ದರಗಾ

Author : ಬಸವರಾಜ ಕೋಡಗುಂಟಿ

Pages 75

₹ 75.00




Year of Publication: 2015
Published by: ಬಂಡಾರು ಪ್ರಕಾಶನ
Address: ಮಸ್ಕಿ, ಲಿಂಗಸಗೂರು ತಾ||, ರಾಯಚೂರು-584124
Phone: 9886407011

Synopsys

'ದರಗಾ' ಬಸವರಾಜ ಕೋಡಗುಂಟೆಯವರ ಸಂಪಾದಿತ ಕೃತಿ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕನ್ನಡ ಮತ್ತು ಭಾಷಾವಿಜ್ಞಾನ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಬಸವರಾಜ್ ಭಾಷಾಶಾಸ್ತ್ರದ ಬಗ್ಗೆ ಸಾಕಷ್ಟು ಅಧ್ಯಯನಗಳನ್ನು ಮಾಡಿದ್ದಾರೆ. ಅದರೊಂದಿಗೆ ಹೈದ್ರಾಬಾದ್ ಕರ್ನಾಟಕದ ಪ್ರಾದೇಶಿಕ ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಅವರು ಆ ಕುರಿತಾಗಿಯೂ ಅಧ್ಯಯನಗಳಲ್ಲಿ ತೊಡಗಿದ್ದಾರೆ. ಅಧ್ಯಯನದ ಭಾಗವಾಗಿಯೇ ಹಲವಾರು ಕೃತಿಗಳನ್ನು ಪ್ರಕಟಿಸಿರುವ ಅವರು ತಮ್ಮ ವಿದ್ಯಾರ್ಥಿಗಳಿಂದ ಲೇಖನಗಳನ್ನು ಬರೆಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಅವರ ಊರು ಕೃತಿಯೂ ಇದೇ ರೀತಿ ವಿದ್ಯಾರ್ಥಿಗಳ ಲೇಖನಗಳ ಸಂಕಲವಾಗಿದೆ ಅದರ ಮುಂದುವರೆದ ಭಾಗವಾಗಿ ದರಗಾ ಕೃತಿಯನ್ನು ಸಂಪಾದಿಸಿದ್ದಾರೆ.

ಈ ಕೃತಿಯಲ್ಲಿ ಹೈದ್ರಾಬಾದ್ ಕರ್ನಾಟಕದ ಭಿನ್ನ ಪ್ರದೇಶಗಳಲ್ಲಿ ಕ್ಷೇತ್ರಕಾರ್ಯದ ಮೂಲಕ ಲೇಖನಗಳನ್ನು ಬರೆಸಲಾಗಿದೆ. ಪ್ರಸ್ತುತ ದರಗಾ ಪುಸ್ತಕ ಹೈದ್ರಾಬಾದ್ ಕರ್ನಾಟಕದ ಅತ್ಯಂತ ಮಹತ್ವದ ಸೂಫಿ ಪಂತಗ ಕೇಂದ್ರಗಳ ಕುರಿತಾದದ್ದು. ಹೈದ್ರಾಬಾದ್ ಕರ್ನಾಟಕದ ಉದ್ದಗಲ ಪ್ರತಿ ಹಳ್ಳಿಯಲೂ ಬೇರೆ ಬೇರೆ ಸೂಫಿ ಸಂತರ ದರಗಗಳಿವೆ. ಇಂದಿಗೂ ಎಲ್ಲಾ ಧರ್ಮ ಜಾತಿಗಳನ್ನು ಮೀರಿ ಮನುಷ್ಯತ್ವಕ್ಕೆ ಮಿಡಿವ ಸಮಾಜವನ್ನುವ್ಯಾಪಕವಾಗಿ ಆವರಿಸಿಕೊಂಡಿರುವ ಸೂಫಿ ಪಂತ ಈ ಪ್ರದೇಶಗಳಲ್ಲಿ ಆಳವಾಗಿ ಬೇರೂರಿದೆ. ಈ ಪ್ರದೇಶಕ್ಕೆ ಸೂಫಿ ಪಂತ ರಾಷ್ಟ್ರಕೂಟರ ಕಾಲಕ್ಕೆ ಬಂದಿದ್ದರೂ ಬಹುಮನಿಗಳ ನಂತರದಿಂದ ಈ ಪ್ರದೇಶ ಸೂಫಿಗಳ ತವರೂರು ಎಂಬತಾಗಿದೆ. ಈ ಎಲ್ಲಾ ವಿವರಣೆಗಳನ್ನು ದರಗಾ ಕೃತಿಯಲ್ಲಿ ನೀಡಲಾಗಿದೆ. 

About the Author

ಬಸವರಾಜ ಕೋಡಗುಂಟಿ

ಬಸವರಾಜ ಕೋಡಗುಂಟಿ ಇವರು ಪ್ರಸ್ತುತ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಗುಲ್ಬರ್ಗದಲ್ಲಿ ಕನ್ನಡ ಭಾಷಾ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾಷಾ ವಿಜ್ಞಾನದಲ್ಲಿ ಆಸಕ್ತಿ ಇರುವ ಇವರು ಕನ್ನಡ ಮಾತಿನ ಇತಿಹಾಸ, ದ್ರಾವಿಡ ಮಾತಿನ ಮನೆತನ, ವಿಬಕ್ತಿ ಮೊದಲಾದ ಕ್ಶೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಕನ್ನಡ ವಿಬಕ್ತಿ ರೂಪಗಳ ಅಯ್ತಿಹಾಸಿಕ ಬೆಳವಣಿಗೆ, ಮಸ್ಕಿ ಕನ್ನಡದಾಗ ವಿಬಕ್ತಿ ರೂಪಗಳು, ಮಾತೆಂಬುದು, ಬಾಶಿಕ ಕರ್ನಾಟಕ. ಇತರ ಕೃತಿಗಳೆಂದರೆ ಭಾಷಾ ವಿಶ್ಲೇಷಣೆ, ಊರು, ಹೈದರಾಬಾದ್ ಕರ್ನಾಟಕ, ಕರ್ನಾಟಕದ ಮಾತುಗಳು, ದರಗಾ, ಹೈದರಾಬಾದ್ ಕರ್ನಾಟಕ ಸಾಲು ಸಂಪುಟಗಳು-6 (ಊರು, ಕೋಟೆ, ಶಾಸನ, ಕೆರೆ-ಬಾವಿ, ಕನ್ನಡ, ದರಗಾ) ಮುಂತಾದವು.  ...

READ MORE

Related Books