‘ಚೌಕಟ್ಟು’ ವಕೀಲೆ, ಲೇಖಕಿ ಅಂಜಲಿ ರಾಮಣ್ಣ ಅವರ ಲೇಖನಗಳ ಸಂಕಲನ. ಮಹಿಳೆಯ ಪರ ಇರುವ ಕಾನೂನುಗಳು, ವರದಕ್ಷಿಣೆ, ಅತ್ಯಾಚಾರ, ಕೌಟುಂಬಿಕ ದೌರ್ಜನ್ಯ ಹೀಗೆ ಹೆಣ್ಣು ಮಕ್ಕಳಿಗೆ ಸಂಬಂಧಪಟ್ಟ ಹಾಗೂ ಮಹಿಳಾಪರ ಧೋರಣೆಯುಳ್ಳ ಕಾನೂನುಗಳನ್ನು ಇಲ್ಲಿ ಪರಿಚಯಿಸಲಾಗಿದೆ.
ಸಂವಿಧಾನದಿಂದ ಹಿಡಿದು ಈ ಪ್ರಜಾಪ್ರಭುತ್ವದ ಎಲ್ಲ ವ್ಯವಸ್ಥೆಗೂ ಮಹಿಳಾ ಪರ ದೃಷ್ಟಿಕೋನವಿದೆ. ತಮ್ಮ ವಕೀಲ ವೃತ್ತಿಯ ಅನುಭವಗಳನ್ನೇ ಲೇಖಕರು ಕಾನೂನು ಹೇಳುವ ಕಥೆಯಾಗಿಸಿದ್ದಾರೆ. ಮಹಿಳೆಯರಿಗೆ, ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೂ ಕಾನೂನು ಅರಿವು ಪಡೆಯುವಲ್ಲಿ ಈ ಕೃತಿ ಉಪಯುಕ್ತ.
ವಕೀಲ ವೃತ್ತಿಯೊಂದಿಗೆ ಅಂಕಣಗಳನ್ನು ಬರೆಯುತ್ತಾ, ಕಾನೂನಿಗೆ ಸಂಬಂಧಿಸಿದ ಹಲವು ಕೃತಿಗಳನ್ನು ರಚಿಸಿರುವ ಅಂಜಲಿ ರಾಮಣ್ಣ ಅವರು ಅಸ್ತಿತ್ವ ಲೀಗಲ್ ಟ್ರಸ್ಟ್ ಸಂಸ್ಥಾಪಕರಾಗಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಎಂ.ಎ. ಹಾಗೂ ಮಾನವ ಹಕ್ಕುಗಳು ವಿಷಯದಡಿ ಸ್ನಾತಕೋತ್ತರ ಕಾನೂನು ಪದವೀಧರರಾಗಿರುವ ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಡಿಪ್ಲೊಮಾ, ಆಪ್ತ ಸಮಾಲೋಚನೆ ಮತ್ತು ಮಕ್ಕಳ ಮಾನವ ಹಕ್ಕುಗಳ ಕ್ಷೇತ್ರದಲ್ಲಿ ಅಧ್ಯಯನ ಮಾಡಿದ್ದಾರೆ. ಮಹಿಳೆ ಹಾಗೂ ಮಕ್ಕಳ ಹಕ್ಕುಗಳು, ಶಿಕ್ಷಣ, ಕಾನೂನು, ಆರ್ಥಿಕ ಪ್ರಗತಿಗೆ ನೆರವು ಮತ್ತು ಎಚ್.ಐ.ವಿ.ಪೀಡಿತ ಮಹಿಳೆಯರ ಸಮೂಹದಲ್ಲಿ ಜಾಗೃತಿ ಮೂಡಿಸಲು ಹೋರಾಡುತ್ತಿರುವ ಅಂಜಲಿ ರಾಮಣ್ಣ, ಕರ್ನಾಟಕ ಸರ್ಕಾರದ ಬಾಲಕಿಯರ ಕಲ್ಯಾಣ ಸಮಿತಿಯ ...
READ MORE