ಟೈಗರ್ ಎಂದೇ ಖ್ಯಾತಿಯ ಪೊಲೀಸ್ ಅಧಿಕಾರಿ ಬಿ.ಬಿ. ಅಶೋಕ ಕುಮಾರ್ (ನಿವೃತ್ತ ಎಸಿಪಿ) ಅವರ ಕೃತಿ-ಬುಲೆಟ್ ಸವಾರಿ. ಪೊಲೀಸ್ ವೃತ್ತಾಂತಗಳನ್ನು ಒಳಗೊಂಡಿರುವ ಲೇಖಕರ ಅನುಭವ ಕಥನವೂ ಹೌದು. ‘ಪುಸ್ತಕದ ಕಾನೂನಿನ ಚೌಕಟ್ಟಿನಲ್ಲಿ ಕರ್ತವ್ಯ ಮಾಡುವುದರ ಜತೆಗೆ ಹೃದಯಕ್ಕೆ ಸಂಬಂಧಿಸಿದ ಕಾನೂನನ್ನು ಕಲಿತೆ’ ಎಂಬ ತಮ್ಮ ಜೀವನ ತತ್ವದಡಿ ವ್ಯಕ್ತಿಗತ ಬದುಕು ಹಾಗೂ ವೃತ್ತಿಯನ್ನು ನಿಭಾಯಿಸಿದ ಲೇಖಕರು, ಹಲವು ಬಾರಿ ರಿಸ್ಕ್ ತೆಗೆದುಕೊಂಡೆ ಎಂಬುದನ್ನು ವಿವರಿಸುತ್ತಾರೆ. ಕಾಡುಗಳ್ಳ ವೀರಪ್ಪನ್ ಹಿಡಿಯುವ ಕಾರ್ಯಾಚರಣೆಯಲ್ಲೂ ಸಾಹಸ ಮೆರೆದಿದ್ದರು. ರಕ್ತಪಾತದಂತಹ ಘಟನೆಗಳ ಮಧ್ಯೆಯೂ ಮನ ಮಿಡಿಯುವ ಸನ್ನಿವೇಶಗಳನ್ನು ದಾಖಲಿಸಿದ್ದು ಈ ಕೃತಿಯ ಹೆಚ್ಚುಗಾರಿಕೆ.
ಕೃತಿಯಲ್ಲಿ ರಾಜಧಾನಿಯ ನಿದ್ದೆಗೆಡಿಸಿದ ಸರಗಳ್ಳರು, ಎನ್ ಕೌಂಟರ್ ಅಂದ್ರೆ ಹುಡುಗಾಟವಲ್ಲ, ನೆಮ್ಮದಿ ಭಗ್ನಗೊಳಿಸಿದ ನಗ್ನಚಿತ್ರ, ನನ್ನ ವೃತ್ತಿ ಬದುಕು ಉಳಿಸಿದ ಝಿರಾಕ್ಸ್ ಕಾಪಿ. ನನ್ನ ಕೊಲ್ಲಲೆತ್ನಿಸಿದವನು ಸತ್ಕರಿಸಿದ. ವಿನಮ್ರ ನೌಕರನ ಕೋಟಿ ಅಕ್ರಮ, ಜಗ್ಗೇಶ ಮೇಲೆ ಬೆತ್ತ ಪ್ರಯೋಗ, ಕೊತ್ವಾಲನ ಹಿಡಿಯಲು ಹೋಗಿ, ಡ್ರಗ್ಸ್ ಹಿಡಿದಿದ್ದಕ್ಕೆ 5 ರೂ. ಬಹುಮಾನ, ಕೋಮು ಗಲಭೆಗಳ ಕ್ರಾಸ್ ಫೈರ್ ನಡುವೆ, ಡೆಡ್ಲಿ ಸೋಮ: ಕುಖ್ಯಾತ ರೌಡಿಯಾದ ಪ್ರತಿಭಾವಂತ ವಿದ್ಯಾರ್ಥಿ, ತುತ್ತು ಉಣ್ಣುತ್ತಿದ್ದ ಕಂದಮ್ಮನ ಅಪಹರಿಸಿ ಕೊಂದರು, ಮಗುವಿನ ಅಪಹರಣಕಾರರನ್ನು ಹಿಡಿಯಲು ಸ್ತ್ರೀ ವೇಷ, ಇನ್ಸ್ ಪೆಕ್ಟರ್ ಹುದ್ದೆಗೆ ಕುತ್ತು ತರಲಿರುವ ಕಾಂಟೆಸ್ಸಾ ಕಾರು..! ಹೀಗೆ ಒಟ್ಟು 51 