ಹೊಸ ಅಲೆಯ ಸಿನಿಮಾ ಕಥನಗಳ ಮೇಲಿನ ಲೇಖnಗಳ ಸಂಗ್ರಹ ಕೃತಿ ’ ಬಿಸಿಲು ಬಯಲು ನೆಳಲು’. ಪಥೇರ ಪಾಂಚಾಲಿ ಸಿನಿಮಾದಲ್ಲಿ ನಿರ್ದೇಶಕ ಸತ್ಯಜೀತ್ ರಾಯ್ ಅವರು ಉರುಳುತ್ತಿರುವ ತಂಬಿಗೆಯು ನಿಧಾನವಾಗಿ ನಿಶ್ಚಲವಾಗುವುದನ್ನು ತೋರಿಸುವ ಮೂಲಕ ಸಾವನ್ನು ಸಾಂಕೇತಿಸಿದ ರೂಪಕ ಮರೆಯಲಾಗದು. ಜಡ್ಡುಗಟ್ಟಿದ ಸಿನಿಮಾರಂಗಕ್ಕೆ ಅಂಬೇಡ್ಕರ್ ಅವರನ್ನು ಸಮರ್ಥವಾಗಿ ತಲುಪಿಸುವ ಮೂಲಕ ನಿರ್ದೇಶಕ ನಾಗ್ರಾಜ ಮಂಜುಲೆ ಅವರು ಭಾರತದ ಜಾತಿ ಸಮಾಜದ ಕ್ರೌರ್ಯಗಳನ್ನು ಹಾಗೂ ಅದು ಒಡ್ಡುತ್ತಿರುವ ಸವಾಲುಗಳನ್ನು ಸೆಲ್ಯೂಲೈಡ್ ಗಳ ಮೂಲಕ ನಿರೂಪಿಸುತ್ತಿದ್ದು, ಕ್ರಿಯಾಶೀಲತೆಯ ಸೈರಟ್ ಸಿನಿಮಾವನ್ನು ರೂಪಿಸಿದ್ದಾರೆ. ಇಂತಹ ಕಲಾತ್ಮಕ ಪ್ರದರ್ಶನಗಳ ಮೂಲಕ ಹೊಸ ಅಲೆಯ ಸಿನಿಮಾ ಕಥೆಗಳು ಅನೇಕ. ಅವುಗಳನ್ನು ಲೇಖಕ ಬಿ.ಶ್ರೀಪಾದ ಭಟ್ ಅವರು ದಾಖಲಿಸಿದ್ದಾರೆ.
ಮೂಲತಃ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನವರು. ವೃತ್ತಿಯಿಂದ ಇಂಜಿನಿಯರ್. ವಿದ್ಯಾರ್ಥಿ ದೆಸೆಯಲ್ಲಿ ಎಂಬತ್ತರ ದಶಕದಲ್ಲಿ ಎಡಪಂಥೀಯ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದರು. ಬಳ್ಳಾರಿಯಲ್ಲಿ ಇಂಜಿನಿಯರಿಂಗ್ ವ್ಯಾಸಂಗದ ಸಂದರ್ಭದಲ್ಲಿ ಎಸ್ ಎಫ್ ಐ ಮತ್ತು ದಲಿತ ಸಂಘರ್ಷ ಸಮಿತಿಯ ಜೊತೆಗೂಡಿ ಪ್ರಗತಿಪರ ಚಳುವಳಿಗಳಲ್ಲಿ ಭಾಗವಹಿಸಿದ್ದರು. ಆಗ ನಡೆದ ವಿಜಯ ನಗರ ಉಕ್ಕು ಕಾರ್ಖಾನೆ ( ಈಗ ಜಿಂದಾಲ್)ಯ ಬೇಡಿಕೆಗಾಗಿ ನಡೆದ ಹೋರಾಟದಲ್ಲಿ ಭಾಗವಹಿಸಿದ್ದರು. ನಂತರ ತೊಂಬತ್ತರ ದಶಕದಲ್ಲಿ ವಿವಿದ ಪ್ರಗತಿಪರ ಸಂಘಟನೆಗಳೊಂದಿಗೆ ತೊಡಗಿಸಿಕೊಂಡಿದ್ದರು. ಆಗ ನಡೆದ ತುಂಗಾ ಉಳಿಸಿ ಹೋರಾಟ, ಜಪಾನ್ ಟೌನ್ ಶಿಪ್ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿದ್ದರು. ನಂತರ ಪರ್ಯಾಯ ...
READ MORE