ರವೀಂದ್ರ ಭಟ್ಟ ಅವರ ಲೇಖನಗಳ ಸಂಗ್ರಹ ‘ಜನಕಂಜಿ ನಡೆಯದವರ ಸಂತೆ’. ರವೀಂದ್ರ ಭಟ್ಟ ಅವರು ಪ್ರಜಾವಾಣಿಯಲ್ಲಿ ಮುಖ್ಯ ವರದಿಗಾರನಾಗಿದ್ದಾಗ ಬರೆದ ರಾಜಕೀಯ ಲೇಖನಗಳು ಈ ಪುಸ್ತಿಕೆಯಲ್ಲಿವೆ.
ಪುಸ್ತಕದ ಪರಿವಿಡಿಯಲ್ಲಿ ಸತ್ತಂತಿಹರನು ಬಡಿದೆಚ್ಚರಿಸು!, ಮನಕಂಜಿ, ಜನಕಂಜಿ ನಡೆಯದವರ ಸಂತೆ!, ಎಲ್ಲೆಲ್ಲೋ ಇದೆ ಸಮ್ಮನೆ, ಮೇಲ್ಮನೆಯಲ್ಲಿರುವೆ ಸುಮ್ಮನೆ!, ನಾಯಿನ ಕುರಿ ಮಾಡೋ ಯತ್ನ ಫಲಿಸಲ್ಲ, ಹತ್ತು ವರ್ಷದಲ್ಲಿ ರೈತರು ಅಲ್ಪಸಂಖ್ಯಾತರು, ಕೂಗಾಡಿದರೆ ಮಾತ್ರ ಸಮರ್ಥ ಪ್ರತಿಪಕ್ಷ ನಾಯಕನಾ? ಒತ್ತಡಕ್ಕೆ ಮಣಿದಿಲ್ಲ, ಮಣಿಯುವುದೂ ಇಲ್ಲ!, ಸ್ವಾವಲಂಬನೆಯ ಹೆಬ್ಬಾಗಿಲು, ಕುವೆಂಪು ಮತ್ತು ರಾಜಕೀಯ, ಸುಳಿವಿಲ್ಲದೇ ಕೊಳ್ಳೆ!, ಅರ್ಕಾವತಿ ಆರ್ತನಾದ! ಸೇರಿದಂತೆ 48 ಶೀರ್ಷಿಕೆಗಳ ರಾಜಕೀಯ ಲೇಖನಗಳು ಈ ಸಂಕಲನದಲ್ಲಿವೆ.
ಹಿರಿಯ ಪತ್ರಕರ್ತ, ಲೇಖಕ ರವೀಂದ್ರ ಭಟ್ಟ ಅವರು ಶಿರಸಿಯ ಎಂ.ಎಂ. ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್.ಸಿ. ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. 1990ರಲ್ಲಿ ಸಂಯುಕ್ತ ಕರ್ನಾಟಕದಿಂದ ವೃತ್ತಿ ಆರಂಭಿಸಿದ ಅವರು ನಂತರ ಕನ್ನಡಮ್ಮ, ಅಭಿಮಾನಿ, ಅರಗಿಣಿ, ಈ ಸಂಜೆ, ಉದಯವಾಣಿಗಳಲ್ಲಿ ಸೇವೆ ಸಲ್ಲಿಸಿದ್ದು, 1995ರಿಂದ ಪ್ರಜಾವಾಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಇವರೇ ಬರಮಾಡಿಕೊಂಡ ಬರ’, ‘ಹೆಜ್ಜೇನು’ (ಆದಿವಾಸಿ ನಾಯಕಿ ಜಾಜಿ ತಿಮ್ಮಯ್ಯ ಅವರ ಜೀವನ ಚರಿತ್ರೆ), ‘ಬದುಕು ಮರದ ಮೇಲೆ’, ‘ಮೂರನೇ ಕಿವಿ’, ‘ಸಂಪನ್ನರು’, ‘ಅಕ್ಷಯ ನೇತ್ರ’, ...
READ MORE