ಕ್ರಾಸ್ ರೋಡ್ಸ್

Author : ವಿರೂಪಾಕ್ಷ ದೇವರಮನೆ

Pages 128

₹ 120.00




Year of Publication: 2022
Published by: ನವಕರ್ನಾಟಕ ಪಬ್ಲಿಕೇಶನ್‌ ಪ್ರೈವೇಟ್‌ ಲಿಮಿಟೇಡ್‌

Synopsys

ನಾವೆಲ್ಲ ಬದುಕಿನ ಕಾಸ್‌ರೋಡ್ ದಾಟಿ ಬಂದವರೆ, ಯೌವನದ ಕನಸುಗಳ ಬೆನ್ನು ಹತ್ತಿದವರಿಗೆ ಹೆತ್ತವರ ಸಹಕಾರ, ಗುರು ಹಿರಿಯರ ಮಾರ್ಗದರ್ಶನ ಒಂದುಗೂಡಿದಲ್ಲಿ ಹರೆಯ ಬಾಳಿನ ವಸಂತ, ಇಲ್ಲವಾದಲ್ಲಿ ಬದುಕಿನ ವೈಶಾಖ ಆರಂಭವಾಗಬಹುದು. ಹರೆಯದಲ್ಲಿ ಬಹಳಷ್ಟು ಜನರಿಗೆ ಕೋರ್ಸು, ಕಾಲೇಜು, ಸ್ನೇಹಿತರು, ವೃತ್ತಿ, ಸಂಗಾತಿಯ ಆಯ್ಕೆಗಳಲ್ಲಿನ ಗೊಂದಲ ಸಹಜವಾದದ್ದೆ, ಆದರೆ ಹೆತ್ತವರಿಗೂ ಮಕ್ಕಳಿಗೂ ಇಂತಹ ವಿಷಯಗಳಲ್ಲಿ ಅಭಿಪ್ರಾಯ ಭೇದಗಳು ಹೆಚ್ಚಿದಷ್ಟೂ ಕಿಶೋರದ ಕವಲುಹಾದಿಯ ಪಯಣ ಅಸಹನೀಯವೆನಿಸುತ್ತದೆ. ಹರೆಯ ತರುವ ಶಾರೀರಿಕ ಮಾನಸಿಕ ಬದಲಾವಣೆಗಳು, ಶೈಕ್ಷಣಿಕ, ವೃತ್ತಿಯಲ್ಲಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಹಿರಿಯರ ಸಹಕಾರ ಅತ್ಯಗತ್ಯ. ಉಡಲು ತೊಡಲು ಯಾವ ಕೊರತೆಯಿಲ್ಲದಿರಬಹುದು. ಆದರೆ ಹದಿಹರೆಯದಲ್ಲಿ "ಹೆದರದಿರು ನಾನಿದ್ದೇನೆ" ಎನ್ನುವ ಭರವಸೆಯ ಮಾತುಗಳು, ನೀನೆಂದರೆ ನನಗೆ ಹೆಮ್ಮೆ ಎನ್ನುವ ಆತ್ಮಾನುಭೂತಿ ಹೆಚ್ಚಿಸುವ ಮಾತುಗಳ ಕೊರತೆ ಅವರನ್ನು ಕಾಡಬಹುದು. ಆತಂಕ, ಖಿನ್ನತೆ, ಕೀಳರಿಮೆ, ಒಂಟಿತನ, ಐಡೆಂಟಿ ಕ್ರೈಸಿಸ್, ಒಂದೆಡೆಯಾದರೆ ಲೈಂಗಿಕತೆಯ ಕುರಿತಾದ ಪ್ರಶ್ನೆಗಳು, ಅತಿಯಾದ ಇಂಟರ್‌ಸೆಟ್ ಬಳಕೆ, ಮದ್ಯ-ಮಾದಕ ವ್ಯಸನಗಳ ಕುರಿತಾದ ಕುತೂಹಲ ಹರೆಯದ ಮಕ್ಕಳನ್ನು ಕಾಡಬಹುದು. ಬದುಕಿನ ಕ್ರಾಸ್‌ ರೋಡ್‌ನಲ್ಲಿರುವ ಮಕ್ಕಳ ಬೆನ್ನುತಟ್ಟಿ, ಕೈ ಹಿಡಿದು ರಸ್ತೆ ದಾಟಿಸಿ, ನೆಮ್ಮದಿಯಾಗಿ ಟಾಟಾ ಮಾಡಿ ಕಳುಹಿಸಿದ್ದೇ ಆದಲ್ಲಿ ಅವರು ಬದುಕಿನಲ್ಲಿ ಗೆಲ್ಲುವುದರಲ್ಲಿ ಸಂಶಯವಿಲ್ಲ. ಟೀನೇಜ್‌ನಲ್ಲಾಗುವ ಸಹಜ ಬದಲಾವಣೆಗಳು ಹಾಗೂ ಅವರ ಮೆದುಳಿನ ಕಾರ್ಯ ವೈಖರಿಯ ಕುರಿತು ಹೆತ್ತವರಿಗೆ ಅವಶ್ಯಕ ಮಾಹಿತಿ ನೀಡಿ, ನಾಡಿನ ಪ್ರತೀ ಮನೆಯ ಮಗು ಕಿಶೋರದ ಕವಲು ಹಾದಿಯನ್ನು ಸುಗಮವಾಗಿ ದಾಟಲಿ ಎನ್ನುವ ಹಾರೈಕೆ ಈ ಪುಸ್ತಕದ್ದು.

