ಜ್ಞಾನಮ್‌ ವಿಜ್ಞಾನ ಸಹಿತಮ್

Author : ಮಹಾಬಲೇಶ್ವರ ರಾವ್

Pages 176

₹ 130.00




Year of Publication: 2010
Published by: ವಿಸ್ಮಯ ಪ್ರಕಾಶನ
Address: ವಿಸ್ಮಯ ಪ್ರಕಾಶನ 'ಮೌನ', 366, ನವಿಲು ರಸ್ತೆ, ಕುವೆಂಪುನಗರ, ಮೈಸೂರು-23
Phone: 9008798406

Synopsys

ಲೇಖಕ ಮಹಾಬಲೇಶ್ವರ ರಾವ್ ಅವರ ಲೇಖನ ಕೃತಿ ʼಜ್ಞಾನಮ್ ವಿಜ್ಞಾನ‌ ಸಹಿತಮ್ʼʼ.‌ ಮಾಜಿ ರಾಷ್ಟ್ರಪತಿ ಡಾ. ಸರ್ವಪಳ್ಳಿ ರಾಧಾಕೃಷ್ಣನ್‌ ಅವರ ತತ್ವಶಾಸ್ತ್ರದ ಬಗೆಗಿನ ಆಸಕ್ತಿ, ಅವರು ಮಾಡಿದ ಭಾಷಣಗಳು, ನೀಡಿದ ಉಪನ್ಯಾಸಗಳು ಹೀಗೆ ಅವರ ಕುರಿತಾದ ಹಲವಾರು ಆಸಕ್ತಿದಾಯಕ ವಿಷಯಗಳನ್ನು ಇಲ್ಲಿ ಚರ್ಚಿಸಲಾಗಿದೆ. ಲೇಖಕ ಎಚ್.ಎಸ್. ಉಮೇಶ ಅವರು ಪುಸ್ತಕದ ಬೆನ್ನುಡಿಯಲ್ಲಿ, “ಡಾ. ಮಹಾಬಲೇಶ್ವರ ರಾವ್ ಕನ್ನಡ ನಾಡಿನ ಶಿಕ್ಷಣ ಚಿಂತಕರಲ್ಲಿ ಅಗ್ರಗಣ್ಯರು. ಅವರ ಚಿಂತನೆ ಶಿಕ್ಷಣದ ಸೈದ್ಧಾಂತಿಕ ವಿಷಯಗಳಿಗೆ ಮಾತ್ರ ಸೀಮಿತಗೊಳ್ಳದ, ಅನುದಿನದ ಶೈಕ್ಷಣಿಕ ಪ್ರಕ್ರಿಯೆಯ ಅನುಷ್ಠಾನದಲ್ಲಿನ ಓರೆಕೋರೆಗಳ ಉಪಯುಕ್ತ ವಿಮರ್ಶೆಯನ್ನೂ ಒಳಗೊಂಡಿದೆ. ಹಾಯಬೇಡಿ ಒದಯಬೇಡಿ, ಶಿಕ್ಷಣ ಲೋಕ, ಸ್ಥಿತ್ಯಂತರ, ಅಸಮಾನತೆಯ ನಾಡಿನಲ್ಲಿ ಶಿಕ್ಷಣ, ಸೃಜನಶೀಲತೆ ಮುಂತಾದ ಪ್ರಬುದ್ಧ ಕೃತಿಗಳ ಮೂಲಕ ಶಿಕ್ಷಣ ಸಾಹಿತ್ಯಸ್ಥ ಅನುಪಮವಾದ ಕೊಡುಗೆಯನ್ನು ನೀಡಿದ್ದಾರೆ. ಪಠ್ಯಕ್ರಮವನ್ನು ಅನುಸರಿಸಿದ ಪುಸ್ತಕಗಳಾಚೆಗಿನ ಚಿಂತನೆಗಳನ್ನು ಕೃತಿ ರೂಪಕ್ಕೆ ತಂದು ಕನ್ನಡದಲ್ಲಿನ ಶಿಕ್ಷಣ ಸಾಹಿತ್ಯವನ್ನು ಶ್ರೀಮಂತ ರೂಪಕ್ಕೆ ತರುವ ಪ್ರಯತ್ನ ಮಾಡಿದ ಮಹಾಬಲೇಶ್ವರ ರಾವ್‌ ಅವರು ಜ್ಞಾನಮ್ ವಿಜ್ಞಾನ‌ ಸಹಿತಮ್ ಮೂಲಕ ಮತ್ತೊಂದು ಹಾದಿಯಲ್ಲಿನ ಮೊದಲ ಹೆಜ್ಜೆಗಳನ್ನಿಟ್ಟಿದ್ದಾರೆ. ಶಿಕ್ಷಣ ಚಿಂತಕರ ಮೂಲ ಸಾಹಿತ್ಯ ಕನ್ನಡದಲ್ಲಿ ಉಪಲಬ್ದವಿರುವುದು ಅತ್ಯಲ್ಪ. ಈ ಕೊರತೆಯನ್ನು ನೀಗಿಸುವ ಕೆಲಸವನ್ನು ಅವರಿಲ್ಲಿ ಮಾಡಿದ್ದಾರೆ. 'ಜಾನಮ್ ವಿಜ್ಞಾನ ಸಹಿತಮ್' ಎಸ್. ರಾಧಾಕೃಷ್ಣನ್‌ರ ಆಯ್ದ ಶೈಕ್ಷಣಿಕ ಬರಹಗಳ ಅನುವಾದ ಕೃತಿಯಾಗಿದೆ. ಇಪ್ಪ ತ್ತಾರು ಬರಹಗಳರುವ ಈ ಕೃತಿ ತತ್ವಜ್ಞಾನಿ ರಾಧಾಕೃಷ್ಣನ್ ಅವರ ಶೈಕ್ಷಣಿಕ ಚಿಂತನೆಗಳ ತೋರುಬೆರಳಾಗಿವೆ. ಭಾರತೀಯ ದರ್ಶನವನ್ನು ತಮ್ಮ ಮೂಲಧಾತುವಾಗಿಟ್ಟುಕೊಂಡು ಯೋಚಿಸುವ ಅವರ ಆಲೋಚನ ಶಿಕ್ಷಣವನ್ನು ಆಧ್ಯಾತ್ಮಿ ಕರಣಗೊಳಸುತ್ತದೆ. ಆದರೆ ಅದು ಇಂದಿನ ವಾಸ್ತವಕ್ಕೆ ಬೆನ್ನು ಹಾಕುವುದಿಲ್ಲ. ಆದುದರಿಂದಲೇ ರಾಧಾಕೃಷ್ಣನ್ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿರುವುದು. ಇಂತಹ ಪ್ರಸ್ತುತ ಚಿಂತನೆಗಳನ್ನು ಮೂಲತಃ ಕನ್ನಡದಲ್ಲಿಯೇ ಆಲೋಚಿಸಿ ರಬೇಕನಿಸುವಷ್ಟರ ಮಟ್ಟಗೆ ಮಹಾಬಲೇಶ್ವರ ರಾವ್ ಕನ್ನಡೀ ಕರಿಸಿದ್ದಾರೆ. ರಾಧಾಕೃಷ್ಣನ್‌ರನ್ನು ಶಿಕ್ಷಣವನ್ನು ಅಧ್ಯಯನ ಮಾಡಬಯಸುವವರೆಲ್ಲರೂ ಅವಶ್ಯವಾಗಿ ಓದಬೇಕಾದ ಕೃತಿ ಇದು” ಎಂದು ಹೇಳಿದ್ದಾರೆ.

