ವಿಶ್ವದ ಶ್ರೇಷ್ಠ ಸಿನೆಮಾಗಳ ಐತಿಹಾಸಿಕ ಬೆಳವಣಿಗೆ-ವಿಕಾಸಗಳು ಕುರಿತಂತೆ ಸಮೀಕ್ಷೆ ಹಾಗೂ ಉತ್ತಮವಾದ 71 ಚಲನಚಿತ್ರಗಳ ವಿಮರ್ಶೆ ಲೇಖನಗಳು ಒಳಗೊಂಡ ಕೃತಿ -ಸಿನೆಮಾದ ದೂರಚಿತ್ರ ಸಮೀಪಚಿತ್ರಗಳು. ಕೆ.ವಿ.ಸುಬ್ಬಣ್ಣ ಹಾಗೂ ಕೆ.ವಿ. ಅಕ್ಷರ ಜೊತೆಯಾಗಿ ಬರೆದ ಕೃತಿ ಇದು.
ಸಿನೆಮಾ ವಿಕಾಸದ ಇತಿಹಾಸವನ್ನು ಕಟ್ಟಿಕೊಡುವ ಉದ್ದೇಶದ ಈ ಕೃತಿಯು ಸಿನೆಮಾ ಅಭಿವ್ಯಕ್ತಿಯ ಸಿಂಹಾವಲೋಕನ ಕಾಣಬಹುದು. ಸಿನೆಮಾ ವಲಯಕ್ಕೆ ಸಂಬಂಧಿಸಿದ ಮಹತ್ವದ ಕೃತಿಗಳು ಹಾಗೂ ಗಣ್ಯ ವ್ಯಕ್ತಿಗಳ ಸಂಕ್ಷಿಪ್ತ ಪರಿಚಯವೂ ಇಲ್ಲಿದ್ದು, ವಿಶ್ವ ಪ್ರಸಿದ್ಧ 12 ಮೂಕಚಿತ್ರಗಳು, 48 ಶಬ್ದಚಿತ್ರಗಳು, 11 ಕಿರುಚಿತ್ರಗಳ ಸವಿವರ ಮಾಹಿತಿ ನೀಡಲಾಗಿದೆ. ಜೊತೆಗೆ, ವಿಶ್ವ ಸಿನೆಮಾ ಸಾಹಿತ್ಯಕ್ಕೆ ಸಂಬಂಧಿಸಿದ ಸಹಾಯಕ ಸಾಹಿತ್ಯದ ವಿವರಗಳು ಸಹ ಇಲ್ಲಿ ನೀಡಿದ್ದು, ಒಟ್ಟಿನಲ್ಲಿ ವಿಶ್ವ ಸಿನೆಮಾದ ಸಂಪೂರ್ಣ ಇತಿಹಾಸ-ವಿಕಾಸದ ಚಿತ್ರಣದೊಂದಿಗೆ ಉತ್ತಮ ಮಾಹಿತಿ ನೀಡುವ ಕೃತಿ ಇದು.
ಕೆ.ವಿ. ಸುಬ್ಬಣ್ಣ ಕನ್ನಡದ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ. ಎ. ಪದವಿ ಪಡೆದ ನಂತರ ಅವರು ಕೃಷಿಕಾಯಕ ಆರಂಭಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಅಚ್ಚರಿಪಡುವ ಹಾಗಿದೆ. ಕವಿ, ನಾಟಕಕಾರ, ಅನುವಾದಕರಾಗಿದ್ದ ಅವರು 'ಅಕ್ಷರ ಪ್ರಕಾಶನ' 'ನೀನಾಸಂ ರಂಗ ಚಟುವಟಿಕೆ'ಗಳನ್ನು ನಿರ್ವಹಿಸಿದವರು. ಭಾರತೀಯ ಸಂಸ್ಕೃತಿಗೆ ವಿಶಿಷ್ಟ ಮಾದರಿ ಎನ್ನುವ ಹಾಗೆ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಪುಟ್ಟಹಳ್ಳಿಯಲ್ಲಿ ನಡೆಸಿದ್ದು ಒಂದು ದಾಖಲೆ. ಮ್ಯಾಗ್ಸೆಸ್ಸೆ ಪ್ರಶಸ್ತಿಯಿಂದ ಹೆಗ್ಗೋಡು ಅಂತರರಾಷ್ಟ್ರೀಯ ನಕ್ಷೆಯಲ್ಲಿ ದಾಖಲಾಯಿತು. ಕೆ.ವಿ. ಸುಬ್ಬಣ್ಣ ಒಬ್ಬ ವ್ಯಕ್ತಿಯಲ್ಲ, ಮಹಾನ್ ಶಕ್ತಿ. ಅವರ ಬೆಳವಣಿಗೆ ವೈಯಕ್ತಿಕವಾದದ್ದಲ್ಲ, ಸಾಂಘಿಕವಾದದ್ದು. 'ಅಕ್ಷರ ಪ್ರಕಾಶನದ ಮೂಲಕ , 'ನೀನಾಸಂ' ಮೂಲಕ ಅನೇಕ ಪ್ರತಿಭೆಗಳನ್ನು ಅವರು ...
READ MORE