ಲೇಖಕ ಪ್ರತಾಪ್ ಸಿಂಹ ಅವರ ಕೃತಿ ʻಜುಲೈ 26 ಕಾರ್ಗಿಲ್ ವಿಜಯ ದಿನʼ. ಪುಸ್ತಕವು 1999ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕಾರ್ಗಿಲ್ನಲ್ಲಿ ನಡೆದ ಆಪರೇಷನ್ ವಿಜಯ್ ಮಿಷನ್ನ ಗೆಲುವಿನ ನೆನಪಿಗಾಗಿ ಆಚರಿಸುವ ಕಾರ್ಗಿಲ್ ವಿಜಯ ದಿವಸದ ಕುರಿತು ಹೇಳುತ್ತದೆ. ರಂದು ಕಾರ್ಗಿಲ್ ಯುದ್ಧ ಕೊನೆಗೊಂದಿತು. ಶತ್ರು ದೇಶದ ವಿರುದ್ದದ ವಿಜಯದ ಸಂಕೇತವಾಗಿರುವ 1999 ರ ಜುಲೈ 26ನ್ನು ಪ್ರತಿವರ್ಷ ಆಚರಿಸಲಾಗುತ್ತದೆ. ಈ ಮೂಲಕ ಕಾರ್ಗಿಲ್ ಯುದ್ಧದಲ್ಲಿ ವೀರಮರಣವನ್ನು ಹೊಂದಿರುವ ಭಾರತದ ಸೇನೆಯ ಪ್ರಮುಖ ಅಧಿಕಾರಿಗಳು ಸೇರಿದಂತೆ 527 ಯೋಧರ ಯೋಧರ ತ್ಯಾಗ, ಬಲಿದಾನಗಳನ್ನು ಸ್ಮರಿಸಲಾಗುತ್ತದೆ. ಈ ಎಲ್ಲಾ ವಿಚಾರಗಳನ್ನು ಮತ್ತೆ ನೆನಪಿಸುವ ಪ್ರಯತ್ನ ಈ ಪುಸ್ತಕದಲ್ಲಿ ನಡೆದಿದೆ.
ಪ್ರತಾಪ್ ಸಿಂಹ ಮೂಲತಃ ಸಕಲೇಶಪುರದವರು. ಪದವಿ ಪೂರ್ವ ಶಿಕ್ಷಣವನ್ನು ಚಿಕ್ಕಮಗಳೂರಿನಲ್ಲಿ ಮುಗಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿರುವ ಎಸ್.ಡಿ.ಎಂ ಕಾಲೇಜಿನಿಂದ ಮನಃಶಾಸ್ತ್ರ ಹಾಗೂ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದಾರೆ. ಎಂಸಿಜೆ ಮಂಗಳೂರಿನಿಂದ ಪತ್ರಿಕೋದ್ಟಮದಲ್ಲಿ ಸ್ನಾತ್ತಕೋತ್ತರ ಪದವಿ ಹಾಗೂ ಎಂ ಐ ಸಿ ಇ ಮಂಗಳೂರಿನಿಂದ ಕಂಪ್ಯೂಟರ್ ಅಪ್ಲಿಕೇಷನ್ಸ್ ಡಿಪ್ಲೊಮಾ ಪೂರ್ಣಗೊಳಿಸಿದ್ದಾರೆ. ವಿಜಯ ಕರ್ನಾಟಕದಲ್ಲಿ ಬೆತ್ತಲೆ ಜಗತ್ತು, ಕನ್ನಡಪ್ರಭದಲ್ಲಿ ಸುದ್ದಿ ಸಂಪಾದಕರಾಗಿ ಬೆತ್ತಲೆ ಪ್ರಪಂಚ ಅಂಕಣ ಬರೆಯುತ್ತಿದ್ದರು. ಬೆತ್ತಲೆ ಜಗತ್ತು- 14 ಪುಸ್ತಕಗಳು ( ಅಂಕಣ ಬರಹಗಳ ಸಂಗ್ರಹ), ನರೇಂದ್ರ ಮೋದಿ (ಯಾರೂ ತುಳಿಯದ ಹಾದಿ), ಟಿಪ್ಪು ಸುಲ್ತಾನ ಸ್ವಾತಂತ್ರವೀರನಾ, ಮೈನಿಂಗ್ ಮಾಫಿಯಾ, ಮೋದಿ ಮುಸ್ಲಿಂ ...
READ MORE