’ಭೃಂಗಯಾ” ಲೇಖನಗಳ ಸಂಗ್ರಹ. ಈ ಕೃತಿಯಲ್ಲಿ ಮೂರು ಭಾಗಗಳಿವೆ. ವಿಮರ್ಶೆ, ವ್ಯಕ್ತಿಚಿತ್ರಗಳು- ಸಂದರ್ಶನಗಳು ಹಾಗೂ ಕೃತಿಗಳ ಅವಲೋಕನ. ಮೊದಲ ಭಾಗ ಸ್ವತಂತ್ರ ಲೇಖನಗಳು, ಹೆಸರೇ ಸೂಚಿಸುವಂತೆ ತಾವಾಗಿ ಆಯ್ಕೆ ಮಾಡಿಕೊಂಡು ರಚಿಸಿರುವ ಆಯಾ ಕೃತಿಗಳ ವಿಮರ್ಶಾ ಲೇಖನಗಳಿವೆ.
ಎರಡನೆಯ ಭಾಗದಲ್ಲಿಗಣ್ಯವ್ಯಕ್ತಿಗಳ ಪರಿಚಯ ಹಾಗೂ ಅವರೊಡನೆ ನಡೆಸಿದ ಮಾತುಕತೆ; ಮೂರನೆಯ ಭಾಗ; ವಿವಿಧ ಲೇಖಕರ ಬಿಡಿ ಕೃತಿಗಳ ಅವಲೋಕನ. ಈ ಭಾಗದಲ್ಲಿ ಸೃಜನಶೀಲ ಕೃತಿಗಳು, ವೈಚಾರಿಕ ಬರೆಹಗಳು, ಧರ್ಮಶಾಸ್ತ್ರಗಳ ಸ್ತ್ರೀವಾದಿ ಪ್ರತಿಕ್ರಿಯೆ, ಕಾನೂನು ಮುಂತಾದ ವಿಷಯಗಳಿಗೆ ಸಂಬಂಧಿಸಿದ ಲೇಖನಗಳಿವೆ.
ವಿಜಯಾ ಸುಬ್ಬರಾಜ್ ಅವರು ಬೆಂಗಳೂರಿನಲ್ಲಿ 1947 ಏಪ್ರಿಲ್ 20ರಂದು ಜನಿಸಿದರು. ತಾಯಿ ಲಕ್ಷ್ಮಿ, ತಂದೆ ಸೀತಾರಾಂ. ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರದ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ಬಿಯುಸಿಟಿಎ ನ ಉಪಾಧ್ಯಕ್ಷೆ, ಕನ್ನಡ ನುಡಿ ನಿಯತಕಾಲಿಕೆಯ ಸಂಪಾದಕಿ, ನಂಜನಗೂಡು ತಿರುಮಲಾಂಬ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ವಿಜಯಾ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ...
READ MORE