ಇಂಗಾಲದ ಜಾಡು

Author : ಮಾಧವ ಐತಾಳ್

Pages 156

₹ 110.00




Year of Publication: 2011
Published by: ಋತು ಪ್ರಕಾಶನ
Address: ​​​​​​​ಋತು ಪ್ರಕಾಶನ, ರಾಯಚೂರು
Phone: 9845471861

Synopsys

‘ಇಂಗಾಳದ ಜಾಡು’ ಮಾಧವ ಐತಾಳ್ ಅವರ ಲೇಖನಸಂಕಲನವಾಗಿದೆ. ಈ ಪುಸ್ತಕದಲ್ಲಿ ಇಂಗಾಲದ ಬಗ್ಗೆ ತಿಳಿಸಿದ್ದು ಇಂಗಾಲದ ಡೈ ಆಕ್ಸೈಡ್ ವಾತಾವರಣ ಸೇರಿದಾಗ ಉಂಟಾಗುವ ಸಮಸ್ಯೆಗಳನ್ನು ತಿಳಿಸಿದ್ದಾರೆ. ಮನುಷ್ಯ ಎಚ್ಚೆತ್ತು ಅತಿಯಾಗಿ ಉಪಯೋಗಿಸುವ ಕೆಲವು ಐಶಾರಾಮಿ ವಸ್ತುಗಳಿಗೆ ಕಡಿವಾಣ ಹಾಕಿದಲ್ಲಿ ಇನ್ನೂ ಕೂಡ ಹಾನಿಯಾದ ಪರಿಸರವನ್ನು ಸಂರಕ್ಷಿಸಬಹುದು. ಭೂಮಿಯ ಮೇಲಿನ ಎಲ್ಲ ಜೀವಿಗಳೂ, ಪ್ರಕೃತಿ ನೀಡಿದನ್ನು ಬಳಸಿಕೊಂಡಿವೆ. ಮನುಷ್ಯ ಮಾತ್ರ ಎಲ್ಲ ಜೀವಜಾಲವನ್ನೂ ನಿರ್ಣಾಮ ಮಾಡಿ ಎಲ್ಲರಿಗೂ ಅಪಾಯ ತಂದುಕೊಂಡಿದ್ದಾನೆ ಎಂಬಂಥಹ ಭೀಕರ ಸತ್ಯಗಳನ್ನು ಈ ಕೃತಿ ತಿಳಿಸಿಕೊಡುತ್ತದೆ. ಇಂಥ ಹತ್ತುಹಲವು ಉಪಯುಕ್ತ ಮಾಹಿತಿಗಳಲ್ಲಿವೆ.

About the Author

ಮಾಧವ ಐತಾಳ್

ಪರಿಸರ ಮತ್ತು ಇಕಾಲಜಿ ಬಗ್ಗೆ ಅಪಾರ ಕಾಳಜಿ ಇರುವ ಲೇಖಕ. ಹದಿನೈದಕ್ಕೂ ಕೃತಿಗಳನ್ನು ರಚಿಸಿದ್ದಾರೆ. ‘ಋತ’ ಎಂಬ ದ್ವೈಮಾಸಿಕ ಕೂಡ ಅವರ ಸಂಪಾದಕತ್ವದಲ್ಲಿ ಬರುತ್ತಿದ್ದು, ಈಗಾಗಲೇ ಹಲವಾರು ವಿಚಾರಗಳ ಕುರಿತು ಸಂಚಿಕೆಗಳು ಬಂದಿವೆ. ಅಕ್ಷರ ಪ್ರಕಾಶನದಿಂದ ಪ್ರಕಟವಾಗಿರುವ ಜಾಗತಿಕ ಪರಿಸರ ಚರಿತ್ರೆ, ಹಂಪಿ ವಿಶ್ವವಿದ್ಯಾಲಯ ಹೊರತಂದಿರುವ ಬತ್ತದ ಚಿಲುಮೆ, ಪಶ್ಚಿಮ ಘಟ್ಟಗಳ ಕಥೆ ಹೇಳುವ ವೈವಿಧ್ಯದ ತೊಟ್ಟಿಲು ಸೇರಿದಂತೆ 16 ಕೃತಿಗಳನ್ನು ಮಾಧವ ಐತಾಳ್ ಬರೆದಿದ್ದಾರೆ. ...