About the Author

ವಿರೂಪಾಕ್ಷ ದೇವರಮನೆ

ವಿರೂಪಾಕ್ಷ ದೇವರಮನೆ ಮೂಲತಃ ಹೊಸಪೇಟೆಯ ನಾಗೇನಹಳ್ಳಿಯವರು. ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಹಾಗೂ ಮಂಗಳೂರಿನ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯಲ್ಲಿ ಮನೋವೈದ್ಯಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು 2008ರಿಂದ ಉಡುಪಿಯ ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ಮನೋವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಲ್ಲಿ ಲೇಖಕರಾದ ವೈದ್ಯರು ಮಾನವ ಸಂಬಂಧಗಳು, ಸಂಬಂಧಗಳಲ್ಲಿ ಸಂವಹನ ಹಾಗೂ ಸಾಮರಸ್ಯ, ಪೇರೆಂಟಿಂಗ್, ಮಕ್ಕಳ ಆರೈಕೆ ಹಾಗೂ ಪೋಷಣೆ ಕುರಿತು ಹಾಗೂ ಉಪನ್ಯಾಸಗಳ ಮೂಲಕ ಪರಿಚಿತರು. ಮಕ್ಕಳು, ಹದಿಹರೆಯದವರು ಮತ್ತು ಯುವಜನತೆಯ ಶಿಕ್ಷಣ, ಬೆಳವಣಿಗೆ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಆಸಕ್ತಿ ಹೊಂದಿದ್ದು ಮದ್ಯವ್ಯಸನಿಗಳ ಮಕ್ಕಳಿಗಾಗಿ ...

READ MORE

Reviews

ಬದುಕಿನಲ್ಲಿ ನಾವು ಕ್ರಮಿಸಬೇಕಾದ ದಾರಿಗಳಲ್ಲಿ ಯೌವನಕ್ಕೆ ಕಾಲಿಡುವ ಸಮಯ ಮಹತ್ತರವಾದ್ದು ಹಾಗೂ ರೋಚಕವಾದ್ದು. ಬಾಲ್ಯ ಕಳೆದು ದೈಹಿಕ ಮಾನಸಿಕ ಬದಲಾವಣೆಗಳಾಗುವ ಪ್ರಕೃತಿಸಹಜವಾದ ಒಂದು ಹಂತವಿದು. ಆ ಸಂದರ್ಭದಲ್ಲಿ ದೇಹದಲ್ಲಾಗುವ ಬದಲಾವಣೆಗಳಿಂದ ಗೊಂದಲ ನಿರ್ಮಾಣವಾಗಿ ಏನು - ಎತ್ತ ಎಂದು ತಿಳಿಯದ ಮಕ್ಕಳು ಆತಂಕಕ್ಕೀಡಾಗುವರು. ಈ ಪುಸ್ತಕದಲ್ಲಿ ಇಂಥ ಸಂದರ್ಭದಲ್ಲಿ ಪೋಷಕರು - ಹೆತ್ತವರು ಶಾಲಾ ಅಧ್ಯಾಪಕ ವರ್ಗ ಸುತ್ತಲಿನ ಜನರ ಪಾತ್ರವೇನು ಎಂಬುದನ್ನು ವಿವರವಾಗಿ ತಿಳಿಸಿದ್ದಾರೆ. ಈ ಹಂತವನ್ನು ದಾಟಿ ಬಂದ ಹಿರಿಯರ ಮಾರ್ಗದರ್ಶನ ಅತಿ ಮುಖ್ಯವೆನಿಸುತ್ತದೆ. ಕಿಶೋರಾವಸ್ಥೆಯಿಂದ ಮುಂದೆ ಸಾಗುವ ವ್ಯಕ್ತಿಗೆ ಮುಂದೆ ಶೈಕ್ಷಣಿಕ ವೃತ್ತಿ ಸಂಬಂಧೀ ಸವಾಲುಗಳು, ಸಂಗಾತಿಯ ಆಯ್ಕೆ ಬಗೆಗೆ ಆತ್ಮ ವಿಶ್ವಾಸ ಮೂಡಬೇಕಾದರೆ ಈ ಹಂತದಲ್ಲೇಸರಿಯಾದ ಮಾರ್ಗದರ್ಶನವಿರಬೇಕು. ಹದಿಹರೆಯದ ಕಾಲದಲ್ಲಿ ಆತಂಕ – ಖಿನ್ನತೆ - ಕೀಳರಿಮೆ - ಒಂಟಿತನ ಮುಂತಾದವು ಕಾಡುವ ವಯಸ್ಸು. ಅದರಿಂದ ಹೊರ ಬರಲು ಯಾರ ಮಾರ್ಗದರ್ಶನ ಅಗತ್ಯವೆಂದು ಇಲ್ಲಿ ಓದಿರಿ. 

(ಕೃಪೆ: ಹೊಸತು, ಡಿಸೆಂಬರ್‌- 2022) 

Related Books