‘ಗಳಿಗೆ ಬಟ್ಟಲು’ ಕೃತಿಯು ಆರ್. ತಾರಿಣಿ ಶುಭದಾಯಿನಿ ಅವರ ಲೇಖನಸಂಕಲನವಾಗಿದೆ. ಹದಿನೆಂಟು ಲೇಖನಗಳಿದ್ದು, ಅವುಗಳನ್ನು ಪಾದ ಒ೦ದು; ಕಾವ್ಯ, ಪಾದ ಎರಡು; ಕಥನ, ಪಾದ ಮೂರು ಸಂಕಥನ ಎಂದು ವಿಭಜಿಸಿಕೊಂಡಿದ್ದು, ಈ ಬಗೆಯ ವರ್ಗೀಕರಣ ಔಚಿತ್ಯವೆನಿಸುತ್ತದೆ. ಕಾವ್ಯ, ಕಥನ ಮತ್ತು ವಿಮರ್ಶೆಯ ವಿಮರ್ಶೆ ಇಲ್ಲಿದ್ದರೂ - ಇಲ್ಲಿನ ಎಲ್ಲ ಲೇಖನಗಳನ್ನು ಬೆಸೆಯುತ್ತಿರುವುದು ಕೃತಿಯ ಲೇಖಕಿಯ ಸಾಮಾಜಿಕ ಬದ್ಧತೆ, ಆಳವಾದ ಸಾಹಿತ್ಯಕ ಪ್ರಜ್ಞೆ ಮತ್ತು ನಿಷ್ಠ ದೃಷ್ಟಿಕೋನ. ಒಂದು ರೀತಿಯಲ್ಲಿ ಸಾಹಿತ್ಯ ಮತ್ತು ಸಾಹಿತ್ವಿಕ ಸಿದ್ಧಾಂತಗಳ ಪುನರ್ ಪರಿಶೀಲನೆಯಂತೆ, ಪುನರವಲೋಕನದಂತೆ, ಮರುಓದಿನಂತೆ ಇಲ್ಲಿನ ಲೇಖಗಳು ಕಾಣುತ್ತವೆ.
ಕೇವಲ ಸ್ತ್ರೀವಾದವಷ್ಟೇ ಅಲ್ಲದೆ ಸಮಾಜವಾದ, ಮಾರ್ಕ್ಸ್ ವಾದ ಮತ್ತು ಅಂಬೇಡ್ಕರ್ ವಿಚಾರಧಾರೆಯ ಬಗೆಗೆ ಆಳವಾದ ಜ್ಞಾನವನ್ನು ಹೊಂದಿರುವ ತಾರಿಣಿಯವರು, ತಮ್ಮ ಈ ಜ್ಞಾನವನ್ನು ಸಾಹಿತ್ಯಕ್ಕೆ ಅನ್ವಯಿಸುವ ಕ್ರಮ ನಿಜಕ್ಕೂ ಅನುಕರಣೀಯ, ದಾಸಸಾಹಿತ್ಯದ ಬಗೆಗೆ, ರತ್ನಾಕರವರ್ಣಿಯ ಭರತೇಶ ವೈಭವದ ಬಗೆಗೆ ಮೊದಲ ಮೂರು ಲೇಖನಗಳಲ್ಲಿ ಚರ್ಚಿಸಿರುವುದು ಬಿಟ್ಟರೆ, ಉಳಿದೆಲ್ಲವೂ ಆಧುನಿಕ ಸಾಹಿತ್ಯವನ್ನು ಮತ್ತು ಸಾಹಿತ್ಯ ವಿಮರ್ಶಾ ಮಾದರಿಗಳನ್ನು ಕುರಿತ ಲೇಖನಗಳು, ಮಾಸ್ತಿ, ಕರೂರು ವಾಸುದೇವಾಚಾರ್ಯ, ಕುವೆಂಪು ಅವರಂತಹ ಹಿರಿಯ ತಲೆಮಾರಿನ ಸಾಹಿತಿಗಳನ್ನೂ; ಅನಂತಮೂರ್ತಿ, ತೇಜಸ್ವಿ, ಎಚ್. ಎಸ್. ಶಿವಪ್ರಕಾರ್, ಎಸ್. ಜಿ. ಸಿದ್ಧರಾಮಯ್ಯ, ಅಬ್ದುಲ್ ಬಷೀರ್ ಮೊದಲಾದ ನಂತರದ ತಲೆಮಾರಿನವರನ್ನು ಇವರು ಕ೦ಡರಿಸಿರುವ ರೀತಿ ವಿಶಿಷ್ಟವೆನಿಸುತ್ತದೆ.
