‘ಸಿನಿ ಮಾಯೆ’ ತಣಿಯದ ಕುತೂಹಲ ಬಿ.ಎಸ್. ವೆಂಕಟೇಶ ರಾವ್ ಅವರ ಕೃತಿ. ಕೃತಿಯ ಪರಿಚಯಿಸುತ್ತಾ ಇದು ಸಿನಿಮಾ ಮಾಡಲು ಮುಂದಾಗುವ ಉತ್ಸಾಹಿ ಜನಗಳಿಗಾಗಿ ಬರೆದ ಪುಸ್ತಕ ಎಂದಿದ್ದಾರೆ ವೆಂಕಟೇಶ ರಾವ್. ಈ ಕೃತಿಗೆ ಮುನ್ನುಡಿ ಬರೆದಿರುವ ಹಿರಿಯ ಪತ್ರಕರ್ತ, ಲೇಖಕ ಗಣೇಶ ಕಾಸರಗೋಡು ವೆಂಕಟೇಶ ರಾವ್ ಅದ್ಭುತ ಸಿನಿಮಾ ಪ್ರೇಮಿ. ಇದು ಹುಚ್ಚಲ್ಲ, ಪ್ರೀತಿ. ಸಿನಿಮಾ ಮೇಲಿನ ಗೌರವ, ಆಸಕ್ತಿ. 73 ವರ್ಷ ಮಾಗಿದ ವಯಸ್ಸಿನ ವೆಂಕಟೇಶ ರಾಯರು ಮಲೆನಾಡಿನವರು. ರೈಲ್ವೇ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದರು. ಆದರೂ ವೃಥಾ ಬುರುಡೆ ಬಿಟ್ಟುಕೊಂಡು ಮಾತಿನ ರೈಲು ಬಿಡದವರು. ಸಿನಿಮಾ ಇವರ ಉಸಿರು. ವೃತ್ತಿ ಬದುಕಿನಾದ್ಯಂತ ಉಸಿರು ಕಟ್ಟಿ ಸಿನಿಮಾಗಳ ಬಗೆಗಿನ ವಾಂಛೆಯನ್ನು ಬಿಗಿದಿಟ್ಟುಕೊಂಡವರು. ಒಮ್ಮೆ ವೃತ್ತಿಯಿಂದ ಯಾವಾಗ ನಿವೃತ್ತರಾದರೋ ಒಳ ತುಡಿತದ ಸಿನಿಮಾ ವಾಂಛೆ ಕಟ್ಟೆಯೊಡೆದು ಹೊರಬಂತು. ಹಾಗೇ ಸೇರಿಕೊಂಡದ್ದೇ ಸುಚಿತ್ರಾ ಫಿಲಂ ಸೊಸೈಟಿಯ ಸದಸ್ಯತ್ವದ ಯಾನ ಎಂದಿದ್ದಾರೆ. ಈ ಕೃತಿಯಲ್ಲಿ ಸಿನಿಮಾದ ಮುಹೂರ್ತದಿಂದ ಬಿಡುಗಡೆಯವರೆಗಿನ ವಿಚಾರಗಳು ಚರ್ಚೆಯಾಗಿವೆ.
ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲ್ಲೂಕಿನ ಬಾಸೂರು ಬಿ.ಎಸ್. ವೆಂಕಟೇಶ ರಾವ್ ಅವರ ಹುಟ್ಟೂರು. ಆದರೆ, ವಿದ್ಯಾಭ್ಯಾಸ ಮತ್ತು ಬಂದು ನೆಲೆಸಿದ್ದು ತರೀಕೆರೆಯಲ್ಲಿ. ನಂತರ ಶಿವಮೊಗ್ಗ, ಬೆಂಗಳೂರಿನಲ್ಲಿ ಕಾಲೇಜು, ರೈಲ್ವೆಯಲ್ಲಿ ಉದ್ಯೋಗ, ಬೆಂಗಳೂರಿನಲ್ಲಿ 33 ವರ್ಷಗಳ ಸೇವೆ ಮಾಡಿ ನಿವೃತ್ತಿ. ಓದುವಾಗಿನಿಂದಲೂ, ನಾಟಕದ ಗೀಳು, ನಂತರ ಆಕಾಶವಾಣಿ, ದೂರದರ್ಶನದಲ್ಲಿ ನಡೆಸಿದ ಅನೇಕ ಕಾರ್ಯಕ್ರಮಗಳು. ಅನೇಕ ವರ್ಷ ರೈಲ್ವೆಯಲ್ಲಿ ಕನ್ನಡ ಮತ್ತು ಹಿಂದೀ ನಾಟಕಗಳ ಪ್ರದರ್ಶನ, ಬಿ.ಎಸ್ಸಿ. ಮಾಡಿ ಕೆಲಸಕ್ಕೆ ಸೇರಿ, ನಂತರ ಬಿ.ಕಾಂ, ಎಂ.ಎ, ಪಿ.ಜಿ. ಡಿಪ್ಲೋಮಗಳ ವಿದ್ಯಾಸಾಧನೆ. ನಿವೃತ್ತಿಯ ನಂತರ, ಸುಚಿತ್ರ ಫಿಲಂ ಸೊಸೈಟಿ ಸದಸ್ಯತ್ವ, ಸಿನಿಮಾ ...
READ MORE