ಲೇಖಕ ಹಾಗೂ ಚಿಂತಕ ನಾ. ದಿವಾಕರ ಅವರು ದಲಿತರು: ವಿಮೋಚನೆಯ ಹಾದಿ-ಒಂದು ಅವಲೋಕನ ಎಂಬ ಕೃತಿಯನ್ನು ರಚಿಸಿದ್ದು, ಈ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ‘ಡಾ. ಎಲ್. ಬಸವರಾಜ ಅಮೃತ ಮಹೋತ್ಸವ ದತ್ತಿ’ ಬಹುಮಾನ (2009) ದೊರೆತಿದೆ. ಮೀಸಲಾತಿ ಸೌಲಭ್ಯವಿದ್ದರೂ ಶಿಕ್ಷಣದ ಪ್ರಯೋಜನಗಳು ಸೇರಿದಂತೆ ಇತರೆ ಸೌಲಭ್ಯಗಳು ಅನ್ಯ ಜಾತಿಯವರ ಪಾಲಾಗುತ್ತಿವೆ. ಅವಗಳನ್ನು ಹೇಗೆ ತಡೆಯಬೇಕು. ಇದರಲ್ಲಿ ದಲಿತರ ಪಾತ್ರ ಎಷ್ಟಿದೆ. ಶತಮಾನಗಳ ಜಾತಿ ವ್ಯವಸ್ಥೆಯಿಂದ ದಲಿತರಿಗೆ ಮುಕ್ತಿ ಎಂದು ಎಂಬ ಬಗ್ಗೆಯೂ ಇಲ್ಲಿ ಚರ್ಚೆಗೆ ಒಳಪಡಿಸಲಾಗಿದೆ.
ಚಿಂತಕ, ಲೇಖಕ ನಾ. ದಿವಾಕರ ಅವರು ಹುಟ್ಟಿದ ಊರು ಕೋಲಾರ ಜಿಲ್ಲೆಯ ಚಿಂತಾಮಣಿ. 1961ರಲ್ಲಿ ಜನಿಸಿದ ಅವರು ಬೆಳೆದದ್ದು ಅದೇ ಜಿಲ್ಲೆಯ ಬಂಗಾರಪೇಟೆಯಲ್ಲಿ. ಪೂರ್ಣ ವಿದ್ಯಾಭ್ಯಾಸ ಬಂಗಾರಪೇಟೆಯಲ್ಲಿ ಮುಗಿಸಿದ ಅವರು ಬಿಕಾಂ ವ್ಯಾಸಂಗವನ್ನು ಕೋಲಾರದ ಸರ್ಕಾರಿ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಗಾಯನ, ನಾಟಕಗಳಲ್ಲಿ ಆಸಕ್ತಿಯೊಂದಿದ್ದ ಅವರು, ಹಲವು ಗೀತ ಗಾಯನ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಿಹಿಸಿದ್ದಾರೆ. ತುರ್ತುಪರಿಸ್ಥಿತಿಯ ಸಂದರ್ಭದ ನಂತರ ರಾಜಕೀಯದತ್ತ ಒಲವು ತೊರಿದ ದಿವಾಕರ್ ಕ್ರಮೇಣ ದಲಿತ ಚಳುವಳಿ ಮತ್ತು ಮಾರ್ಕ್ಸ್ ವಾದಿ ಅಧ್ಯಯನದತ್ತ ಒಲವು ಬೆಳೆಸಿಕೊಂಡರು. 1982ರಲ್ಲಿ ಪದವಿ ಮುಗಿಸಿ 1984ರಲ್ಲಿ ಕೆನರಾಬ್ಯಾಂಕ್ ...
READ MORE