'ಹಾರೈಸಿ ತೆರೆದ ಕಣ್ಣ ಕೋರೈಸೋ ನೂರು ಬಣ್ಣ’ ಕೃತಿಯು ಡಿ.ಜಿ. ಮಲ್ಲಿಕಾರ್ಜುನ ಅವರ ಕೃತಿಯಾಗಿದೆ. ಇಲ್ಲಿ ಛಾಯಾಗ್ರಾಹಕ ಕಂಡ ಜಗತ್ತಿನ ಬಣ್ಣ ಬಣ್ಣದ ಕಥನ ಚಿತ್ರಣಗಳಿವೆ. ಕೃತಿಯ ಬೆನ್ನುಡಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಯಾರಿಗೆ ತಾವಿರುವಲ್ಲಿ ಸಂತೋಷ, ಉತ್ಸಾಹ, ಕುತೂಹಲಗಳು ಇರುವುದಿಲ್ಲವೋ, ಅಂಥವರು ಅವನ್ನು ಹುಡುಕಿಕೊಂಡು ಎಲ್ಲಿಗೆ ಪ್ರವಾಸ ಹೋದರೂ ವ್ಯರ್ಥ ಎನ್ನುತ್ತಿದ್ದರು ಪೂರ್ಣಚಂದ್ರ ತೇಜಸ್ವಿ, ಈ ಮಾತು ಛಾಯಾಗ್ರಾಹಕನಿಗೂ ಸೊಗಸಾಗಿ ಅನ್ವಯಿಸುತ್ತದೆ. ಸುತ್ತಲಿನ ಪರಿಸರದಲ್ಲಿ ವಿಭಿನ್ನ ಚೌಕಟ್ಟುಗಳನ್ನು ಕಾಣಲಾರದ ಕಣ್ಣು, ಒಳ್ಳೆಯ ಫೋಟೋಗಳಿಗಾಗಿ ಪ್ರವಾಸ ಹೊರಟರೆ ಉಪಯೋಗವಿಲ್ಲ. ಆದರೂ ಆಗಾಗ ಕ್ಯಾಮರಾ ಹಿಡಿದು ಊರು ಸುತ್ತದಿದ್ದರೆ ನನಗೆ ಚಡಪಡಿಕೆ ಶುರುವಾಗುತ್ತದೆ. ಈ ಚಡಪಡಿಕೆಯೇ ನನ್ನನ್ನು ಹಲವಾರು ಜಾಗಗಳಿಗೆ ಕರೆದೊಯ್ದಿದೆ. ಹೆಸರಿಲ್ಲದ ಊರುಗಳಿಗೆ ನನ್ನನ್ನು ಎಕ್ಸ್ ಪೋಸ್ ಮಾಡಿದೆ. ದೇಶದ ಮೂಲೆ ಮೂಲೆಗಳನ್ನು ಸುತ್ತಿ ಅಲ್ಲಿನ ಪ್ರಕೃತಿ, ಸಂಸ್ಕೃತಿ, ಜನಜೀವನ, ಭಾಷೆ, ಆಹಾರ, ಆಚಾರ ಮುಂತಾದವುಗಳನ್ನು ಅನುಭವಿಸುವಂತೆ ಮಾಡಿದೆ. ಹಾಗೆ ತಿರುಗಾಡುವಾಗ ನನ್ನ ಬೊಗಸೆಗೆ ನಿಲುಕಿದ್ದನ್ನು ಚಿತ್ರ-ಬರಹಗಳ ಮೂಲಕ ತೆರೆದಿಡಲು ಯತ್ನಿಸಿದ್ದೇನೆ. ತೇಜಸ್ವಿ ಹೇಳಿದ ಸಂತೋಷ, ಉತ್ಸಾಹ ಮತ್ತು ಕುತೂಹಲಗಳು ಇಲ್ಲಿನ ಚೌಕಟ್ಟು ಮೀರಿದ ಚಿತ್ರಗಳ ಮೂಲಕ ನಿಮ್ಮೊಳಗೂ ಹುಟ್ಟಲಿ ಎಂಬ ಹಾರೈಕೆ ನನ್ನದು ಎಂದಿದ್ದಾರೆ.
ಚಿಕ್ಕಬಳ್ಳಾಪುರದ ಶಿಡ್ಲಘಟ್ಟದವರಾದ ಡಿ.ಜಿ. ಮಲ್ಲಿಕಾರ್ಜುನ ಅವರು ಓದಿದ್ದು ಮೆಕ್ಯಾನಿಕಲ್ ಎಂಜಿನಿಯರಿಂಗ್. ಪ್ರಸ್ತುತ ಪ್ರಜಾವಾಣಿ ಮತ್ತು ಡೆಕನ್ ಹೆರಲ್ಡ್ ದಿನಪತ್ರಿಕೆಗೆ ಶಿಡ್ಲಘಟ್ಟ ತಾಲ್ಲೂಕು ವರದಿಗಾರರಾಗಿ ಕೆಲಸ ಮಾಡುತ್ತಿರುವ ಇವರು ಛಾಯಾಗ್ರಹಣದಲ್ಲಿ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯಿಂದ ಪ್ರಮಾಣ ಪತ್ರ ಪಡೆದಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ನಮ್ಮ ಶಿಡ್ಲಘಟ್ಟ, ಕ್ಲಿಕ್, ಭೂತಾನ್, ಅರೆಕ್ಷಣದ ಅದೃಷ್ಟ, ರಸ್ಕಿನ್ ಬಾಂಡ್ ಕತೆಗಳು, ಯೋರ್ಡಾನ್ ಪಿರೆಮಸ್- ಜೋರ್ಡಾನ್ ಈಜಿಪ್ಟ್ ಪ್ರವಾಸ ಕಥನ ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ ಯೋರ್ಡಾನ್ ಪಿರೆಮಸ್ ಪ್ರವಾಸ ಕಥನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ...
READ MORE