ಲೇಖಕ ಡಾ. ಕೆ. ಸತ್ಯನಾರಾಯಣ ಅವರು (28-4-2021 ರಿಂದ 6-6-2021) ನಿಗದಿತ ನಾಲ್ಕು ತಿಂಗಳ ಅವಧಿಯವರೆಗೆ kಕೋವಿಡ್ ಸಂದರ್ಭದಲ್ಲಿ ಬರೆದಿರುವ ದಿನಚರಿಯ ಪ್ರಮುಖ ಅಂಶಗಳನ್ನು ದಾಖಲಿಸಿದ್ದಾರೆ. ಅಲ್ಲದೇ, ದಿನಚರಿಯನ್ನು ಬರೆದುಕೊಂಡವನಿಗೂ ಅದನ್ನು ಮತ್ತೆ ಓದುವ ಹಾಗೂ ತಿದ್ದುವ ಹಕ್ಕಿರುವುದಿಲ್ಲ ಎಂಬುದು ಈ ಕೃತಿಯ ಉಪಶೀರ್ಷಿಕೆ. ಸಂದಿಗ್ಧ ಪರಿಸ್ಥಿತಿಯನ್ನು ಕಾಣುವ ಹಾಗೂ ಅವುಗಳನ್ನು ಬರೆದಿಡುವ, ಹೀಗೆ ಬರೆದಿದ್ದರಲ್ಲಿ ಉತ್ತಮ ಅಂಶಗಳನ್ನು ದಾಖಲಿಸುವ ಹವ್ಯಾಸವು ಓದುಗರಿಗೂ ಪ್ರೇರಣೆ ನೀಡುತ್ತದೆ ಮತ್ತು ಲೇಖಕರ ವಿಶಿಷ್ಟ ದೃಷ್ಟಿಕೋನವು ಸಾಹಿತ್ಯಕವಾಗಿ ಹೊಸ ಹೊಸ ಕಾಣ್ಕೆಗಳನ್ನು ತೆರೆಯುತ್ತದೆ. ಈ ಸ್ವರೂಪದ ಬರಹಗಳನ್ನು ಒಳಗೊಂಡ ಸಂಕಲನವಿದು.
ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...
READ MORE