ಅಂತಃಕರಣ ಅವರ ಅಂಕಣ ಬರಹದ ಸಂಗ್ರಹ ಕಾಮನಬಿಲ್ಲು. ಹೈಸ್ಕೂಲ್ ವಿದ್ಯಾರ್ಥಿ ಬರೆದ ಆಯ್ದ ಎಂಬತ್ತು ಅಂಕಣ ಪ್ರಬಂಧಗಳ ಸಂಗ್ರಹ ಇದಾಗಿದೆ. ಹಿರಿಯ ಸಾಹಿತಿ ಜಿ.ಪಿ.ಬಸವರಾಜು ಮುನ್ನುಡಿ ಬರೆದಿದ್ದಾರೆ. ಈ ಅಂಕಣಗಳನ್ನು ಪರಿವಿಡಿಯಲ್ಲೇ ವಿಭಾಗಿಸಿ ಪ್ರಸ್ತುತಪಡಿಸಲಾಗಿದೆ. ಅದರಂತೆ ಶಾಲೆಯಂಗಳ, ಪುಸ್ತಕ ಪ್ರಪಂಚ, ವ್ಯಕ್ತಿ ಸ್ಫೂರ್ತಿ, ತಂತ್ರಜ್ಞಾನ ವಿಜ್ಞಾನ, ವಿಚಾರ ವಿಮರ್ಶೆ, ತಿರುಗಾಟ, ಸಿನಿಮಾ ಟಾಕೀಸು ಮತ್ತು ನನ್ನ ನಾಳೆ ನನ್ನ ಕನಸು ಎಂಬ ವಿಭಾಗಗಳಿವೆ. ಶಾಲೆಯಂಗಳ ಎಂಬ ಪ್ರಬಂಧದಲ್ಲಿ ತಾನು ಏಳನೇ ತರಗತಿಯವರೆಗೂ ಓದಿದ ಶಾಲೆ, ಅಲ್ಲಿನ ಗೆಳೆಯರು, ಪ್ರೀತಿಯ ಅಧ್ಯಾಪಕಿಯರು, ಆಟಗಳೆಲ್ಲದರ ಕುರಿತು ಮಗುಮನದ ನೋಟದ ಆತ್ಮೀಯ ಅಭಿವ್ಯಕ್ತಿಯ ಲೇಖನಗಳಿವೆ. ಯಾರದೋ ತಪ್ಪಿಗಾಗಿ ಶಿಕ್ಷಕರು ಗುಂಪು ಶಿಕ್ಷೆ ವಿಧಿಸಿದಾಗ ತಪ್ಪೆಸಗದ ಮೃದು ಮನದ ಮಗುವಿನ ಮನ ಘಾಸಿಗೊಳ್ಳುವ ಮೂಕ ವೇದನೆ, ಶಾಲೆಯ ಮೇಲಿನ ಮಹಡಿ ಹತ್ತಿ ಬರುವುದಕ್ಕೇ ರೋಮಾಂಚನಗೊಳ್ಳುವ ಮುಗ್ಧತೆ, ಪಾಠಗಳನ್ನು ಮುಗಿಸಬೇಕೆಂದು ಶಿಕ್ಷಕರು ಆಟದ ಪೀರಿಯಡ್ ಗಳನ್ನು ಬಳಸಿಕೊಂಡಾಗಿನ ಮಕ್ಕಳ ಮನದ ನೋವು, ಉತ್ತಮ ಬೋಧಕರೆಡೆಗಿನ ಪ್ರೀತಿ, ಇವುಗಳನ್ನೆಲ್ಲ ಅಂತಃಕರಣ ಈ ವಿಭಾಗದಲ್ಲಿ ಅದೆಷ್ಟು ಸುಲಲಿತವಾಗಿ ಹೊರಹೊಮ್ಮಿಸಿರುವನೆಂದರೆ ಓದುಗರಿಗೆ ಮಗುಮನದ ಈ ಮುಗ್ಧ ಅನಾವರಣ ತೀವ್ರವಾಗಿ ತಟ್ಟುತ್ತದೆ. ಕನ್ನಡ ಮಾತಾಡಬಾರದೆಂಬ ನಿಯಮವಿರುವಾಗ ಇವನು ಸ್ನೇಹಿತರು ಸೇರಿ ಕನ್ನಡದ ಹಾಡನ್ನು ಇಂಗ್ಲಿಷ್ಗೆ ಅದೇ ಮಟ್ಟಿನಲ್ಲಿ 'ಹೆಡ್ ಗಿರಗಿರಗಿರ ರೌಂಡಿಂಗ್'ಎಂಬಂತಹ ಸೃಜನಶೀಲತೆಯ ಭಾಷಾಂತರದ ಸ್ವಾರಸ್ಯಕರ ಪ್ರಸಂಗವಿದೆ. ಮೊಬೈಲ್, ಟ್ಯಾಬ್ ನಂತಹ ವಿದ್ಯುನ್ಮಾನ ಮಾಧ್ಯಮಗಳ ಕುರಿತು ಈತನದು ತಂತ್ರಜ್ಞಾನದ ಅರಿವು. appವೊಂದು ಕನ್ನಡ ಸ್ನೇಹಿಯಾಗಿರುವದನ್ನು ಗಮನಿಸಿದ್ದಾನೆ. ಮತ್ತೊಂದು appನ ವಿನ್ಯಾಸ ಅಷ್ಟೊಂದು ಗುಣಮಟ್ಟದ್ದಲ್ಲ, ವೀಡಿಯೋ ಲೋಡ್ ಆಗುವಾಗ ಕಾಯಿಸುತ್ತದೆ ಎನ್ನುತ್ತಲೇ ಅದು ಉಚಿತವಾದ್ದರಿಂದ ಈ ಕಿರಿಕಿರಿ ಸಹನೀಯ ಎನ್ನುವ ಪ್ರಬುದ್ಧತೆ ತೋರಿಸುತ್ತಾನೆ. ಇಂಗ್ಲಿಷ್ ಭಾಷಾ ಸಂಪತ್ತು ಹೆಚ್ಚಿಸಬಲ್ಲ ಆಟಗಳ ಕುರಿತೇ ಒಂದು ಅಂಕಣವಿದೆ.
ಅಂತಃಕರಣ ತನ್ನ 4ನೇ ಕ್ಲಾಸಿನಿಂದ 'ಎಚ್ಚರಿಕೆ', 'ಜೀವನ್ಮುಖಿ' ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲ ಪತ್ರಿಕೆ 'ವಿಶ್ವಕನ್ನಡಿಗ'ದಲ್ಲಿ ವಾರಕ್ಕೆ 2 ಅಂಕಣ ಬರೆಯುತ್ತಿರುವ ಅಂಕಣಕಾರ. ಇದುವರೆಗೆ ಕ್ರೀಡಾಂಕಣಗಳೂ ಸೇರಿದಂತೆ 500 ಅಂಕಣಪ್ರಬಂಧ, 95 ಕವಿತೆ, 78 ಕತೆ, 4 ಕಾದಂಬರಿ ಮತ್ತು 1 ನಾಟಕಗಳನ್ನು ರಚಿಸಿರುವ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆಯುವ ಲೇಖಕ. 9ನೇ ತರಗತಿಯೊಳಗೆ 4 ಸಮಗ್ರ ಬರಹಗಳ ಕೃತಿಗಳು ಸೇರಿದಂತೆ ಒಟ್ಟು 30 ಕೃತಿಗಳನ್ನು ರಚಿಸಿರುವ ಪುಟ್ಟ ಸಾಹಿತಿ. ಪ್ರಸ್ತುತ ಶಿವಮೊಗ್ಗದ ಲೊಯಲಾ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ. ಕನ್ನಡ ಪ್ರವೇಶ, ಕಾವ ಸಾಹಿತ್ಯ ಪರೀಕ್ಷೆಗಳಲ್ಲಿ ಮತ್ತು ...
READ MORE