು ಕಲಿಸಬಹುದು. ಇಂತಹ ಅನೇಕ ಪುರಾವೆಗಳು ಈ ಲೇಖನದಲ್ಲಿವೆ’ ಎಂದಿದ್ದಾರೆ.
ರಂಗಕರ್ಮಿ ಮಂಡ್ಯ ರಮೇಶ್ ಅವರು ಮೂಲತಃ ಮಂಡ್ಯದವರು. ರಂಗಭೂಮಿ ತಜ್ಞ, ನಟ, ನಿರ್ದೇಶಕ, ಕಲಾವಿದ, ಕಲಾಸಂಘಟಕ ಹಾಗೂ ರಂಗಶಿಕ್ಷಕ ಹೀಗೆ ಬಹುಮುಖ ಕಲಾವಿದರು. ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮನೆತನ, ಫೋಟೋಗ್ರಾಫರ್ ಪರಮೇಶಿ, ಮನೆತನ, ಮಂಥನ, ಒಂದೇ ಸುಳ್ಳು, ಜನನಿ, ಪಂಚರಂಗಿ, ಶ್ರೀರಸ್ತು ಶುಭಮಸ್ತು, ಇವಳು ಸುಜತಾ ಇನ್ನು ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದು, ಪ್ರಸ್ತುತ ಕಲರ್ಸ್ ಕನ್ನಡ ವಾಹಿನಿಯ ಮಜಾ ಟಾಕೀಸ್ ನಲ್ಲಿ ಹಾಸ್ಯ ನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೃತಿಗಳು : ಕನವರಿಕೆ, ನಿರ್ದೇಶಿತ ನಾಟಕಗಳು : ಮಹಿಮಾಪುರ, ಮಾರನಾಯಕ, ಬಂಕಾಪುರದ ಬಯಲಾಟ, ಚೋರ ಚರಣದಾಸ, ನಾಗಮಂಡಲ, ...
READ MORE