'ದಾರಿ ತಪ್ಪಿದ ದೇಶ ಪಾಕಿಸ್ತಾನ' ಲೇಖಕ ಮೋಹನ್ ವಿಶ್ವ ಅವರ ಕೃತಿ. ಕೃತಿಯ ಕುರಿತು ಬರೆಯುತ್ತಾ 'ಕಣ್ಣಿಗೆ ಬಟ್ಟೆ ಕಟ್ಟಿ ಪಾಕಿಸ್ತಾನದಲ್ಲಿ ಬಿಚ್ಚಿದರೆ, ಭಾರತ ಎಂದು ಹೇಳಬಹುದು. ಅಷ್ಟರಮಟ್ಟಿಗೆ ಪಾಕಿಸ್ತಾನ, ನಮ್ಮ ದೇಶವನ್ನು ಹೋಲುತ್ತದೆ. ಭಾರತದೊಂದಿಗೆ ಸ್ವಾತಂತ್ರ್ಯ ಪಡೆದ, ಭಾರತದಿಂದ ವಿಭಜನೆಯಾಗಿ ಹುಟ್ಟಿಕೊಂಡ ಪಾಕಿಸ್ತಾನ, ಒಂದು ಧರ್ಮ, ಒಂದು ಭಾಷೆ, ಒಂದು ಸಂಸ್ಕೃತಿ ಒಂದು ಜನಜೀವನ ಹೊಂದಿದ ದೇಶವಾಗಿ, ಭೌಗೋಳಿಕವಾಗಿ ಸಣ್ಣದಾಗಿದ್ದರಿಂದ ಉತ್ತಮ ಆಡಳಿತ ನಿರ್ವಹಣೆಗೂ ಸಹಾಯಕವಾಗಿ, ಭಾರತಕ್ಕಿಂತ ಮುಂದುವರಿದ, ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮಬೇಕಿತ್ತು. ಆದರೆ ಆಗಿದ್ದೇನು? ಉಲ್ಟಾ' ಎನ್ನುತ್ತಾರೆ ಲೇಖಕರು. ಪಾಕಿಸ್ತಾನದ ಸ್ಥಿತಿಗತಿಗಳ ಕುರಿತು ವಿವರಿಸಿರುವ ಕೃತಿ ಇದು.