ಕಲಿಭಾರತ’ ಕೃತಿಯು ಓಂ ಪ್ರಕಾಶ್ ಅವರು ಜಗತ್ತಿನ ಅತ್ಯಂತ ದೊಡ್ಡ ಕನಸುಗಳು ಕುರಿತ ಬರವಣಿಗೆಯಾಗಿದೆ. ಕೃತಿಯ ಬೆನ್ನುಡಿಯಲ್ಲಿ ಲೇಖಕ ಹೀಗೆ ವಿಚಾರವನ್ನು ಪ್ರಸ್ತಾಪಿಸುತ್ತಾರೆ. 5 ಲೀಟರ್ ನೀರಲ್ಲಿ ಸ್ನಾನ ಮಾಡಿ, ದಿನಕ್ಕೆ 50 ಲೀಟರ್ ನೀರು ಮಾತ್ರ ಬಳಸ್ತಾ, ಸ್ವಂತ ವಾಹನ ಖರೀದಿಸದೇ ಬಸ್, ಮೆಟ್ರೋ, ಸೈಕಲ್ ನಲ್ಲಿ ಓಡಾಡ್ತಾ, ಒಂದು ತುಂಡು ಕಸವನ್ನೂ ಡಸ್ಟ್ ಬಿನ್ ಬಿಟ್ಟು ಬೇರೆಲ್ಲೂ ಎಸೆಯದೇ, ಜೀವನದಲ್ಲಿ ಒಂದು ಎಕ್ಸಾಂನಲ್ಲೂ ಕಾಪಿ ಹೊಡೆಯದೇ, ಒಂದು ತುತ್ತು ಅನ್ನವನ್ನೂ ಹಾಳು ಮಾಡದೇ, ಪ್ಲ್ಯಾಸ್ಟಿಕ್ ಅತೀ ಅನಿವಾರ್ಯವಾದರೆ ಮಾತ್ರ ಬಳಸ್ತಾ ಪ್ರತೀ ಹೆಜ್ಜೆಯಲ್ಲೂ ನೈತಿಕವಾಗಿ, ನೈಸರ್ಗಿಕವಾಗಿ ಬದುಕುವ ಪ್ರಯತ್ನದಲ್ಲಿದ್ದೇನೆ ಎಂದಿದ್ದಾರೆ. ಅದೊಂಥರಾ ರೆಬೆಲ್ ರಸಿಕ ನಾನು. ಚಡ್ಡಿ ಉಡಿದಾರಕ್ಕೆ ಸಿಕ್ಕಿಸಿಕೊಳ್ತಿದ್ದ ದಿನಗಳಲ್ಲೇ ರಸ್ತೆಗೆ ಅಡ್ಡ ನಿಂತು ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಿದ್ದೆ. ಅಮ್ಮ ಅಪ್ಪ ಅನುಭವಿಸಿದ ಯಾತನೆ ನೋಡಿ ಮನಸ್ಸು ಕುದ್ದು ಹೋಗಿತ್ತು. ಅನ್ನಕ್ಕೂ ಕಷ್ಟವಿದ್ದ ಮನೆಯಲ್ಲಿ ಹಠಕ್ಕೆ ಬಿದ್ದ ಸಮಾಜವನ್ನು ಸರಿ ಮಾಡಲೇಬೇಕು ಅಂತ ಜರ್ನಲಿಸಂ ಓದಿದೆ. 10 ವರ್ಷ ರಾಜ್ಯದ ಪ್ರಮುಖ ನ್ಯೂಸ್ ಚಾನೆಲ್, ಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿದೆ. ಮನೆಯಿಂದ ಸ್ಕೂಲು, ಕಾಲೇಜು, ಹಾಸ್ಟೆಲ್, ವೃತ್ತಿ, ಸಮಾಜ ಎಲ್ಲೆಲ್ಲೂ ಬೆತ್ತಲೆ ರಾಜ್ಯದಲ್ಲಿ ಬಟ್ಟೆ ಹಾಕಿ ಸುತ್ತಾಡಿದೆ. ಸಮಾಜವನ್ನು ಶ್ರೇಷ್ಠವಾಗಿಸೋಕೆ ಇದ್ಯಾವುದೂ ಸರಿಯಾದ ದಾರಿ ಅಲ್ಲ ಅನಿಸಿದಾಗ ಕಂಡುಕೊಂಡ ಸರಿದಾರಿ ಈ ಕಲಿಭಾರತ’ ಎಂದಿದ್ದಾರೆ.
ಲೇಖಕ ಓಂ ಪ್ರಕಾಶ್ ಅವರು ಮೂಲತಃ ಬೆಂಗಳೂರಿನವರು. ಪ್ರಸ್ತುತ ನ್ಯೂಸ್ 18 ಚಾನೆಲ್ ನಲ್ಲಿ ವರದಿಗಾರರಾಗಿದ್ದಾರೆ . ಕೃತಿಗಳು : ಕಲಿಭಾರತ ...
READ MORE