'ಕಾಡು - ಮೇಡು' ವನ್ಯಜೀವಿಗಳ ಕುತೂಹಲ ಲೋಕ ಪತ್ರಕರ್ತ, ಕವಿ, ಲೇಖಕ, ಛಾಯಾಗ್ರಾಹಕ ಹಾಗೂ ಪರಿಸರ ಪ್ರೇಮಿ. ಮಾಲತೇಶ ಅಂಗೂರ ಅವರು ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತರು. ಅವರದೇ ಅಭಿಮಾನಿ ಓದುಗರೂ ಇದ್ದಾರೆ. "ಹಿರಿಯರಾದ ಅವರ ಅನುಭವವೂ ಬಹಳ ದೊಡ್ಡದು. ಲೇಖಕ ಮಾಲತೇಶ ಅಂಗೂರವರು ಪರ್ತಕರ್ತರಾಗಿ ಸುಮಾರು ಮೂರು ದಶಕಗಳಿಂದ ಹಾವೇರಿಯಲ್ಲಿ ಕಾರ್ಯನಿರತರಾಗಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಅವರ 'ಹಾವೇರಿಯಾಂವ್' ಅಂಕಣ ಬರಹಗಳ ಸಂಕಲನ ಒಂದು ಅದ್ಭುತವಾದ ಶ್ರೇಷ್ಠ ಕೃತಿಯಾಗಿದೆ. ಅವರು ನಿರ್ಬಿಡೆಯ ಬರಹದಿಂದ ಖ್ಯಾತರಾದವರು. ಛಾಯಾಚಿತ್ರ ತೆಗೆಯುವದನ್ನು ತಮ್ಮ ಹವ್ಯಾಸವನ್ನಾಗಿಸಿಕೊಂಡಿದ್ದಾರೆ. 'ಕಾಡು-ಮೇಡು' ಅವರ ಇತ್ತೀಚಿಗಿನ ಕೃತಿ. ಹೆಸರೇ ಹೇಳುವಂತೆ ಇದು ಕಾಡಿನಲ್ಲಿಯ ವನ್ಯಜೀವಿಗಳ ಕುರಿತಾದ ಲೇಖನಗಳು ಮತ್ತು ಛಾಯಾಚಿತ್ರಗಳನ್ನು ಒಳಗೊಂಡಿರುವ ಕೃತಿಯಾಗಿದೆ. ನಮ್ಮ ಹಾವೇರಿಯ ಸುತ್ತಮುತ್ತಲ ಕಾಡು, ಕೆರೆ, ಬೆಟ್ಟ ಗುಡ್ಡಗಳಲ್ಲಿಯ ಜೀವಿಗಳ ಕುರಿತಾಗಿ, ಅವುಗಳ ವೈಜ್ಞಾನಿಕ ಹೆಸರು, ಉಪಯೋಗಗಳು ಮತ್ತು ಅದಕ್ಕಿರುವ ಮಹತ್ವವನ್ನು ಲೇಖನಗಳಲ್ಲಿ ವ್ಯಕ್ತಪಡಿಸಿದ್ದಾರೆ. ಕೆಲವು ಮಹತ್ವಪೂರ್ಣ ಅಂಕಿ ಸಂಖ್ಯೆಗಳನ್ನೂ ಮತ್ತು ತಾವು ಚಿತ್ರ ತೆಗೆದಾಗಿನ ಸಂದರ್ಭವನ್ನು ವಿವರವಾಗಿ ಬರೆದಿದ್ದಾರೆ. ಅಭ್ಯಾಸ ನಿರತ ವಿದ್ಯಾರ್ಥಿಗಳಿಗೆ,ಶಿಕ್ಷಕರಿಗೆ ಮತ್ತು ಸಾಮಾನ್ಯರಿಗೂ ಈ ಕೃತಿ ಅಮೂಲ್ಯ ಸಂಪನ್ಮೂಲವಾಗಿದೆ.
ಲೇಖಕ ಮಾಲತೇಶ ಅಂಗೂರ ಮೂಲತಃ (ಜನನ: 03-07-1969) ಹಾವೇರಿಯವರು. ಕೌರವ ದಿನಪತ್ರಿಕೆಯ ಮುಖ್ಯ ವರದಿಗಾರರು. ಅಂಕಣ ಬರಹ, ಕವಿತೆ, ಕಥೆಗಳ ರಚನೆ. ಯೋಗಾಸನ, ಕ್ರಿಕೆಟ್, ಟೆನಿಸ್‌ನಲ್ಲಿ ಆಸಕ್ತರು. ವನ್ಯಜೀವಿಗಳ ಛಾಯಾಚಿತ್ರಗಳಿಗೆ ರಾಜ್ಯ-ಅಂತರ್ ರಾಷ್ಟ್ರೀಯ ಮನ್ನಣೆ ದೊರೆತಿದೆ. ‘ಹಾವೇರಿಯಾಂವ್ ಎಂಬುದು ಅವರ ಪತ್ರಿಕಾ ಅಂಕಣ ಬರಹಗಳ ಸಂಗ್ರಹ ಕೃತಿ. ‘ಬಣ್ಣದ ಗರಿ’ ಅಂಕಣ ಬರಹಗಳ ಕೃತಿ. 2016-17ನೇ ಸಾಲಿನಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಅತ್ಯುತ್ತಮ ಅಂಕಣ ಬರಹ ಮಾಧ್ಯಮ ಪ್ರಶಸ್ತಿ, ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನದ ಹಾಗೂ ಸಂಪಾದಕರ ಸಂಘದ ಅತ್ಯುತ್ತಮ ಅಂಕಣ ಬರಹ ರಾಜ್ಯ ಪ್ರಶಸ್ತಿ ...
READ MORE"ಕಾಡು-ಮೇಡು" ವನ್ಯಜೀವಿಗಳ ಕುತೂಹಲ ಲೋಕ www.haverivani.in