ಎಲ್ಲಿಗೋ ಪಯಣ ಯಾವುದೋ ದಾರಿ

Author : ಶ್ರೀನಿವಾಸ ಜೋಕಟ್ಟೆ

Pages 236

₹ 250.00




Year of Publication: 2022
Published by: ಜಾಗೃತಿ ಪ್ರಿಂಟರ್ಸ್

Synopsys

ಆಡು ಮುಟ್ಟದ ಸೊಪ್ಪಿಲ್ಲ, ಜೋಕಟ್ಟೆ ಬರೆಯದ ವಸ್ತುಗಳಿಲ್ಲ ಎನ್ನುವ ಗಾದೆ ಜೋಕಟ್ಟೆಯವರ ಬರಹಗಳಿಗೆ ಚೆನ್ನಾಗಿ ಒಪ್ಪುತ್ತದೆ, ಜೋಕಟ್ಟೆ ಎಂದರೆ ಬರಹಗಳ ಅಣೆಕಟ್ಟು ಒಡೆದಂತೆ, ಪತ್ರಕರ್ತರು ಸದಾ ಅವಸರದ ಕುದುರೆಯೇರಿ ಕುಳಿತಿರುವುದರಿಂದ ಅವರ ಹೆಚ್ಚಿನ ಲೇಖನಗಳು ತಕ್ಷಣದ ಅಗತ್ಯವಾಗಿರುತ್ತದೆ. ಇವು ಕುತೂಹಲಕಾರಿ ಮಾಹಿತಿಗಳನ್ನೂ ನೀಡುತ್ತವೆ. ಜನಪ್ರಿಯ ಮಾದರಿಯ ಬರಹಗಳು ಇದಾಗಿರುವುದರಿಂದ ಇಲ್ಲಿ ಸಂಕೀರ್ಣತೆಯಿಲ್ಲ. ಸರಳತೆ ಅವರ ನಿರೂಪಣೆಯ ಹೆಗ್ಗಳಿಕೆ - ಕಾರುಣ್ಯ,

About the Author

ಶ್ರೀನಿವಾಸ ಜೋಕಟ್ಟೆ

ಸಾಹಿತಿ, ಪತ್ರಕರ್ತ 'ಶ್ರೀನಿವಾಸ ಜೋಕಟ್ಟೆ’ ಅವರು 1964 ಜುಲೈ 4 ಮಂಗಳೂರು ಜೋಕಟ್ಟೆಯಲ್ಲಿ ಜನಿಸಿದರು. ಪ್ರಸ್ತುತ ಮುಂಬಯಿ ನಗರದಲ್ಲಿ ವಾಸವಿದ್ದು, ಕನ್ನಡದ ದಿನಪತ್ರಿಕೆ 'ಕರ್ನಾಟಕ ಮಲ್ಲ'ದ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 'ಜೋಶ್ರೀ', 'ಶ್ರೀಜೋ', ಎಂಬ ಕಾವ್ಯನಾಮದಿಂದಲೂ ಬರೆಯುತ್ತಿದ್ದಾರೆ. ಪ್ರವೃತ್ತಿಯಲ್ಲಿ ಬರಹಗಾರರಾಗಿಯೂ ಗುರುತಿಸಿಕೊಂಡಿರುವ ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಹಿಮವರ್ಷ, ಊರಿಗೊಂದು ಆಕಾಶ, ಒತ್ತಿ ಬರುವ ಕತ್ತಲ ದೊರೆಗಳು. ಇವರ ಗದ್ದರ್‌ ಕವನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಸಂಕಲನಕ್ಕೆ ಆಯ್ಕೆಯಾಗಿದೆ.  ...

READ MORE

Related Books