ಡಾ. ಎಂ.ಡಿ. ನಂಜುಂಡಸ್ವಾಮಿ ಅವರ ಹೋರಾಟ ಹಾಗೂ ಅವರ ಚಿಂತನೆಗಳ ಕೃತಿ-ಹಸಿರು ಸೇನಾನಿ. ಕರ್ನಾಟಕ ರಾಜ್ಯ ರೈತ ಸಂಘ ಕಟ್ಟುವ ಮೂಲಕ ರಾಜ್ಯ ರೈತರಿಗೆ ತಮ್ಮ ಸ್ಥಾನದ ಘನತೆಯನ್ನು ತೋರಿದವರು. ಹೋರಾಟದ ಮನೋಬಲವನ್ನು ತುಂಬಿದವರು. ರೈತರ ದುಡಿಮೆಗೆ ಇತರೆ ದಲ್ಲಾಳಿಗಳು ಬೆಲೆ ಕಟ್ಟಬಾರದು ಎಂದು ಎಚ್ಚರಿಕೆ ನೀಡಿದವರು. ಇಂತಹ ಮಹಾನ್ ಲೇಖಕ, ಚಿಂತಕ, ಹೋರಾಟಗಾರರ ಸಮಗ್ರ ಜೀವನ ಬಿಂಬಿಸುವ ವಿವಿಧ ಲೇಖನಗಳನ್ನು ಲೇಖಕ ನಟರಾಜ ಹುಳಿಯಾರ್ ಅವರು ಸಂಪಾದಿಸಿದ್ದೇ ಈ ಕೃತಿ.
ಕತೆಗಾರ-ಲೇಖಕ ನಟರಾಜ ಹುಳಿಯಾರ್ ಅವರು ತುಮಕೂರು ಜಿಲ್ಲೆಯ ಹುಳಿಯಾರಿನವರು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ (ಎಂ.ಎ.) ಪದವಿ ಪಡೆದಿರುವ ಅವರು'ಆಧುನಿಕ ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ’ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಸದ್ಯ ಬೆಂಗಳೂರು ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದಾರೆ. ಮತ್ತೊಬ್ಬ ಸರ್ವಾಧಿಕಾರಿ, ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು, ಮಾಯಾಕಿನ್ನರಿ (ಕಥಾಸಂಕಲನಗಳು), ರೂಪಕಗಳ ಸಾವು (ಕವಿತೆಗಳು), ಗಾಳಿಬೆಳಕು (ಸಾಂಸ್ಕತಿಕ ಬರಹಗಳು), ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ (ತೌಲನಿಕ ಅಧ್ಯಯನ), ಇಂತಿ ನಮಸ್ಕಾರಗಳು (ಲಂಕೇಶ್-ಡಿ.ಆರ್. ನಾಗರಾಜ್ ಕುರಿತ ...
READ MORE