ಬೊಂಬೆ ಮಿಠಾಯಿ

Author : ವಿನಾಯಕ ಸುಬ್ರಾಯ ನಾಯ್ಕ

Pages 167

₹ 150.00




Year of Publication: 2021
Published by: ವಸಿಷ್ಠ ಪ್ರಕಾಶನ
Address: ವಿನಾಯಕ ನಿಲಯ, ಫಾರೆಸ್ಟ್ ಕಾಲೋನಿ, 8ನೇ ಅಡ್ಡರಸ್ತೆ, ಪ್ರಭಾತನಗರ, ಹೊನ್ನಾವರ, ಜಿಲ್ಲೆ: ಉತ್ತರ ಕನ್ನಡ. 
Phone: 9902894222

Synopsys

 ಕವಿ ವಿನಾಯಕ ಸುಬ್ರಾಯ ನಾಯ್ಕ ಅವರು ‘ಬೊಂಬೆ ಮಿಠಾಯಿ’ ಶೀರ್ಷಿಕೆಯಡಿ ಸಮಗ್ರ ಲೇಖನಗಳ ಸಂಕಲನ ಪ್ರಕಟಿಸಿದ್ದಾರೆ. 

ಲೇಖಕರು ತಮ್ಮ ಪ್ರಸ್ತಾವನೆಯ ಮಾತುಗಳಲ್ಲಿ ‘ಹತ್ತು ವಿಷಯವನ್ನು ಒಳಗೊಂಡ ನಮ್ಮದೇ ವ್ಯಕ್ತಿತ್ವದ ಕೈ ಗನ್ನಡಿ. ಕನ್ನಡಿಯ ಹೊರತಾಗಿ ಬೇರೆಲ್ಲಾದರೂ ನಮ್ಮನ್ನು ನಾವು ಕಾಣಬಯಸಿದಾಗ ಒಮ್ಮೆ ಇದನ್ನು ಓದಿ. ಬಾಲ್ಯದಲ್ಲಿ ನಾವು ಆಡಿದ ಆಟ ಚಿನ್ನಿದಾಂಡಿನ್ನಿಂದ,ಮರಕೋತಿಯ ವರೆಗೂ ಎಲ್ಲವೂ ಮತ್ತೊಮ್ಮೆ ನೆನಪಿಸಿ ನಮ್ಮ ಬಾಲ್ಯ ವನ್ನು ಮತ್ತೆ ಮರುಕಳಿಸುತ್ತದೆ. ಚಿಂತೆ.ಎಳೆಯರಿಂದ ಹಳೆಯರವರೆಗೆ, ಸಾಫ್ಟ್ವೇರ್ ಸಂತ್ರಸ್ತರು,ಜಾಲತಾಣದ ಜಾಲಿಗರು, ಸಂಬಂಧ, ಆಶಾವಾದದ ಬಿಸಿಲುಗುದುರೆ, ಶಿಕ್ಷಣದ ಮಹತ್ವ ಮತ್ತು ಅನಿವಾರ್ಯತೆ, ಬೊಂಬೆಮಿಠಾಯಿ ಹೀಗೆ ವಿವಿಧ ಶೀರ್ಷಿಕೆಗಳಡಿ ವಿಚಾರಗಳನ್ನು ವ್ಯಕ್ತಪಡಿಸಿದ ಲೇಖನಗಳನ್ನು ಈ ಕೃತಿಯು ಒಳಗೊಂಡಿದೆ’ ಎಂದು ಹೇಳಿದ್ದಾರೆ. 

About the Author

ವಿನಾಯಕ ಸುಬ್ರಾಯ ನಾಯ್ಕ
(02 December 1983)

ಲೇಖಕ ವಿನಾಯಕ ಸುಬ್ರಾಯ ನಾಯ್ಕ ಅವರು ಹೊನ್ನಾವರದ ಪ್ರಭಾತ್ ನಗರದ ನಿವಾಸಿ. 02-12-1983 ರಂದು ಜನಿಸಿದ್ದಾರೆ. ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಖರ್ವಾದಲ್ಲಿ ಪ್ರಯೋಗಶಾಲಾ ತoತ್ರಜ್ಞರಾಗಿದ್ದಾರೆ.  ಕೃತಿಗಳು: 'ಕಾಲಮಾನ' (2017) ಕವನ ಸಂಕಲನ, 2019 ರಲ್ಲಿ , 'ನಗೆಯ ಹೂ ಚೆಲ್ಲಿ'ಎಂಬ ಕವನ ಸಂಕಲನ, 2021 ರಲ್ಲಿ 'ಬೊಂಬೆ ಮಿಠಾಯಿ'  ಲೇಖನಗಳ ಸಂಕಲನ,  ...

READ MORE

Related Books