‘ಜಾಗತೀಕರಣದ ಹತ್ತು ವರ್ಷಗಳು’ ಸಿ. ಆರ್. ಭಟ್ ಅವರ ಆರ್ಥಿಕತೆಯ ಬಗೆಗಿನ ಲೇಖನಗಳಾಗಿವೆ. ಜಾಗತಿಕ ಸಾಲ ನೀಡಿಕೆಯ ಸಂಸ್ಥೆಗಳಿಂದ ಉದಾರೀಕರಣ-ಖಾಸಗೀಕರಣ-ಜಾಗತೀಕರಣಗಳೆಂಬ ಮೂರು ಅನಿಷ್ಟಗಳ ಸಿದ್ಧಾಂತದ ಪರಿಕಲ್ಪನೆಯ ನಂತರದಲ್ಲಿ ಜಗತ್ತಿನ ಆರ್ಥಿಕ ಅಭಿವೃದ್ಧಿ ಯಾವ ವರ್ಗಗಳ ಮೇಲೆ ಹೇಗೆ ಆಗಿದೆ ಎಂಬ ಪಕ್ಷಿನೋಟ ಈ ಪುಟ್ಟ ಪುಸ್ತಕದಲ್ಲಿದೆ. ಸುಧಾರಣೆಯ ಬಹುರಾಷ್ಟ್ರೀಯ ಕಂಪೆನಿಗಳೊಂದಿಗೆ ಕೈಜೋಡಿಸುವ ಹೆಸರಿನಲ್ಲಿ ಸರಕಾರಗಳ ಬಗ್ಗೆಯೂ ಇಲ್ಲಿ ಪ್ರಸ್ತಾಪಿಸಲಾಗಿದೆ.