ಶಶಿಧರ ಹಾಲಾಡಿ ಅವರ ಅಂಕಣ ಬರಹಗಳ ಸಂಗ್ರಹ ‘ಚಿತ್ತ ಹರಿದತ್ತ’. ವಾರಕ್ಕೊಮ್ಮೆ ಬರೆದ ಅಂಕಣ ಬರಹಗಳ ಸಂಕಲನ ಇದು.. ಪ್ರತಿ ಗುರುವಾರ, ಏನು ಬರೆಯಲಿ ಎಂದು ಯೋಚಿಸುತ್ತಾ, ತಲೆ ಕೆರೆದುಕೊಂಡು, ಮನ ಎತ್ತ ಓಡುತ್ತದೋ, ಆ ವಿಷಯವನ್ನು ಆಯ್ದುಕೊಂಡು "ತೋಚಿದ್ದು ಗೀಚಿದಾಗ" ಈ ಸಂಕಲನ ರೂಪುಗೊಂಡಿದೆ! ಹೆಸರೇನಿಡುವುದು ಎಂಬ ಜಿಜ್ಞಾಸೆಗೆ ಹೊಳೆದ ಉತ್ತರ "ಚಿತ್ತ ಹರಿದತ್ತ"..!!. ಎಂಬುದು ಲೇಖಕನ ಮಾತು. ಮೈಕೆಲೆಂಜೆಲೋ ಸಾಧನೆಯ ಕುರಿತು ನಮ್ಮ ಮಕ್ಕಳಿಗೂ ಅರಿವಿದೆ. ಆದರೆ ಸೋಮನಾಥಪುರ ದೇವಾಲಯ ನಿರ್ಮಿಸಿ, ಹೊಯ್ಸಳರ ಕಾಲದ ಇನ್ನೂ ಹಲವು ವಾಸ್ತು ನಿರ್ಮಿತಿಗಳ ಶಿಲ್ಪಿಯಾಗಿ ಕೆಲಸ ಮಾಡಿದ ಹಿರಿಯ ಕಲಾವಿದ ಮಲ್ಲಿತದ್ದನ ಕುರಿತು ನಮ್ಮ ಮಕ್ಕಳಿಗೆ ಹೆಚ್ಚು ಗೊತ್ತಿಲ್ಲ. ಇದೇಕೆ ಒ ಎಂದರೆ, ಇಟೆಲಿಯ ಕಲಾಕಾರನ ವಿವರವಾದ ಮಾಹಿತಿಯನ್ನು ನಮ್ಮ ಮಕ್ಕಳಿಗೆ ಒದಗಿಸಿಕೊಟ್ಟಿರುವ ನಾವು, ಮಲ್ಲಿತಮ್ಮನ ಕುರಿತು ನಮ್ಮ ಮಕ್ಕಳಿಗೆ ಹೆಚ್ಚು ಗೊತ್ತಿಲ್ಲ. ಇದೇಕೆ ಹೀಗೆ ಎಂದರೆ, ಇಟೆಲಿಯ ಕಲಾಕಾರನ ವಿವಿರವಾದ ಮಾಹಿತಿಯನ್ನು ನಮ್ಮ ಮಕ್ಕಳಿಗೆ ಒದಿಗಿಸಿಕೊಟ್ಟಿರುವ ನಾವು ಮಲ್ಲಿತಮ್ಮನ ಮಾಹಿತಿ ಒದಗಿಸಿಕೊಡಲೇ ಇಲ್ಲ!. ಅಂದ ಹಾಗೆ ಹಂಪೆಯ ಕಲ್ಲಿನ ರಥವನ್ನು ನಿರ್ಮಿಸಿದವರು ಯಾರು? ಅದರ ಮೇಲೆ ಇದ್ದ ಗೋಪುರವನ್ನು 1940ರ ದಶಕದಲ್ಲಿ ಬ್ರಿಟಿಷರು ಏಕೆ ಬೀಳಿಸಿದರು ? ಹಂಪೆಯ ಸಂಗೀತ ನುಡಿಸುವ ಸ್ತಂಭಗಳನ್ನು