ಅಧ್ಯಾಯಗಳ ಮೂಲಕ ತಮ್ಮ ಇಡೀ ವೃತ್ತಿ ಬದುಕಿನ ಅಚ್ಚರಿಯ, ಕುತೂಹಲದ ಸನ್ನಿವೇಶಗಳನ್ನು ದಾಖಲಿಸಿದ್ದಾರೆ. ಕೃತಿಗೆ ಮುನ್ನುಡಿ ಬರೆದ ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ‘ಸಾಹಸಗಾಥೆಯ ಜತೆಯಲ್ಲಿಯೇ ಚರಿತ್ರೆಯೂ ಬಿಚ್ಚಿಕೊಳ್ಳುವುದು ‘ಬುಲೆಟ್ ಸವಾರಿ’ಯ ವಿಶೇಷ. ಹುಸಿ ಗಾಂಭೀರ್ಯದ ಪೊಲೀಸ್ ಪರಿವೇಷ ತೊರೆದು ವೈನೋದಿಕ ನಿರೂಪಣೆಯಿಂದ ಇಲ್ಲಿಯ ಬರಹಗಳು ಆಪ್ತಗೊಳಿಸುತ್ತವೆ. ಜೊತೆಗೆ, ಅಂತಃಕರಣದ ಮನ ಮಿಡಿಯುವ ಬರಹಗಳೂ ಇವೆ’ ಎಂದು ಪ್ರಶಂಸಿಸಿದ್ದಾರೆ. 2015 ರಲ್ಲಿ ಮೊದಲ ಆವೃತ್ತಿ ಪ್ರಕಟವಾಗಿ ಈವರೆಗೆ ಈ ಕೃತಿಯು 6ನೇ ಮುದ್ರಣ ಕಂಡಿದೆ.
.ಸಹಾಯಕ ಪೊಲೀಸ್ ಅಧಿಕಾರಿಯಾಗಿದ್ದ ಬಿ.ಬಿ. ಅಶೋಕಕುಮಾರ ಅವರು ಟೈಗರ್ ಅಶೋಕಕುಮಾರ್ ಎಂದೇ ಖ್ಯಾತಿ. ಬೆಂಗಳೂರಿನಲ್ಲಿ (1983) ಸರಗಳ್ಳರ ಹಾವಳಿ ಮಟ್ಟಹಾಕಲು ರಚಿಸಿದ್ದ ಆಪರೇಷನ್ ಟೈಗರ್’ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಜನರು ಅವರಿಗೆ ನೀಡಿದ ಬಿರುದು -ಟೈಗರ್. ವೃತ್ತಿಯಲ್ಲಿಯ ಈ ಸಾಹಸ-ಧೈರ್ಯದ ಹಿನ್ನೆಲೆಯಲ್ಲಿ ಹಲವು ಚಲನಚಿತ್ರಗಳು ತೆರೆ ಕಂಡವು. ಆ ಪೈಕಿ, ದೇವರಾಜ್ ಅಭಿನಯದ ಸರ್ಕಲ್ ಇನ್ಸಪೆಕ್ಟರ್, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಬಾ ನಲ್ಲೆ ಮಧುಚಂದ್ರಕೆ,ಇತ್ತೀಚಿನ ಮೈನಾ, ಹೀಗೆ ಹಲವಾರು.. ಕಾರ್ಯದಕ್ಷತೆಗೆ ಹೆಸರಾಗಿದ್ದ ಅಶೋಕಕುಮಾರ್, ನರಹಂತಕ ವೀರಪ್ಪನ್ ಹಿಡಿಯಲು ವಿಶೇಷ ತನಿಖಾ ದಳದೊಂದಿಗೆ ಮಲೆ ಮಾದೇಶ್ವರ ಬೆಟ್ಟಕ್ಕೆ ಹೋಗುವ ಮುನ್ನ ಪತ್ನಿಗೆ ...
READ MORE