‘ಗೆಳತಿ ಭಾಗ-2’ ಕೃತಿಯು ಹೇಮಾವತಿ ವೀ. ಹೆಗ್ಗಡೆಯವರ ನಿರಂತರ ಪತ್ರಿಕೆಯ ‘ಗೆಳತಿ’ ಅಂಕಣದಲ್ಲಿ ಪ್ರಕಟಗೊಂಡ ಬರಹಗಳ ಸಂಕಲನವಾಗಿದೆ. ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ಹೇಮಾವತಿ ವೀ. ಹೆಗ್ಗಡೆವರು ತಮ್ಮ ಜೀವನದುದ್ದಕ್ಕೂ ಗ್ರಾಮೀಣ ಮಹಿಳೆಯವರ ಕಷ್ಟ ಸುಖಗಳನ್ನು ಗಮನಿಸಿದವರು. ಮತ್ತು ಅವರ ಸಮಸ್ಯೆಗಳಿಗೆ ತನ್ನ ಮಕ್ಕಳ ವಿಚಾರಗಳನ್ನು ತಿಳಿದುಕೊಳ್ಳುವಂತೆ ಯೋಜನೆಯ ಕಾರ್ಯಕರ್ತರಿಂದ ರಾಜ್ಯದ ವಿವಿಧೆಡೆಗಳಲ್ಲಿನ ಆಚಾರ- ವಿಚಾರಗಳನ್ನು ತಿಳಿದುಕೊಳ್ಳುವುದಲ್ಲದೆ ವಿಶೇಷವಾಗಿ ಮಹಿಳೆಯವರ ಸಮಸ್ಯೆಗಳನ್ನು ಅರ್ಥೈಸಿಕೊಳ್ಳುತ್ತಾರೆ. ಅಧ್ಯಯನಶೀಲತೆಯು, ಧಾರ್ಮಿಕ ಪ್ರವೃತ್ತಿಯೂ ಅವರಲ್ಲಿ ಮೇಳೈಸಿರುವುದರಿಂದ ಯಾವುದೇ ವಿಷಯದ ಕುರಿತಾಗಿ ತನ್ನದೇ ಆದ ರೀತಿಯಲ್ಲಿ ವಿಶೇಷ್ಲಿಸಿ ಅದಕ್ಕೆ ಅಧ್ಯಯನಶೀಲತೆಯನ್ನು ಧಾರೆಯೆರೆದು, ಮಾತೃಹೃದಯದ ಕಂಪನ್ನು ಸೇರಿಸಿ ತಯಾರಿಸಿರುವ ಲೇಖನಗಳು ‘ನಿರಂತರ’ ಪತ್ರಿಕೆಯ ‘ಗೆಳತಿ’ ಅಂಕಣದಲ್ಲಿ ಕಳೆದ ಎರಡು ದಶಕಗಳಿಂದ ಜನಪ್ರಿಯ ಮಾಲಿಕೆಯಾಗಿ ಹೊರಬಂದಿದೆ.
ಹೇಮಾವತಿ ವೀ. ಹೆಗ್ಗಡೆ ಅವರು ಮೂಲತಃ ಬೆಳ್ತಂಗಡಿ ತಾಲೂಕಿನ ಪೆರಾಡಿ ಬೀಡಿನವರು. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರ ಪತ್ನಿ. ಧರ್ಮಸ್ಥಳದಲ್ಲಿ ‘ಕನ್ಯಾಕುಮಾರಿ ಯುವತಿ ಮಂಡಲ’ವನ್ನು ಪ್ರಾರಂಭಿಸಿ, ಧರ್ಮಸ್ಥಳದ ಯುವತಿಯರಿಗೆ ಮತ್ತು ಆಸಕ್ತ ಮಹಿಳೆಯರಿಗೆ ಸ್ವಉದ್ಯೋಗದ ಪರಿಕಲ್ಪನೆಯನ್ನು ಮೂಡಿಸಿದರು. ಓದಿನಲ್ಲಿ ವಿಶೇಷ ಆಸಕ್ತಿ ಇದ್ದು, ಅವರು ಉತ್ತಮ ಬರಹಗಾರರು, ಭಾಷಣಕಾರರೂ ಹೌದು. ಮಂಜುವಾಣಿ ಪತ್ರಿಕೆಯ ‘ಮಗಳಿಗೊಂದು ಪತ್ರ’ ಮತ್ತು ‘ನಿರಂತರ’ ಮಾಸಪತ್ರಿಕೆಯಲ್ಲಿ ‘ಗೆಳತಿ’ ಎಂಬ ಅಂಕಣದ ಮೂಲಕ ರಾಜ್ಯದ ಜನತೆಗೆ ಚಿರಪರಿಚಿತರು. ಕೃತಿಗಳು : ಗೆಳತಿ ಭಾಗ-1, ಗೆಳತಿ ಭಾಗ-2, ಗೆಳತಿ ಭಾಗ-3 (ಅಂಕಣ ಬರಹಗಳು) ಪ್ರಶಸ್ತಿ-ಪುರಸ್ಕಾರಗಳು: ಕೆಳದಿ ರಾಣಿ ಚೆನ್ನಮ್ಮ ...
READ MORE