READ MORE

Reviews

(ಹೊಸತು, ಜುಲೈ 2012, ಪುಸ್ತಕದ ಪರಿಚಯ)

ಒಂದು ದೇಶದ ಅಭಿವೃದ್ಧಿಯನ್ನು ಯಾವ ಮಾನದಂಡದಿಂದ ಅಳೆಯುವುದು ? ಅಭಿವೃದ್ಧಿ ಒಂದು ಹಂತದವರೆಗೆ ಇರದ ಮೇರೆ ಮೀರಿದಲ್ಲಿ ಅದು ಅವನತಿಯಲ್ಲವೆ ? ಕಳೆದ ನೂರು ವರ್ಷಗಳಲ್ಲಿ ಅಭಿವೃದ್ಧಿ ಸಾಧಿಸಿದ ದೇಶಗಳು ಭೂಮಿ ಆಕಾಶ-ನೀರು-ಗಾಳಿಗಳನ್ನೆಲ್ಲ ಮಲಿನಗೊಳಿಸಿ ಜಾಗತಿಕ ಪರಿಸರ ಮಾಲಿನ್ಯವಾಗಲು ಕಾರಣವಾಗಿದೆ. ಇದೀಗ ಅಭಿವೃದ್ಧಿಯ ಹಾದಿಯಲ್ಲಿರುವವರ ಸರದಿ. ಕೈಗಾರಿಕಾ ತ್ಯಾಜ್ಯ, ಮಿತಿಮೀರಿದ ವಾಹನದಟ್ಟಣೆ, ಅಣುಾವರ ಮುಂತಾದವು ವಾತಾವರಣಕ್ಕೆ ಸೇರಿಸುವ ಅಪಾಯಕಾರಿ ಹಾನಿಕಾರಕ ವಸ್ತುಗಳೆಷ್ಟೋ! ಇಂದು ಜಾಗತಿಕ ಮಟ್ಟದಲ್ಲಿ ಹವಾಮಾನ ಬದಲಾವಣೆಯುಂಟಾಗಿ ಹೊಸ ಸಮಸ್ಯೆ ಸೃಷ್ಟಿಯಾಗಿದೆ. ಕ್ಯೋಟೋ ಒಪ್ಪಂದ, ಕೊಪನ್‌ ಹೇಗನ್‌ ನಲ್ಲಿ ನಡೆದ ಜಾಗತಿಕ ಶೃಂಗಸಭೆಗಳಲ್ಲಿ ಇದನ್ನು ಚರ್ಚಿಸಲಾಗಿದ್ದು -ಶ್ರೀಮಂತ ರಾಷ್ಟ್ರಗಳು ಸುಲಭದಲ್ಲಿ ಇದನ್ನು ಬಗೆಹರಿಸಲು ಸಹಕರಿಸುತ್ತಿಲ್ಲ. ವರದಿಗಳಲ್ಲೂ ಗೊಂದಲಗಳು.. ಈ ಪುಸ್ತಕದಲ್ಲಿ ಇಂಗಾಲದ ಬಗ್ಗೆ ತಿಳಿಸಿದ್ದು ಇಂಗಾಲದ ಡೈ ಆಕ್ಸೈಡ್ ವಾತಾವರಣ ಸೇರಿದಾಗ ಉಂಟಾಗುವ ಸಮಸ್ಯೆಗಳನ್ನು ತಿಳಿಸಿದ್ದಾರೆ. ಮನುಷ್ಯ ಎಚ್ಚೆತ್ತು ಅತಿಯಾಗಿ ಉಪಯೋಗಿಸುವ ಕೆಲವು ಐಶಾರಾಮಿ ವಸ್ತುಗಳಿಗೆ ಕಡಿವಾಣ ಹಾಕಿದಲ್ಲಿ ಇನ್ನೂ ಕೂಡ ಹಾನಿಯಾದ ಪರಿಸರವನ್ನು ಸಂರಕ್ಷಿಸಬಹುದು. ಭೂಮಿಯ ಮೇಲಿನ ಎಲ್ಲ ಜೀವಿಗಳೂ, ಪ್ರಕೃತಿ ನೀಡಿದನ್ನು ಬಳಸಿಕೊಂಡಿವೆ. ಮನುಷ್ಯ ಮಾತ್ರ ಎಲ್ಲ ಜೀವಜಾಲವನ್ನೂ ನಿರ್ಣಾಮಾ ಮಾಡಿ ಎಲ್ಲರಿಗೂ ಅಪಾಯ ತಂದುಕೊಂಡಿದ್ದಾನೆ. ಇಂಥ ಹತ್ತುಹಲವು ಉಪಯುಕ್ತ ಮಾಹಿತಿಗಳಲ್ಲಿವೆ.

Related Books