ಇದ್ದದು ಇಂದ್ಹಾಗ ಕೃತಿಯು ರಾಜಶೇಖರ ಅವರ ಕೃತಿಯಾಗಿದೆ. ಕನ್ನಡದ - ಮಾನವೀಯ ಪತ್ರಕರ್ತರಲ್ಲಿ ಒಬ್ಬರು ರಾಜಶೇಖರ ಕೋಟಿ, ಜಟಿಲವಾಗಿ ಬರೆಯುವುದು ಸುಲದ, ಸರಳ ಸುಭಗ ಶೈಲಿ ಕಷ್ಟಸಾಧ್ಯರು, ಆದರೆ ಈ ಶೈಲಿಯನ್ನು ಸಾಮಾಜಿಕ ನ್ಯಾಯ ಪ್ರತಿಪಾದನೆಗೆ ದುಡಿಸಿಕೊಂಡ ವಿರಳ ಸಂಪಾದಕರು ಕೋಟಿಯವರು, ಜನಪ್ರತಿನಿಧಿಗಳ ಮೌಲ್ಯಭಕ್ಷತೆ ಮತ್ತು ಮತದಾರರ ಅಧಃಪತನವನ್ನು ಇಂದು ಎಚ್ಚರಿಸುತ್ತವೆ. ಇಲ್ಲಿನ ಬರಹಗಳು, ಅವಕಾಶವಾದಿ ರಾಜಕಾರಣಿಗಳು- ತಿಕ್ಕಲು ಅಧಿಕಾರಿಗಳು- ಜವಾಬ್ದಾರಿ ಮರೆತು ಆಮಿಷಗಳಿಗೆ ಕೈ ಚಾಚುವ ಮತದಾರರು ಇಲ್ಲಿ ಬೆತ್ತಲಾಗಿದ್ದಾರೆ. ಚುನಾವಣೆಗಳಲ್ಲಿ ರಾಜಕಾರಣಿಗೆ ಕೊಡುವ ಹೇಸಿಗೆಗೆ ಕೈ ಒದ್ದರೆ ಪ್ರತಿಭಟಿಸುವುದನ್ನು ಕಲಿಯಬೇಕು, ತಪ್ಪಿ ನಡೆವ ಜನಪ್ರತಿನಿಧಿಗಳನ್ನು ಪ್ರಶ್ನಿಸಬೇಕು, ಅಂಥವರನ್ನು ಪ್ರಶ್ನಿಸದ ನೋವು ನುಂಗಿಕೊಳ್ಳುವುದು ಬೇಜವಾಬ್ದಾರಿ ಮಾತ್ರವಲ್ಲ, ಕರ್ತವ್ಯ ವಿಮುಖತೆಯೂ ಹೌದು ಎಂದು ಕೋಟಿಯವರಂತೆ ಬರೆಯುವ ನೈತಿಕ ನಿರ ಸಂಪಾದಕರ ಸಂತತಿ ಅಳಿವಿನ ಅಂಚಿನಲ್ಲಿ ನೇತಾಡಿದೆ. ಎಂದು ಡಿ,ಉಮಾಪತಿ, ಹಿರಿಯ ಪತ್ರಕರ್ತರು, ಪುಸ್ತಕದ ಹಿನ್ನುಡಿಯಲ್ಲಿ ತಿಳಿಸಿದ್ಧಾರೆ.
ಸುಮಾರು ಐವತ್ತು ವರ್ಷಗಳ ಸುಧೀರ್ಘ ಕಾಲ ಪತ್ರಿಕೋದ್ಯಮಿಯಾಗಿ, ಸಮಾಜವಾದಿಯಾಗಿ, ಶೋಷಿತರ ದನಿಯಾಗಿ, ಕನ್ನಡಪರ ಹೋರಾಟಗಾರರಾಗಿ, ಮಾನವ ಪ್ರೇಮಿಯಾಗಿ ಅವರ ಕೊಡುಗೆ ಅಪಾರ. ಸೌಲಭ್ಯ ಮತ್ತು ಹಣಕಾಸಿನ ಕೊರತೆಯ ನಡುವೆಯೂ ಜನಸಾಮಾನ್ಯರ ಕೈಗೆಟುಕುವ ಬೆಲೆಯಲ್ಲಿ, ಸ್ಥಳೀಯ ಸುದ್ದಿಗಳನ್ನು ನೀಡಿ, ಜನರಲ್ಲಿ ವಾಚನಾಭಿರುಚಿಯನ್ನು ಬೆಳೆಸಿದ ಅವರು ನಿಜವಾಗಿಯೂ 'ಜನರ ಪತ್ರಕರ್ತರು'! 1972ರಲ್ಲಿ ಆಂದೋಲನ ಪತ್ರಿಕೆ ಆರಂಭಿಸಿದ್ದರು. ರಾಜಶೇಖರ ಕೋಟಿ ಮೂಲತಃ ಗದಗ್ ಜಿಲ್ಲೆ ಹುಯಿಲಗೋಳದವರು. ಜಮೀನ್ದಾರ್ ಕುಟುಂಬದಲ್ಲಿ ಜನಿಸಿದ್ದ ಇವರು, ಗದಗ್ನಲ್ಲಿ ವಿದ್ಯಾಭ್ಯಾಸ ಮುಗಿಸಿ ನಂತರ ಅಚ್ಚು ಮೊಳೆ ಸಹಾಯಕರಾಗಿ ಕೆಲಸ ಆರಂಭಿಸುತ್ತಾರೆ. ಶಾಲಾ ದಿನದಿಂದಲೇ ಪತ್ರಿಕೆ ಬಗ್ಗೆ ಆಸಕ್ತಿ ...
READ MORE