ಇಕ್ಕೇರಿ ಅಘೋರೇಶ್ವರ

Author : ಅ. ಸುಂದರ

Pages 88

₹ 100.00




Year of Publication: 2011
Published by: ಶಾಂತಲಾ ಪ್ರಕಾಶನ
Address: #87, ಶಾಂತಲಾ ಜಿಲ್ಲಾ ಪಂಚಾಯತ್ ಎದುರು, ಕುವೆಂಪು ರಸ್ತೆ, ಶಿವಮೊಗ್ಗ-577201

Synopsys

‘ಇಕ್ಕೇರಿ ಅಘೋರೇಶ್ವರ’ ಕೃತಿಯು ಅ. ಸುಂದರ ಅವರ ಕೆಳದಿ ರಾಜ್ಯದ ಅಪೂರ್ವ ದೇವಾಲಯ ಕುರಿತ ಲೇಖನಸಂಕಲನವಾಗಿದೆ. ಇಲ್ಲಿನ ಕೆಲವು ವಿಚಾರಗಳು ಹೀಗಿವೆ; ಕೆಳದಿ, ಇಕ್ಕೇರಿ ಮತ್ತು ನಗರಗಳು ಕೆಳದಿ ರಾಜ್ಯದ ಪ್ರಮುಖ ನೆಲೆಗಳು. ಇವು ಒಂದಲ್ಲ ಒಂದು ಸಂದರ್ಭದಲ್ಲಿ ಕೆಳದಿ ಅರಸರ ಆಡಳಿತ ಕೇಂದ್ರಗಳಾಗಿದ್ದವು. ಅಳಿದುಳಿದಿರುವ ಇಲ್ಲಿನ ಕೋಟೆಯ ಅವಶೇಷಗಳು ಮತ್ತು ದೇವಾಲಯಗಳು ಮತ್ತು ಶಾಸನಗಳು ಮಾತ್ರವಲ್ಲದೆ, ಸಮಕಾಲೀನ ಸಾಹಿತ್ಯ ಕೃತಿಗಳು ಹಾಗೂ ಹಸ್ತಪ್ರತಿ ದಾಖಲೆಗಳು ಹಾಗೂ ವಿದೇಶೀ ಪ್ರವಾಸಿಗಳ ಪ್ರವಾಸಕಥನಗಳು ಕೆಳದಿ ನಾಯಕರು ಮತ್ತು ಅವರ ಕಾಲದ ವಾಸ್ತು ಮತ್ತು ಮೂರ್ತಿ ಶಿಲ್ಪಗಳು ಹಾಗೂ ಸಂಸ್ಕೃತಿಯ ಬಗ್ಗೆ ತಿಳಿಸುತ್ತವೆ. 'ಕೆಳದಿ ಅರಸರ ಕಾಲದ ಇಕ್ಕೇರಿ, ಭುವನಗಿರಿ, ಬಿದನೂರು, ಶಿವಮೊಗ್ಗ ಮೊದಲಾದ ಸ್ಥಳಗಳಲ್ಲಿಯ ದೇವಾಲಯಗಳಲ್ಲಿ ಇಸ್ಲಾಂ ವಾಸ್ತುಶಿಲ್ಪ ಶೈಲಿಯ ಮಾಡಿನಂಚಿನಲ್ಲಿ ಕಂಗುರ, ಮುಂಭಾಗದ ಮಾಡಿನ ಮೂಲೆಗಳಲ್ಲಿ ಕಿರಿಯ ಮೀನಾರು, ಗುಮ್ಮಟ, ಕಮಾನುಗಳನ್ನು ಹದವರಿತು ಬಳಸಲಾಗಿದೆ' ಎಂದು ಇಲ್ಲಿ ದಾಖಲಿಸಿದ್ದಾರೆ.

About the Author

ಅ. ಸುಂದರ

ಪುರಾತತ್ತ್ವ ಶಾಸ್ತ್ರಜ್ಞರಾಗಿ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ಪ್ರೊ. ಅ. ಸುಂದರ ಮೂಲತ: ಬ್ರಹ್ಮಾವರ ಸಮೀಪದ ನೀಲಾವರದವರು. ಪುರಾತತ್ವ ಇಲಾಖೆಯಲ್ಲಿ ಕೆಲಸ ಮಾಡಿ ನಂತರ ಧಾರವಾಡದ ಕರ್ನಾಟಕ ವಿಶ್ವದ್ಯಾಲಯದ ಪ್ರಾಚೀನ ಭಾರತೀಯ ಇತಿಹಾಸ ವಿಭಾಗದಲ್ಲಿ ಪ್ರಾಧ್ಯಾಪಕರೂ, ವಿಭಾಗ ಮುಖ್ಯಸ್ಥರೂ ಆಗಿದ್ದರು. ಭಾರತದ ಪುರಾತತ್ವ ಸರ್ವೇಕ್ಷಣ ಇಲಾಖೆಯಲ್ಲಿ ತಾಂತ್ರಿಕ ಸಹಾಯಕರಾಗಿ ಸೇರಿ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಉತ್ಖನನ ಕಾರ್ಯದಲ್ಲಿ ತೊಡಗಿದ  ಅ. ಸುಂದರರು ಕರ್ನಾಟಕದ ಇಂಡಿ, ಸಿಂದಗಿ, ಮದ್ದೇಬಿಹಾಳ, ನರಗುಂದ, ರೋಣ, ಹನೂರುಗಳಲ್ಲಿ ಗತಕಾಲದ ಗವಾಕ್ಷಗಳನ್ನು ತೆರೆದವರು. ಉತ್ತರ ಕರ್ನಾಟಕದಲ್ಲಿ ಬೃಹತ್‌ ಶಿಲಾಯುಗದ ಜನರ ಸಂಸ್ಕೃತಿಯನ್ನು ಕುರಿತು ಬರೆದ ಮಹಾಪ್ರಬಂಧಕ್ಕಾಗಿ ಪುಣೆ ...

READ MORE

Related Books