ಚಿಂತನೆ ವನ

Author : ಶ್ರೀನಿವಾಸ್ ಸಿರನೂರಕರ್

Pages 112

₹ 100.00




Year of Publication: 2021
Published by: ಸಿದ್ದಲಿಂಗೇಶ್ವರ ಪ್ರಕಾಶನ
Address: ಕಲ್ಬುರ್ಗಿ

Synopsys

ಡಾ. ಶ್ರೀನಿವಾಸ ಸಿರನೂರಕರ್ ಅವರ "ಚಿಂತನೆ ವನ "ಕೃತಿಯನ್ನು ಅವಲೋಕಿಸಿದಾಗ ಈ ಕೃತಿಯಲ್ಲಿ ವಿಶ್ವ ಆರೋಗ್ಯ ದಿನ,ಅವಿಭಕ್ತ ಕುಟುಂಬ, ಧರ್ಮಗ್ರಂಥಗಳು, ತ್ರಿವರ್ಗ ಸಿದ್ಧಾಂತ, ಸೃಜನಶೀಲತೆ, ಸರಳತೆ,ಸಂಶೋಧನೆ, ಗ್ರಾಹಕ, ಮಾಧ್ಯಮ ಸ್ವತಂತ್ರ,ಉತ್ತಮ ಪ್ರಭುತ್ವ,ಶ್ರೀ ವಿಜ್ಞಾನೇಶ್ವರ, ಸೇರಿದಂತೆ 30 ಕ್ಕೂ ಹೆಚ್ಚು ಮೌಲಿಕ ಚಿಂತನಗಳಿವೆ . ಈ ಚಿಂತನೆಗಳು ಏಕಕಾಲದಲ್ಲಿ ಬರೆದವುಗಳಲ್ಲ ಏಕಮುಖವಾಗಿ ಮೂಡಿಬಂದವು ಗಳಲ್ಲಿ ವೈವಿಧ್ಯತೆಗಳ ವಿಶಿಷ್ಟವಾಗಿದೆ. ಹದಿನೈದು ವರ್ಷಗಳ ಅವಧಿಯಲ್ಲಿ ವಿವಿಧ ಸಂದರ್ಭಗಳಲ್ಲಿ ಬರೆದ ಸಮಯ ಸಂದರ್ಭಗಳಲ್ಲಿ ಹುಟ್ಟಿದ ನವ ಶಿಶುವಿನಂತಿವೆ.ವೈಚಾರಿಕತೆ ವಿಮರ್ಶೆಯ ಮೊನಚಾಗಿ ಮೂಡಿಬಂದಿದೆ . ಕಲ್ಬುರ್ಗಿಯ ಸಿದ್ದಲಿಂಗೇಶ್ವರ ಪ್ರಕಾಶನದಿಂದ 2021ರಲ್ಲಿ ಪ್ರಕಟಗೊಂಡ ಈ ಕೃತಿಯಲ್ಲಿ 112 ಪುಟಗಳಿದ್ದು 100 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.

About the Author

ಶ್ರೀನಿವಾಸ್ ಸಿರನೂರಕರ್

ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ್‌ ಅವರು ಸದ್ಯ ಕಲಬುರಗಿ ನಿವಾಸಿ ಆಗಿದ್ದಾರೆ. ಇಂಡಿಯನ್‌ ಎಕ್ಸ್‌ಪ್ರೆಸ್‌, ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿರುವ ಶ್ರೀನಿವಾಸ ಅವರು ಸದ್ಯ ನಿವೃತ್ತರಾಗಿದ್ದಾರೆ. ಹಿಂದೂ ಕಾನೂನು ಗ್ರಂಥ ರಚಿಸಿದ ವಿಜ್ಞಾನೇಶ್ವರನ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಶ್ರೀನಿವಾಸ ಅವರು ಆ ಕುರಿತು ಎರಡು ಪುಸ್ತಕ ಪ್ರಕಟಿಸಿದ್ದಾರೆ. ಹೈದರಾಬಾದ್‌ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಲೇಖನ ರಚಿಸಿದ್ದಾರೆ. ...

READ MORE

Related Books