ಸಿನಿಮಾ ಎನ್ನುವುದು ಕಲೆ, ಉದ್ಯಮ, ಮನರಂಜನೆ. ಇವೆಲ್ಲಕ್ಕಿಂತ ಮೀರಿದ ಒಂದು ತುಡಿತ ಎನ್ನಬಹುದು. ಕಥೆ ಹೇಳುವ, ಕೇಳುವ ತೋರಿಸುವ ಆ ಹುರುಪು ಉತ್ಸಾಹಕ್ಕೆ ಬೆಲೆ ಕಟ್ಟಲು ಸಾಧ್ಯವೇ..? ಹಾಗೆ ನೋಡಿದರೆ ನನಗೆ ನನ್ನ ಸಂಸ್ಕೃತಿ ಕಲಿಸಿದರಲ್ಲಿ ಸಿನಿಮಾದ ಪಾಲು ಇದೆ. ಒಂದು ಬೇರೆಯದೇ ಆದ ಪ್ರಪಂಚವನ್ನು ಸೃಷ್ಟಿಸುವ ತಾಕತ್ತು ಸಶಕ್ತವಾಗಿರುವ ಕ್ಷೇತ್ರವಿದು. ನನ್ನೆಲ್ಲ ವಿದ್ಯಾಭ್ಯಾಸ ಮುಗಿದ ಮೇಲೆ ನನ್ನ ಮುಂದಿದ್ದ ಪ್ರಶ್ನೆ? ಬದುಕುವುದಕ್ಕಾಗಿ ಕೆಲಸ ಮಾಡುವುದಾ..? ಅಥವಾ ಕನಸನ್ನು ಈಡೇರಿಸಿಕೊಳ್ಳುವುದಕ್ಕಾಗಿ ಬದುಕುವುದಾ..? ಅಂತಿಮ ಆಯ್ಕೆ ಸಿನಿಮಾವೇ..? ಇವತ್ತಿಗೂ ತೆರೆಯ ಮೇಲೆ ಕಥೆ ನಿರೂಪಿಸುವ ಸಂಭ್ರಮಕ್ಕೆ ಮಿಗಿಲಿಲ್ಲ ಎನಿಸುತ್ತದೆ. ಜಾಗತಿಕ, ಭಾರತೀಯ ಸಿನಿಮಾಗಳು ಕಲಿಸಿದ್ದು ಬಹಳ. ಸಿನಿಮಾ ನೋಡುತ್ತಾ ನೋಡುತ್ತಾ ನನ್ನನ್ನೇ ಮರೆತಿದ್ದೇನೆ. ನನ್ನ ಎಷ್ಟೋ ಮನಸ್ಸಿನ ಬೇಸರಗಳನ್ನು ಮರೆತಿದ್ದೇನೆ. ನಾನು ನೋಡಿ ಮೆಚ್ಚಿದ, ಖುಷಿ ಪಟ್ಟ, ಅಚ್ಚರಿಗೊಂಡ ಸಿನಿಮಾ ಬಗೆಗೆ, ಆಯಾ ಸಿನಿಮಾಕರ್ಮಿಗಳ ಬಗೆಗೆ ಸಿನಿ ಓದುಗರಿಗೆ ತಿಳಿಸುವ ಪ್ರಯತ್ನವಿದು.
ರವೀಂದ್ರ ವೆಂಶಿ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ. ಅವರು `ವರ್ಣಮಯ', `ನೈಟ್ ಕರ್ಫ್ಯೂ' ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ‘ಚಿತ್ರ ವಿಚಿತ್ರ’ ಅವರ ಮೊದಲ ಕೃತಿಯಾಗಿದೆ. ...
READ MORE