ಡಾ. ರೋಲೇಕರ್ ನಾರಾಯಣ ಅವರ ಸಂಪಾದಕತ್ವದ ಕೃತಿ-ಕಲಾ ಕನ್ನಡ-1. ಮುಖ್ಯವಾಗಿ ಐದು ಭಾಗಗಳಿದ್ದು, ಕನ್ನಡ ನಾಡು ನುಡಿ ಚಿಂತನೆಯಲ್ಲಿ ಕರ್ನಾಟಕದ ಗತವೈಭವ,ಕನ್ನಡ ಮಾತು ತಲೆ ಎತ್ತುವ ಬಗೆ, ಕನ್ನಡವನ್ನು ಕಟ್ಟುವ ಕೆಲಸ ಕುರಿತು, ಭಾಗ 2 ರಲ್ಲಿ ಬೇಂದ್ರೆಯವರ ಪ್ರಕೃತಿಯ ಕವನಗಳು,ಕುವೆಂಪು ಅವರ ಪ್ರಕೃತಿಯ ಕವನಗಳು, ಜಿಎಸ್ ಶಿವರುದ್ರಪ್ಪನವರ ಪ್ರಕೃತಿಯ ಕವನಗಳ ಕುರಿತು,ಮಾಹಿತಿ, ಭಾಗ-3 ರಲ್ಲಿ ಮಹಾತ್ಮ ಗಾಂಧೀಜಿ ಅವರ ಬಾಲ್ಯ,ಡಾ.ಬಿ.ಆರ್ ಅಂಬೇಡ್ಕರ್ ಅವರ ಬಾಲ್ಯ, ಮಹಾಕವಿ ಕುವೆಂಪು ಅವರ ಬಾಲ್ಯ, ಕುರಿತು ಮಾಹಿತಿ, ಭಾಗ 4 ರಲ್ಲಿ ಕುವೆಂಪು ಅವರ ನೆನಪಿನ ದೋಣಿಯಲ್ಲಿ,ಸಮಾಜವಾದಿ ಶಾಂತವೇರಿ ಗೋಪಾಲಗೌಡರು, ಎದೆಗೆ ಬಿದ್ದ ಅಕ್ಷರ, ಸ್ಥಾವರಕ್ಕಳಿವುಂಟು,ಎನ್ನುವ ಲೇಖನಗಳಿವೆ. ಈ ಕೃತಿಯು ಕಲಬುರಗಿಯ ಸ್ವಾಯತ್ತ ಸರಕಾರಿ ಪದವಿ ಮಹಾವಿದ್ಯಾಲಯದ ಪಠ್ಯಪುಸ್ತಕವಾಗಿ ಆಯ್ಕೆಗೊಂಡಿದೆ.
ಲೇಖಕ ಡಾ.ರೋಲೆಕರ್ ನಾರಾಯಣ ಅವರು ಎಂ.ಎ ಪಿಎಚ್.ಡಿ ಪದವೀಧರರು. ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರು. ಪಿಎಚ್. ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರು. ಸಾಹಿತ್ಯ ಸಂಸ್ಕೃತಿಯನ್ನು ಕುರಿತು ಅನೇಕ ಲೇಖನಗಳನ್ನು, ಪ್ರಬಂಧಗಳನ್ನು ಬರೆದಿದ್ದಾರೆ. ಕೃತಿಗಳು: ಕಥಾ ಕುಸುಮ,ಕಥಾಸಂಗ್ರಹ, ಹಳಗನ್ನಡ ಕಾವ್ಯ ಸಂಗ್ರಹ,ಕಲಾ ಕನ್ನಡ-ಈ ಕೃತಿಗಳನ್ನು ಸಂಪಾದಿಸಿದ್ದಾರೆ. ...
READ MORE