ಕಾಡುತಾವ ನೆನಪು

Author : ಸ್ವಾಮಿರಾವ್ ಕುಲಕರ್ಣಿ

Pages 132

₹ 100.00




Year of Publication: 2018
Published by: ಶಿರಪುರ ಪ್ರಕಾಶನ
Address: ಪ್ಲಾಟ್ ನಂ.11, ಮನೆ ನಂ.10-934/42, ಮಹಾಲಕ್ಷ್ಮಿ ನಗರ, ಬ್ರಹ್ಮಪುರ, ಕಲಬುರಗಿ- 585103

Synopsys

‘ಕಾಡುತಾವ ನೆನಪು’ ಲೇಖಕ ಸ್ವಾಮಿರಾವ ಕುಲಕರ್ಣಿ ಅವರ ಲೇಖನ ಸಂಕಲನ. ಈ ಕೃತಿಯಲ್ಲಿ ಒಟ್ಟು 25 ಲೇಖನಗಳಿವೆ. ಈ ಚಪ್ಪಲಿ ಹರಿದಮ್ಯಾಲ ಮತ್ತೆ ಕೊಡಿಸುವರ್‍ಯಾರು? - ಕವಿ ಈಶ್ವರ ಸಣಕಲ್ಲ, ಕನ್ನಡದ ಕಿರೀಟಗಳು- ವಿಕೃಗೋಕಾಕ, ರಂ. ಶ್ರೀ ಮುಗಳಿಯವರ ಸಾಮಿಪ್ಯದಲ್ಲಿ ಎರಡು ದಿನಗಳು, ಜ್ಞಾನಪೀಠ ಗೌರವದ ಶಿವರಾಮ ಕಾರಂತರಿಗೆ ವೈಭವದ ಸನ್ಮಾನ, ನಾನು ಪುಸ್ತಕ ಬಿಡುಗಡೆ ಮಾಡ್ತೀನಿ- ಸರಳ ಸ್ವಭಾವದ ಶಿವರಾಮ ಕಾರಂತರು, ಜವಾರಿ ಮಾತುಗಾರ- ರಾವ್ ಬಹದ್ದೂರ್, ಮನ್ಯಾಗ ಇಳಿಸಿಕೊಂಡಿದ್ರ ಛೋಲೋ ಇತ್ತು- ಕೀರ್ತಿನಾಥ ಕುರ್ತಕೋಟಿ, ಮದ್ರಾಸಿನಲ್ಲಿ ಕನ್ನಡ ನಾಟಕ ನೋಡಲು ಬಂದ ಗಾನ ಕೋಗಿಲೆ- ಪಿ.ಬಿ. ಶ್ರೀನಿವಾಸ ಸೇರಿದಂತೆ ಹಲವು ವ್ಯಕ್ತಿಚಿತ್ರಗಳು ಹಾಗೂ ಅನುಭವ ಕಥನಗಳಂತ ಲೇಖನಗಳಿವೆ.

 

About the Author

ಸ್ವಾಮಿರಾವ್ ಕುಲಕರ್ಣಿ

ಶಿರಪುರ ಪ್ರಕಾಶನದ ಪ್ರಕಾಶಕರು ಹಾಗೂ ಲೇಖಕರು ಆಗಿರುವ ಸ್ವಾಮಿರಾವ ಕುಲಕರ್ಣಿ ಅವರು ವೃತ್ತಿಯಲ್ಲಿ ಅಧ್ಯಾಪಕರು. ಕನ್ನಡ ಸಾಹಿತ್ಯದಲ್ಲಿ ಪದವಿ ಹಾಗೂ ದಾಸ ಸಾಹಿತ್ಯ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಇವರು ಸುಮಾರು 19 ವರ್ಷಗಳ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತಿ ಇದ್ದ ಇವರು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.  ಗೋನವಾರದ ರಾಮದಾಸರು, ಹಳ್ಳಿಯಿಂದ ದಿಲ್ಲಿಗೆ, ಕಳದೈತೋ ಪ್ರೀತಿ ಕಳದೈತಿ, ರಂಗ ನಾಟಕಗಳ ರಸಪ್ರಸಂಗಗಳು, ಬಾನಂಗಳದಿಂದ, ದಾಸ ದರ್ಶನ, ಹುಟ್ಟಿ ಬೆಳೆದಾ ಹಳ್ಳಿ, ಪುರಂದರದಾಸರು, ಮಂಥನ, ಮಂತ್ರಾಲಯದ ರಾಘವೇಂದ್ರರು ಮುಂತಾದವು ಇವರ ...

READ MORE

Related Books