ತಾರಿಣಿ ಶುಭದಾಯಿನಿ ಆರ್. ಅವರು 1971 ಜನವರಿ 09ರಂದು ಮೈಸೂರಿನಲ್ಲಿ ಹುಟ್ಟಿದರು. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಅಧ್ಯಯನ ಮಾಡಿದವರು. ’ತೋಡಿರಾಗ, ಚಿತ್ತಗ್ಲಾನಿಯ ಮಾತು, ಒಂದು ತುಂಡು ಬೆಲ್ಲ’ ಎಂಬ ಕವನ ಸಂಕಲನ ಹೊರತಂದಿದ್ಧಾರೆ. ಉಪನ್ಯಾಸಕಿಯಾಗಿದ್ದು, ಕನ್ನಡ ಸಾಹಿತ್ಯದ ಬಗ್ಗೆ ಹಲವಾರು ಉಪನ್ಯಾಸ ನೀಡಿದ್ದಾರೆ. ‘ಹೆಡೆಯಂತಾಡುವ ಸೊಡರು’ ಅವರ ವಿಮರ್ಶಾ ಕೃತಿ. ಸ್ತ್ರೀಶಿಕ್ಷಣ ಚರಿತ್ರೆಯ ಹೆಜ್ಜೆಗಳು ಅವರ ಮಾನವಿಕ ಕೃತಿಯಾಗಿದೆ. ಕರ್ನಾಟಕ ಲೇಖಕಿಯರ ಸಂಘದಿಂದ ಗುಡಿಬಂಡೆ ಪೂರ್ಣಿಮಾ ದತ್ತಿಪ್ರಶಸ್ತಿ, ಕಥಾರಂಗಂ ಪ್ರಶಸ್ತಿ, ಪ್ರೊ. ಡಿ.ಸಿ. ಅನಂತಸ್ವಾಮಿ ಸಂಸ್ಕರಣ ದತ್ತಿನಿಧಿ ಪ್ರಶಸ್ತಿ ಬೇಂದ್ರೆ ಗ್ರಂಥ ಬಹುಮಾನ ಮುಂತಾದ ಪ್ರಶಸ್ತಿಗಳು ಲಭಿಸಿವೆ. ಸ್ತ್ರೀವಾದಕ್ಕೆ ಹೊಸ ...
READ MORE(ಹೊಸತು, ನವೆಂಬರ್ 2012, ಪುಸ್ತಕದ ಪರಿಚಯ)
ಸ್ತ್ರೀನಿಷ್ಟ ದೃಷ್ಟಿಕೋನದ ಮೂಲಕ ಸಾಹಿತ್ಯ ಮತ್ತು ಸಾಹಿತ್ಯಕ ಸಿದ್ಧಾಂತಗಳನ್ನು ಚರ್ಚೆಗೆ ಒಳಪಡಿಸಿರುವ ಕೃತಿಯಿದು. ಹದಿನೆಂಟು ಲೇಖನಗಳಿದ್ದು, ಅವುಗಳನ್ನು ಪಾದ ಒ೦ದು; ಕಾವ್ಯ, ಪಾದ ಎರಡು; ಕಥನ, ಪಾದ ಮೂರು ಸಂಕಥನ ಎಂದು ವಿಭಜಿಸಿಕೊಂಡಿದ್ದು, ಈ ಬಗೆಯ ವರ್ಗೀಕರಣ ಔಚಿತ್ಯವೆನಿಸುತ್ತದೆ. ಕಾವ್ಯ, ಕಥನ ಮತ್ತು ವಿಮರ್ಶೆಯ ವಿಮರ್ಶೆ ಇಲ್ಲಿದ್ದರೂ - ಇಲ್ಲಿನ ಎಲ್ಲ ಲೇಖನಗಳನ್ನು ಬೆಸೆಯುತ್ತಿರುವುದು ಕೃತಿಯ ಲೇಖಕಿಯ ಸಾಮಾಜಿಕ ಬದ್ಧತೆ, ಆಳವಾದ ಸಾಹಿತ್ಯಕ ಪ್ರಜ್ಞೆ ಮತ್ತು ನಿಷ್ಠ ದೃಷ್ಟಿಕೋನ. ಒಂದು ರೀತಿಯಲ್ಲಿ ಸಾಹಿತ್ಯ ಮತ್ತು ಸಾಹಿತ್ವಿಕ ಸಿದ್ಧಾಂತಗಳ ಪುನರ್ ಪರಿಶೀಲನೆಯಂತೆ, ಪುನರವಲೋಕನದಂತೆ, ಮರುಓದಿನಂತೆ ಇಲ್ಲಿನ ಲೇಖಗಳು ಕಾಣುತ್ತವೆ. ಕೇವಲ ಸ್ತ್ರೀವಾದವಷ್ಟೇ ಅಲ್ಲದೆ ಸಮಾಜವಾದ, ಮಾರ್ಕ್ಸ್ ವಾದ ಮತ್ತು ಅಂಬೇಡ್ಕರ್ ವಿಚಾರಧಾರೆಯ ಬಗೆಗೆ ಆಳವಾದ ಜ್ಞಾನವನ್ನು ಹೊಂದಿರುವ ತಾರಿಣಿಯವರು, ತಮ್ಮ ಈ ಜ್ಞಾನವನ್ನು ಸಾಹಿತ್ಯಕ್ಕೆ ಅನ್ವಯಿಸುವ ಕ್ರಮ ನಿಜಕ್ಕೂ ಅನುಕರಣೀಯ, ದಾಸಸಾಹಿತ್ಯದ ಬಗೆಗೆ, ರತ್ನಾಕರವರ್ಣಿಯ ಭರತೇಶ ವೈಭವದ ಬಗೆಗೆ ಮೊದಲ ಮೂರು ಲೇಖನಗಳಲ್ಲಿ ಚರ್ಚಿಸಿರುವುದು ಬಿಟ್ಟರೆ, ಉಳಿದೆಲ್ಲವೂ ಆಧುನಿಕ ಸಾಹಿತ್ಯವನ್ನು ಮತ್ತು ಸಾಹಿತ್ಯ ವಿಮರ್ಶಾ ಮಾದರಿಗಳನ್ನು ಕುರಿತ ಲೇಖನಗಳು, ಮಾಸ್ತಿ, ಕರೂರು ವಾಸುದೇವಾಚಾರ್ಯ, ಕುವೆಂಪು ಅವರಂತಹ ಹಿರಿಯ ತಲೆಮಾರಿನ ಸಾಹಿತಿಗಳನ್ನೂ; ಅನಂತಮೂರ್ತಿ, ತೇಜಸ್ವಿ, ಎಚ್. ಎಸ್. ಶಿವಪ್ರಕಾರ್, ಎಸ್. ಜಿ. ಸಿದ್ಧರಾಮಯ್ಯ, ಅಬ್ದುಲ್ ಬಷೀರ್ ಮೊದಲಾದ ನಂತರದ ತಲೆಮಾರಿನವರನ್ನು ಇವರು ಕ೦ಡರಿಸಿರುವ ರೀತಿ ವಿಶಿಷ್ಟವೆನಿಸುತ್ತದೆ. ಭಕ್ತಿಪಂಥದ ಹಿನ್ನೆಲೆ ಯಲ್ಲಿ ಲಲ್ಲೇಶ್ವರಿಯ ಕಾವ್ಯ-ತತ್ವವನ್ನು ಮಂಡಿಸಿರುವ ಲೇಖನ ನಿಜಕ್ಕೂ ಅನನ್ಯ.