About the Author

ಮಹಾಬಲೇಶ್ವರ ರಾವ್

ಮಹಾಬಲೇಶ್ವರ ರಾವ್ ಅವರು 1952ರಲ್ಲಿ ಉಡುಪಿ ಜಿಲ್ಲೆಯ ಮಣೂರಿನಲ್ಲಿ ಜನಿಸಿದರು. ಎಂ.ಎ., ಎಂ.ಎಡ್ ಮತ್ತು ಪಿಎಚ್.ಡಿ. ಪದವೀಧರರಾದ ಅವರು ಆರು ವರ್ಷ ಪ್ರೌಢಶಾಲಾ ಕನ್ನಡ ಶಿಕ್ಷಕರಾಗಿ, ಮೂರು ವರ್ಷ ಆಕಾಶವಾಣಿಯ ಭದ್ರಾವತಿ ಹಾಗೂ ಮಂಗಳೂರು ಕೇಂದ್ರಗಳಲ್ಲಿ ಪ್ರಸಾರಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಹಾಬಲೇಶ್ವರ ರಾವ್‌ ಕಳೆದ ನಾಲ್ಕು ದಶಕಗಳಿಂದ ಕನ್ನಡ ಭಾಷಾ ಬೋಧನೆ, ಬರವಣಿಗೆ, ಭಾಷಣ, ಸಾಹಿತ್ಯ ಮೊದಲಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಲೇಖಕರಾಗಿ, ಅನುವಾದಕರಾಗಿ, ಅಂಕಣಕಾರರಾಗಿ ತಮ್ಮದೇ ಛಾಪು ಮೂಡಿಸಿರುವ ಅವರು 14ವರ್ಷ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ.  ’ಉದಯವಾಣಿ’, ’ಪ್ರಜಾವಾಣಿ’, ’ತರಂಗ’, ’ಹೊಸತು’ ಮೊದಲಾದ ಕನಡ ದಿನಪತ್ರಿಕೆ, ಮ್ಯಾಗಸೈನ್‌ಗಳಲ್ಲಿ ಅವರ ನೂರಾರು ಲೇಖನಗಳನ್ನು ಪ್ರಕಟಣೆ ಕಂಡಿವೆ.  ...

READ MORE

Related Books