‘ಬುದ್ಧಾನುಸಾಸನಂ’ ಹಿರಿಯ ಕವಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅವರ ಲೇಖನಗಳ ಸಂಕಲನ. ಈ ಕೃತಿಯ ಪ್ರಥಮ ಆಶ್ವಾಸದಲ್ಲಿ ಬುದ್ಧ ಚಳವಳಿ, ಬೌದ್ಧಧರ್ಮ ಮತ್ತು ದಲಿತರು, ಬುದ್ಧಾನುಸಾಸನಂ, ಬೌದ್ಧ ಸಂಘ, ಅನುಭವ ಮಂಟಪ ಹಾಗೂ ಸಂಸತ್ತುಗಳ ಪರಿಕಲ್ಪನೆ ಮತ್ತು ಕೊಡುಗೆ, ಪುಣ್ಯನದಿ, ಕುಮಾರನ ಪ್ರಶ್ನೆ, ಧಮ್ಮಪದ, ಲೋಕಗುರು ಬುದ್ಧ, ತಾಯ್ನುಡಿ ಮತ್ತು ಭಾವ ಸಂಸರ್ಗ ಹಾಗೂ ದ್ವಿತೀಯ ಆಶ್ವಾಸದಲ್ಲಿ ಜ್ಞಾನೋದಯದ ಮಾರ್ಗದಲ್ಲಿ, ಧಮ್ಮಚಕ್ಕ ಪವತ್ತನ, ಕಠಿನ ಚೀವರ ದಾನ, ಆಮಗಂಧ ಸುತ್ತ, ಅನಾತ್ಮವಾದ, ಪಂಚ ಧಮ್ಮ ನಿಯಮಗಳು, ಮೂರನೆಯ ಬೌದ್ಧ ಸಂಗಾಯನ, ತ್ರಿರತ್ನಗಳ ಸಾರರೂಪ, ಕುರುಡ ಮತ್ತು ಲಾಟೀನು, ಮೈತ್ರಿ ಧ್ಯಾನ, ಬುದ್ಧನ ಋಜುಲೋಕ, ಸಮಷ್ಠಿ ಪ್ರಜ್ಞೆಯ ಪತನ, ಬ್ರಹ್ಮ ವಿಹಾರ, ಯೋಗ ದರ್ಶನ, ಧ್ಯಾನ ಕುರಿತು, ಬುದ್ಧ ಮತ್ತು ಭಿಕಾರಿ, ಜಾತಿಯೆಂಬುದು ವಿಷದ ಬಾಣ, ಬಹುತ್ವದ ಭಾರತ, ಸ್ವರ್ಗ ಮತ್ತು ನರಕ, ಮನಸ್ಸು ಮತ್ತು ಸಂಸ್ಕಾರ, ಪುಟ್ಟ ಗಿಳಿಯ ಸಾಹಸ, ಹಾಗೂ ಜಲ ವಿವಾದ ಎಂಬ 31 ಲೇಖನಗಳು ಸಂಕಲನಗೊಂಡಿವೆ.
ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸತ್ವಪೂರ್ಣ ದನಿಯಾಗಿರುವ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಮೂಲತಃ ಗಡಿನಾಡಾದ ಚಾಮರಾಜನಗರದವರು. ಎಂ.ಕಾಂ. ಎಂ.ಎ(ಕನ್ನಡ), ಡಿ.ಲಿಟ್. ಪದವೀಧರರಾದ ಅವರು ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರಲ್ಲದೆ, ನಿರ್ದೇಶಕರು(ಹಣಕಾಸು) ಹಾಗೂ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಮಾರ್ಚ್ 2012ರಲ್ಲಿ ನಿವೃತ್ತಿ ಹೊಂದಿದ್ದಾರೆ. ಜೊತೆಗೆ ಏಪ್ರಿಲ್ 2015 ರಿಂದ ಮಾರ್ಚ್ 2017 ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2016-17 ರ ಸಾಲಿಗೆ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ...
READ MORE‘ಬುದ್ಧಾನುಸಾಸನಂ’ ಕೃತಿಯ ವಿಮರ್ಶೆ
ಈ ಪುಸ್ತಕದಲ್ಲಿ ಒಟ್ಟು 31 ಅಧ್ಯಾಯಗಳಿದ್ದು - ಬುದ್ಧ ಚಳವಳಿಯಿಂದ ಹಿಡಿದು ಬೌದ್ಧ ಸಂಘ, ಅನುಭವ ಮಂಟಪ, ಹಾಗೂ ಸಂಸತ್ತುಗಳ ಪರಿಕಲ್ಪನೆ ಮತ್ತು ಕೊಡುಗೆಗಳ ಗೆ ಬಗ್ಗೆ ಲೇಖಕರು ಬರೆಯುತ್ತಾ ಹೋಗಿದ್ದಾರೆ. ಕುಮಾರನ ಪ್ರಶ್ನೆ ಲೇಖನವೂ ಬಹಳ ಅರ್ಥಪೂರ್ಣವಾಗಿ ಮೂಡಿಬಂದಿದೆ. ಬೌದ್ಧ ಧರ್ಮ ಎನ್ನುವುದು ವಿಸ್ಮಯ ಲೋಕ. ಈ ಲೋಕದ ಒಳಹೊಕ್ಕಿರುವ ಮೂಡ್ನಾಕೂಡು ಕೆ. ಅವರು ತಥಾಗತನ ಪ್ರಪಂಚವನ್ನೇ ಇಲ್ಲಿ ತೆರೆದಿಟ್ಟಿದ್ದಾರೆ. ಬೌದ್ಧ ಧರ್ಮದ ಬಗ್ಗೆ ತಿಳಿಯಬೇಕೆನ್ನುವವರಿಗೆ ಪ್ರಾಥಮಿಕ ಜ್ಞಾನವನ್ನು ಈ ಪುಸ್ತಕ ನೀಡುತ್ತದೆ.
(ಕೃಪೆ ; ಹೊಸ ಪುಸ್ತಕ, ಸಮಾಜಮುಖಿ)
--