ಗಾಳಿಗಂಧ

Author : ಸತ್ಯಮಂಗಲ ಮಹಾದೇವ

Pages 94

₹ 100.00




Year of Publication: 2019
Published by: ವಂಶಿ ಪಬ್ಲಿಕೇಷನ್ಸ್
Address: ನೆಲಮಂಗಲ, ಬೆಂಗಳೂರು - 562123
Phone: 9916595916

Synopsys

‘ಗಾಳಿಗಂಧ’ದ ಜೀವಸರಪಳಿಯ ಸಾಹಿತ್ಯ ಕಥನದ ಬಹುಪಾಲು ಲೇಖನಗಳು ಸಂಪಾದಿತ ಕೃತಿಗಳಿಗೆ ಹಾಗೂ ಗೆಳೆಯರ ಪುಸ್ತಕಗಳಿಗೆ ಬರೆದ ಮುನ್ನುಡಿ ರೂಪದ ಮಾತುಗಳೇ ಆಗಿದೆ. ಇವೆಲ್ಲವನ್ನು ಕವಿ ಹೃದಯದ ಪ್ರತಿಕ್ರಿಯೆಯೆಂಬಂತೆ ಗ್ರಹಿಸಬಹುದು. ಆದರೆ ಇದೆಲ್ಲ ಬರವಣ ಗೆಯ ಶಿಷ್ಟಾಚಾರಗಳ ಹಂಗು ತೊರೆದ ‘ಲಹರಿ'ರೂಪದಲ್ಲಿದೆ. ವ್ಯಕ್ತಿಗಳನ್ನು ಅವರ ಕೃತಿಗಳ ನೆಪದಲ್ಲಿ ಮೆಲುಕು ಹಾಕುತ್ತಾ ನೆನಪಿಸಿಕೊಳ್ಳುವ ಕ್ರಮವೇ ಅವರ ವ್ಯಕ್ತಿತ್ವವನ್ನು ಭಿನ್ನವಾಗಿ ಕಟ್ಟಿಕೊಡುತ್ತದೆ. ಇಂಥ ಅಪರೂಪದ ಚಿತ್ರಗಳು ಬುದ್ಧ, ಅಶೋಕ, ಬಸವಣ್ಣ, ಲಕ್ಷ್ಮೀಶ, ಕನಕದಾಸರಿಂದ ಹಿಡಿದು ಆಧುನಿಕ ಕಾರ್ನಾಡ್, ಮೊಗಸಾಲೆಯವರವರೆಗೂ ಹರಡಿಕೊಂಡಿದೆ.

’ಮಹದೇವರು ಬಾಲ್ಯದಿಂದಲೂ ಅನುಭವಿಸಿದ ಅಲೆಮಾರಿ ಬದುಕಿನ ಹಿನ್ನೆಲೆ ಅವರ ವ್ಯಕ್ತಿತ್ವವನ್ನು ಪರಿಪಕ್ವವಾಗಿ ಮಾಗಿಸಿದೆ. ಹೀಗಾಗಿ ಅವರ ವ್ಯಾಪ್ತಿಗೆ ಬಂದದ್ದೆಲ್ಲವೂ ವಿಶಿಷ್ಟ ಒಳನೋಟಗಳಿಂದ ಪರಿಭಾವಿಸುವ ಅವರ ದೃಷ್ಟಿಕೋನಕ್ಕೆ ಒಚಿದು ರೀತಿಯಲ್ಲಿ ಅನುಭಾವತೆಯ ಸ್ಪರ್ಶ ಪ್ರಾಪ್ತವಾಗಿದೆ- ಅದನ್ನು ಅವರು ಬರಹಗಳಿಗೆ ನೀಡಿರುವ ಶೀರ್ಷಿಕೆಗಳೇ ಹೇಳುತ್ತವೆ” ಎನ್ನುತ್ತಾರೆ ಮೀರಸಾಬಿಹಳ್ಳಿ ಬಸಣ್ಣ ಅವರ ಮಾತುಗಳು ಈ ಕೃತಿಯನ್ನು ಓದಿದವರಿಗೆ ತಿಳಿಯುತ್ತದೆ. 

About the Author

ಸತ್ಯಮಂಗಲ ಮಹಾದೇವ
(12 June 1983)

ಸತ್ಯಮಂಗಲ ಮಹಾದೇವ ಅವರು ಮೂಲತಃ ತುಮಕೂರು ಜಿಲ್ಲೆ, ತುಮಕೂರು ತಾಲ್ಲೂಕಿನ ಸತ್ಯಮಂಗಲ ಗ್ರಾಮದಲ್ಲಿ 12-06-1983 ರಲ್ಲಿ ರಾಜಣ್ಣ ಮತ್ತು ಜಯಮ್ಮ ದಂಪತಿಯ ಮಗನಾಗಿ ಜನಿಸಿದರು.  ಕನ್ನಡದ ಸಮಕಾಲೀನ ಯುವ ಬರಹಗಾರರಲ್ಲಿ ಸೂಕ್ಷ್ಮಸಂವೇದಿ ಹಾಗೂ ಜೀವಪರ ಚಿಂತನೆಯ ಕವಿಯಾಗಿ,  ಕಾವ್ಯ, ವಿಮರ್ಶೆ, ವ್ಯಕ್ತಿಚಿತ್ರ, ಸಂಪಾದಕೀಯ, ಸಂಶೋಧನೆಯ ಕ್ಷೇತ್ರದಲ್ಲಿ ಕೆಲಸಮಾಡುತ್ತಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2017 ರಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದರು.  ಕೇಂದ್ರಸಾಹಿತ್ಯ ಅಕಾಡೆಮಿಯು ಆಯೋಜಿಸಿದ್ದ "ರಾಷ್ಟ್ರೀಯ ಯುವ ಬರಹಗಾರರ ಸಮ್ಮೇಳನ" ಕೇರಳ, ಪಂಜಾಬ್, ಮಹಾರಾಷ್ಟ್ರ, ಅಸ್ಸಾಂ ಹೀಗೆ ರಾಷ್ಟ್ರದ ಅನೇಕ ಕಡೆಗಳಲ್ಲಿ ಕಾವ್ಯವಾಚನ ಮಾಡಿ ...

READ MORE

Related Books