‘ಜೀವನ ಕಥನ’ ಎಚ್.ಟಿ. ಪೋತೆಯವರು ರಚಿಸಿದ ಚಿಂತಕರ ಜೀವನ ಗಾಥೆಗಳ ಸಂಕಲನ. ಇಲ್ಲಿ ಬುದ್ಧ ಬಸವಾದಿ ಶರಣರಲ್ಲದೆ, ಕನಕ, ಕಬೀರ, ಆಧುನಿಕ ಕಾಲದ ಫುಲೆ, ಪೆರಿಯಾರ್, ಶಾಹೂ ಮಹಾರಾಜ್, ಸಯ್ಯಾಜಿರಾವ್ ಗಾಯಕವಾಡ, ಅಂಬೇಡ್ಕರ್ ಆನಂತರದ ಬಹುಮುಖ್ಯ ಸಮಾಜಮುಖಿ ನಾಯಕರ, ಚಿಂತಕರ ಜೀವನ ಗಾಥೆಗಳು ಇಲ್ಲಿವೆ. ಈ ಸಂಕಥನಗಳು ನೊಂದವರ, ಅಪಮಾನಿತರಲ್ಲಿ ಶಕ್ತಿ ತುಂಬುವ ಜೀವ ಸೆಲೆಗಳಾಗಿವೆ.
ಕಥೆಗಾರ, ವಿಮರ್ಶಕ, ಅನುವಾದಕ, ಚಿಂತಕ, ಜಾನಪದ ವಿದ್ವಾಂಸ ಹಾಗೂ ಸಂಶೋಧಕರಾದ ಪ್ರೊ. ಎಚ್.ಟಿ.ಪೋತೆ ಬಿಸಿಲನಾಡಿನ ದಿಟ್ಟಪ್ರತಿಭೆ. ಬುದ್ದ. ಬಸವ, ಅಂಬೇಡ್ಕರ್, ಫುಲೆ, ಪೆರಿಯಾರ್, ಬಿ. ಶ್ಯಾಮಸುಂದರ್ ಚಿಂತನೆಗಳ ನೆಲೆಯಲ್ಲಿ ಸಾಹಿತ್ಯ ಕೃಷಿಗೈದವರು. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಪೋತೆಯವರ ಜನ್ಮಸ್ಥಳ, ಗುಲ್ಬರ್ಗಾ ವಿವಿಯಿಂದ ಎಂ.ಎ, ಎಂ.ಫಿಲ್, ಪಿಎಚ್ಡಿ. ಅಂಬೇಡ್ಕರ್ ಕುರಿತಾದ ಕನ್ನಡದ ಮೊದಲ ಡಿ.ಲಿಟ್ ಪಡೆದ ಹೆಗ್ಗಳಿಕೆ. ಗುಲ್ಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕ, ಪ್ರಸಾರಂಗದ ನಿರ್ದೇಶಕ, ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ, ಕರ್ನಾಟಕ ವಿವಿ ಮೌಲ್ಯಮಾಪನ ಕುಲಸಚಿವರಾಗಿ ಅವರದ್ದು ಬಹುರೂಪಿ ಶೈಕ್ಷಣಿಕ ...
READ MORE