ಸುಮಾರು ಮೂರು ವರ್ಷ ಕಾಲ ಅತಿಥಿ ಪ್ರಾಧ್ಯಾಪಕರಾಗಿ ಜರ್ಮನಿಯಲ್ಲಿ ನೆಲೆಸಿದ್ದ ಬಿ.ಎ. ವಿವೇಕ ರೈ ಅವರು, ಜರ್ಮನಿಯ ಅನುಭವಗಳಿಗೆ ಸಂಬಂಧಿಸಿ ತಮ್ಮ ಬ್ಲಾಗ್ನಲ್ಲಿ ಬರೆದ ಬರಹಗಳ ಸಂಕಲನವೇ ’ಜರ್ಮನಿಯ ಒಳಗಿನಿಂದ’ ಕೃತಿ. ಈ ಕೃತಿಯಲ್ಲಿ ಆರು ಲೇಖನಗಳಿವೆ. ಇಲ್ಲಿಯ ಪ್ರತಿಯೊಂದು ಲೇಖನವು ಜರ್ಮನಿಯ ಒಂದೊಂದು ಬದುಕನ್ನು ಕಟ್ಟಿಕೊಡುತ್ತದೆ. ಊಟ, ತಿಂಡಿ, ಹಾಡು, ಕುಣಿತ, ಒಪೆರಾ ಕುಣಿತ, ಒಪೆರಾ ನಾಟಕ, ಮ್ಯೂಸಿಯಂ ಕೋಟೆ, ಚರ್ಚ್, ಅರಮನೆ, ನದಿ, ಮರ, ಗಿಡ, ಹಿಮ, ಮಳೆ, ಸೂರ್ಯ, ಧರ್ಮ ಆಚರಣೆ, ಹಬ್ಬ, ತಾಯಿ ಕುಟುಂಬ, ಕನ್ನಡ, ತುಳು, ಹಿಂದಿ, ಜರ್ಮನ್... ಹೀಗೆ ಲೇಖಕರ ಒಳಗಿನಿಂದ ಕಂಡ, ಕಾಣಲು ಸಾಧ್ಯವಾದ ಎಲ್ಲ ಮುಖಾಮುಖಿಯ ಸಂಗತಿಗಳು, ವಿದ್ಯಮಾನಗಳು ಇಲ್ಲಿವೆ.
ಜರ್ಮನಿಯ ಒಳಗಿನ ಅನೇಕ ಸಣ್ಣ ಸಣ್ಣ ಊರುಗಳಲ್ಲಿ ಸಂಚರಿಸಿದಾಗ ಲೇಖಕರು ಕಂಡ ’ಜರ್ಮನಿಗಳು’ ಪೈಕಿ ಕೆಲವನ್ನು ಇಲ್ಲಿ ಪರಿಚಯಿಸಿದ್ದಾರೆ. ಕನ್ನಡ ಭಾಷೆಯನ್ನು ಜರ್ಮನರಿಗೆ ಕಲಿಯಲು ಸಹಾಯವಾಗುವ ಒಂದು ’ಕನ್ನಡ ವಾಚಿಕ’ ಜರ್ಮನ್ ಭಾಷೆಯಲ್ಲಿ, ಕನ್ನಡದ ಕವನಗಳ ಕಥನ ಸಾಹಿತ್ಯದ ನೇರ ಅನುವಾದ ಜರ್ಮನ್ ಭಾಷೆಯಲ್ಲಿ.. ಇಂತಹ ಕೆಲವು ಅಕಾಡೆಮಿಕ್ ಕೆಲಸಗಳು ಕೈಗೆತ್ತಿಕೊಂಡದ್ದರ ಬಗ್ಗೆ ಈ ಕೃತಿಯಲ್ಲಿ ಬರೆದಿದ್ದಾರೆ.
ಡಾ. ಬಿ.ಎ.ವಿವೇಕ ರೈ ಸಂಸ್ಕೃತಿ ಚಿಂತಕರು. ಕನ್ನಡ-ತುಳು ಭಾಷೆಯ ಆಂತರಿಕ ಶಕ್ತಿ-ಸಂಪತ್ತನ್ನು ಸಂವರ್ಧಿಸಿದ ವಿದ್ವಾಂಸರು. ಅವರ ಹುಟ್ಟೂರು ಪುತ್ತೂರು ತಾಲೂಕಿನ 'ಪುಣಚಾ'. (ಜನನ: 1946ರ ಡಿಸೆಂಬರ್ 8ರಂದು), ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣ, ಮತ್ತೂರಿನಲ್ಲಿ ಪಿಯುಸಿ, ಬಿಎಸ್ಸಿ ವ್ಯಾಸಂಗ, ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರಕೇಂದ್ರ ದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಜೊತೆಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾ.ಹಾ.ಮಾ.ನಾಯಕರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ. ಕನ್ನಡ ಮತ್ತು ತುಳು ಭಾಷೆಯ ಬಗ್ಗೆ ಅಪಾರ ಒಲವು-ಪಾಂಡಿತ್ಯ ಉಳ್ಳವರು. ಭಾಷಾ ಅಧ್ಯಯನದ ಮಾದರಿಗಳನ್ನು ರೂಪಿಸಿದ ವಿದ್ವಾಂಸರು. ಸಂಶೋಧನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ, ರೀಡರ್, ಪ್ರಾಧ್ಯಾಪಕ, ...
READ MORE