ದಲಿತರು ಮತ್ತು ಆದಿವಾಸಿಗಳ ಅಭಿವೃದ್ಧಿ ನೆಲೆಗಳು

Author : ಟಿ.ಆರ್‌. ಚಂದ್ರಶೇಖರ

Pages 80

₹ 80.00




Year of Publication: 2020
Published by: ಜನಪ್ರಕಾಶನ
Address: #8, 11ನೇ ಮುಖ್ಯರಸ್ತೆ, 39ನೇ ಎ ಕ್ರಾಸ್, 4ನೇ ಟಿ ಬ್ಲಾಕ್, ಜಯನಗರ, ಬೆಂಗಳೂರು- 560041
Phone: 9731105526

Synopsys

‘ದಲಿತರು ಮತ್ತು ಆದಿವಾಸಿಗಳ ಅಭಿವೃದ್ಧಿ ನೆಲೆಗಳು’ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಅನುಲಕ್ಷಿಸಿ ಲೇಖಕ ಡಾ.ಟಿ.ಆರ್. ಚಂದ್ರಶೇಖರ ಅವರು ರಚಸಿರುವ ಕೃತಿ. ಕೃತಿಯ ಕುರಿತು ಬರೆಯುತ್ತಾ ಅನೇಕ ವರ್ಷಗಳಿಂದ ಕೇಂದ್ರ/ರಾಜ್ಯದ ಬಜೆಟ್ ಕುರಿತಂತೆ, ಅದರಲ್ಲಿ ಎಸ್.ಸಿ.ಎಸ್.ಪಿ ಮತ್ತು ಟಿಎಸ್ ಪಿ ಕುರಿತಂತೆ ಲೇಖನಗಳನ್ನು ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಕಟಿಸುತ್ತಾ ಬಂದಿದ್ದೇನೆ. ಈ ಬಗ್ಗೆ ದಲಿತ ಸಂಘಟನೆಗಳ ಕಾರ್ಯಾಗಾರಗಳಲ್ಲಿ ಹಾಗೂ ವಿಚಾರ ಸಂಕಿರಣಗಳಲ್ಲಿ ನಡೆಯುವ ಚರ್ಚೆಗಳಲ್ಲಿ ಭಾಗವಹಿಸುತ್ತಾ ಬಂದಿದ್ದೇನೆ. ಇತ್ತೀಚಿಗೆ ದಲಿತ ಹಕ್ಕುಗಳ ಸಮಿತಿಯ ಶ್ರೀಗೋಪಾಲಕೃಷ್ಣ ಹರಳಹಳ್ಳಿ ಮತ್ತು ಶ್ರೀ ಬಿ. ರಾಜಶೇಖರಮೂರ್ತಿ ಅವರ ಒತ್ತಾಯದ ಮೇಲೆ ಎಸ್.ಸಿ.ಎಸ್.ಪಿ ಮತ್ತು ಟಿಎಸ್.ಪಿ ಕುರಿತಂತೆ ಪ್ರಸ್ತುತ ಹೊತ್ತಿಗೆಯನ್ನು ಸಿದ್ಧಪಡಿಸಿದ್ದೇನೆ. ಇದರಲ್ಲಿ ಹೊಸತೇನನ್ನೋ ಹೇಳುತ್ತಿದ್ದೇನೆ ಎಂಬ ಹಮ್ಮು ನನ್ನಲ್ಲಿಲ್ಲ. ಆದರೆ ಕರ್ನಾಟಕದಲ್ಲಿ ಇದು ರಾಜ್ಯಮಟ್ಟದಲ್ಲಿನ, ಬೆಂಗಳೂರು ಕೇಂದ್ರಿತ ಮತ್ತು ಒಟ್ಟಾರೆ ರಾಜ್ಯದ ಅಭಿವೃದ್ಧಿ ಕಾರ್ಯಕ್ರಮದಂತಾಗಿರುವುದರ ಬಗ್ಗೆ ನನಗೆ ಅನುಮಾನವಿದೆ - ಅಸಮಧಾನವಿದೆ ಎಂದಿದ್ದಾರೆ ಲೇಖಕ ಟಿ.ಆರ್. ಚಂದ್ರಶೇಖರ್.

About the Author

ಟಿ.ಆರ್‌. ಚಂದ್ರಶೇಖರ
(07 April 1951)

ಮೈಸೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿರುವ ಟಿ.ಆರ್‌. ಚಂದ್ರಶೇಖರ್‌ ಅವರು ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ ಅವರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ ಕೂಡ ಆಗಿದ್ದರು. 2103ರಲ್ಲಿ ನಿವೃತ್ತರಾದ ನಂತರ ಬೆಂಗಳೂರು ನಿವಾಸಿಯಾಗಿದ್ದಾರೆ. ಅಭಿವೃದ್ಧಿ ಅದರ ಪರಿಕಲ್ಪನೆ ಹಾಗೂ ಯೋಜನೆಗಳ ಜಾರಿ, ನೀತಿ-ನಿರೂಪಣೆಗಳಿಗೆ ಸಂಬಂಧಿಸಿದಂತೆ ಹಲವು ಯೋಜನೆಗಳ ವರದಿ ಸಿದ್ಧಪಡಿಸಿದ್ದಾರೆ. ...

READ MORE

Related Books