ವಿನ್ಯಾಸಗೊಳಿಸಿದ ವಾಸ್ತುತಜ್ಞನ ಹೆಸರೇನು? ಅದೇಕೆ ಆತ ಅಜ್ಞಾತ ಶಿಲ್ಪಿ ಎನಿಸಬೇಕು? ಈ ವಿವರಗಳು ನಮ್ಮ ಜನಸಾಮಾನ್ಯರಿಗೆ ಏಕೆ ಗೊತ್ತಿಲ್ಲ ? ಈ ಕುರಿತು ಸಹ ಪುಸ್ತಕದಲ್ಲಿ ಲೇಖನಗಳಿವೆ. ವಿವಿಧ ಸಂದರ್ಭಗಳಲ್ಲಿಅಂಕಣ ಸ್ವರೂಪದಲ್ಲಿ ಶಶಿಧರ ಹಾಲಾಡಿ ಅವರು ಬರೆದ ಬರೆಹಗಳ ಸಂಕಲನವಿದು. ಇತಿಹಾಸ, ಅನುಭವ, ಪರಿಸರ,ಸಮಕಾಲೀನ ವಿಷಯಗಳನ್ನು ಚರ್ಚಿಸುವ ಇವರ ಬರಹಗಳು ಸಾಕಷ್ಟು ಓದುಗರ ಮೆಚ್ಚುಗೆಗಳಿಸಿದೆ. ಎಂಬದು ಕರತಿ ಬೆನ್ನುಡಿಯ ಮಾತುಗಳು..
ಶಶಿಧರ ಹಾಲಾಡಿ ಅವರು ಲೇಖಕರು. ವಿಶ್ವವಾಣಿ ಪತ್ರಿಕೆಯ ಪುರವಣಿ ವಿಭಾಗದ ಮುಖ್ಯ ಉಪಸಂಪಾದಕರು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯವರು. ಮೈಸೂರು ವಿ.ವಿ.ಯಿಂದ ಎಂ.ಎ. (ಕನ್ನಡ) ಚಿನ್ನದ ಪದಕದೊಂದಿಗೆ ಮೊದಲ ರ‍್ಯಾಂಕ್ ಪಡೆದಿದ್ದು, ಸಣ್ಣ ಕಥೆ, ಪ್ರವಾಸ ಕಥನ, ಕವನ, ನುಡಿಚಿತ್ರ, ಅಂಕಣ ಬರಹ ಮತ್ತು ಲೇಖನಗಳನ್ನು ಬರೆದಿದ್ದಾರೆ. ಶಿವಮೊಗ್ಗದ ನಾವಿಕ ದಿನಪತ್ರಿಕೆಯಲ್ಲಿ 12 ವರ್ಷ ಕಾಲ ಅಂಕಣಕಾರರು. ಪರಿಸರ , ಪಕ್ಷಿವೀಕ್ಷಣೆ, ಚಾರಣ (ಹಿಮಾಲಯದಲ್ಲಿ ಚಾರಣ ನಡೆಸಿದ ಅನುಭವ ಛಾಯಾಗ್ರಹಣ (ರಾಜ್ಯ ಮಟ್ಟದ ಲ್ಯಾಂಡ್‍ಸ್ಕೇಪ್ ಛಾಯಾಚಿತ್ರ ಸ್ಪರ್ಧೆಯಲ್ಲಿ ಮೂರನೆಯ ಬಹುಮಾನ), ಅಂಕಣ ಬರಹ, ಸಣ್ಣ ಕಥೆ ರಚನೆ ಇವರ ಆಸಕ್ತಿಯ ಕ್ಷೇತ್ರಗಳು. ಕೃತಿಗಳು: ನ್ಯಾಯಾಶಾಸ್ತ್ರಜ್ಞ ಸರ್ ಬೆನಗಲ್ ನರಸಿಂಗ ರಾವ್ ಕುರಿತು ಜೀವನ ...
READ MORE