ದೆಹಲಿಯ ಕನ್ನಡ ಜಗತ್ತಿನಲ್ಲಿ ಕೃತಿಯಲ್ಲಿ ಅವನೀಂದ್ರನಾಥ್ ರಾವ್ ಅವರು ವ್ಯಕ್ತಿಚಿತ್ರಗಳು ಮತ್ತು ಸಾಂಸ್ಕೃತಿಕ ವ್ಯಕ್ತಿತ್ವ ಕಟ್ಟಿಕೊಟ್ಟಿದ್ದಾರೆ.
ಮುನ್ನುಡಿಯಲ್ಲಿ ಹಿರಿಯ ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಮುನ್ನುಡಿಯಲ್ಲಿ ’ಸೂಕ್ಷ್ಮ ಮನಸ್ಸಿನ ಸಂವೇದನಾಶೀಲ ವ್ಯಕ್ತಿಯಾದ ಅವರದು ಬಹುಮುಖ ಆಸಕ್ತಿ. ಸಾಹಿತ್ಯ, ರಂಗಭೂಮಿ, ಪುಸ್ತಕ ಸಂಸ್ಕೃತಿ, ಸಂಘಟನೆ, ಸಾಮಾಜಿಕ ಆಂದೊಲನ – ಹೀಗೆ ಹಲವು ಬಗೆಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವ ಕ್ರಿಯಾಶೀಲ ಚೇತನ. ಅವನೀಂದ್ರರಿಗೆ ಬರವಣಿಗೆ ತಮ್ಮನ್ನು ಕ್ರಿಯಾಶೀಲವಾಗಿಟ್ಟುಕೊಳ್ಳಲು ಇರುವ ಮಾಧ್ಯಮ. ಹೀಗಾಗಿ ಅವರ ಬರವಣಿಗೆ ತೋರುಗಾಣಿಕೆಯಿಂದ ಪಾರಾಗಿದೆ. ಇದು ಅವರ ಶಕ್ತಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪುರುಷೋತ್ತಮ ಬಿಳಿಮಲೆ ಅವರು 'ಹೊರನಾಡಿನ ಕನ್ನಡಿಗರ ಸಾಂಸ್ಕೃತಿಕ ತಳಮಳಗಳನ್ನು ಭಾಷೆಯಲ್ಲಿ ಹಿಡಿದಿಟ್ಟ ಮೊದಲ ಪುಸ್ತಕವಿದು' ಎಂದರೆ ಡಾ. ಟಿ.ಎಸ್. ಸತ್ಯನಾಥ್ ಅವರು 'ಅವನೀಂದ್ರರ ಈ ಕೃತಿ ಆಧುನಿಕೋತ್ತರ ಕನ್ನಡ ಸಾಂಸ್ಕೃತಿಕ ಇತಿಹಾಸ ರಚನೆಗೆ ಸಹಾಯ ಮಾಡುತ್ತದೆ. ಸಂಸ್ಕೃತಿಯ ದಾಖಲೀಕರಣಕ್ಕೂ ಈ ಪುಸ್ತಕ ಅಗತ್ಯ ಮಾಹಿತಿ ಪರಿಕರಗಳನ್ನು ಒದಗಿಸಬಲ್ಲದು' ಎಂದು ಅಭಿಪ್ರಾಯಪಟ್ಟಿದ್ದಾರೆ.
ವೈ. ಅವನೀಂದ್ರನಾಥ್ ರಾವ್ (1971) ದೆಹಲಿಯ ಸಂಸ್ಕೃತಿ ಮಂತ್ರಾಲಯದ ಕೇಂದ್ರ ಸಚಿವಾಲಯ ಗ್ರಂಥಾಲಯದ ಅಧಿಕಾರಿ. ಉಡುಪಿ ಜಿಲ್ಲೆಯ ಎಲ್ಲೂರಿನವರು. ಉಚ್ಚಿಲದ ಸರಸ್ವತಿ ಮಂದಿರ, ಕುಂದಾಪುರದ ಬೋರ್ಡ್ ಹೈಸ್ಕೂಲ್ ಅಲ್ಲದೆ ಅದಮಾರು, ಪೊಲಿಪು, ಸುಳ್ಯದ ಸಬ್ಬಡ್ಕದಲ್ಲಿ ಆರಂಭಿಕ ಶಿಕ್ಷಣ ಪಡೆದರು. ಬ್ರಹ್ಮಾವರದ ಎಸ್.ಎಂ.ಎಸ್ ಮತ್ತು ಮುಲ್ಕಿಯ ವಿಜಯ ಕಾಲೇಜು ಮೂಲಕ ವಾಣಿಜ್ಯ ಪದವಿ ಪಡೆದರು. ಕ್ರಿಕೆಟಿಗನಾಗಿದ್ದ ಇವರು ವಿಶ್ವವಿದ್ಯಾಲಯದ 'ಬಿ.ಸಿ.ಆಳ್ವ ಟ್ರೋಫಿ' ಪಂದ್ಯಾವಳಿಯಲ್ಲಿ ಆಡಿದ್ದರು. ಕೆಲಸಮಯ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದೋಗಿಯಾಗಿದ್ದರು. ಉನ್ನತ ಶಿಕ್ಷಣದ ಬಳಿಕ ಮೂಡಬಿದರೆ, ಮುಲ್ಕಿ,ಮಂಗಳೂರಿನಲ್ಲಿ ಗ್ರಂಥಪಾಲಕರಾಗಿ ಮತ್ತು ಕೆಲಕಾಲ ಕನ್ನಡ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದರು. ಮಂಗಳೂರು ...
READ MORE