ಪರಸ್ಪರ ಸೌಹಾರ್ದ -ಭಾವೈಕ್ಯತೆ, ಮನಸ್ಸಿನ ಶುದ್ಧಿ, ಅರಿವಿನ ವಿಕಾಸದ ಹೆದ್ದಾರಿ ಗ್ರಂಥಾಲಯ. ಲೇಖಕರು 'ಗ್ರಂಥಾಲಯಗಳು ಮತ್ತು ಗಣಕೀಕರಣ, ನಡೆದು ಬಂದಿರುವ ದಾರಿ' ಕೃತಿಯ ಮೂಲಕ ನಾನಾ ತರದ ಗ್ರಂಥಾಲಯಗಳ ಆದ್ಯತೆ, ಗ್ರಂಥಾಲಯದ ಆದರ್ಶ ಗ್ರಂಥಪಾಲಕರ ಗುಣ ನಡತೆಗಳು ಮತ್ತು ಗಣಕೀಕರಣದ ವಿವಿಧ ಸ್ವರೂಪಗಳ ಮಾಹಿತಿಯನ್ನು ಸಂಗ್ರಹಿಸಿ, ಓದುಗರಿಗೆ ನೀಡಿದ್ಧಾರೆ.
ವಿವಿಧ ಗ್ರಂಥಾಲಯದ ರೂಪು ರೇಷೆ, ಧ್ಯೇಯೋದ್ದೇಶದ ಅನಾವರಣ ಇಲ್ಲಿ ಸಿಗುತ್ತದೆ. ವಿದ್ಯಾರ್ಥಿಗಳಿಗೆ ಗ್ರಂಥಾಲಯ ಸೇವೆಯ ಸಮಗ್ರ ಮುಖವನ್ನು ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ. ಗ್ರಂಥಾಲಯ ವಿಜ್ಞಾನ ವಿಷಯ ಕುರಿತು ಅದರಲ್ಲೂ ವಿಶೇಷವಾಗಿ ಕನ್ನಡ ಮಾಧ್ಯಮಗಳಲ್ಲಿ ಗ್ರಂಥಗಳ ಕೊರತೆ ಇದೆ. ಈ ನಿಟ್ಟಿನಲ್ಲಿ, ಲೇಖಕರ ಕಾರ್ಯ ಅಭಿನಂದನಾರ್ಹ. ಓದುಗರಿಗೆ ಇಲ್ಲಿಯ ಲೇಖನಗಳು ಸ್ಫೂರ್ತಿ ನೀಡುವುದಲ್ಲದೆ, ಅಕ್ಷರಜ್ಞಾನಕ್ಕಾಗಿ ಶ್ರಮಿಸುತ್ತಿರುವವರ, ಪುಸ್ತಕ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳು ಇಲ್ಲಿ ಕಾಣಬಹುದು.
ಎಚ್.ಎಸ್.ಬೇನಾಳ ಅವರು ಬಹುಮುಖ ಪ್ರತಿಭಾವಂತ,ಜೊತೆಗೆ ಸಂವೇದನಾ ಶೀಲ ಬರಹಗಾರ, ಕವಿಯಾಗಿ, ಕಥೆಗಾರನಾಗಿ, ವಿಚಾರವಂತ, ಪ್ರಬುದ್ಧ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಕಲಬುರಗಿ ಮೂಲದವರಾದ ಎಚ್. ಎಸ್. ಬೇನಾಳ ಚಿಕ್ಕ ವಯಸ್ಸಿಗೆ ವಿಚಾರಾತ್ಮಕ ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ಮಹತ್ತರ ಕೊಡುಗೆಗಳನ್ನು ನೀಡಿದ್ದಾರೆ. ಅವರ ಪ್ರಕಟಿತ ಕೃತಿಗಳು- ಬುದ್ಧನ ನಿಜವಾದ ವೈರಾಗ್ಯ, ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್, ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು, ಬಹಿಷ್ಕಾರ(ಕಥಾಸಂಕಲನ), ಪ್ರಥಮ ವಚನಕಾರ ಜೇಡರ ದಾಸೀಮಯ್ಯ, ಕಾವ್ಯ ಕಂಬನಿ(ಕವನ ಸಂಕಲನ), ಬಚ್ಚಿಟ್ಟ ಚರಿತ್ರೆಯನ್ನು ಬಿಚ್ಚಿಟ್ಟ ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್, ವಿಶ್ವಕಂಡ ಶ್ರೇಷ್ಠ ಆರ್ಥಿಕ ಚಿಂತಕ ಬಾಬಾ ಸಾಹೇಬ ...
READ MORE